ಜಮಖಂಡಿ

ಧರ್ಮ ಬೆಳೆಸುವದಕ್ಕೆ ಪ್ರತಿಯೊಬ್ಬರ ಪ್ರಯತ್ನ ಸಹಕಾರ ಅಗತ್ಯ:

ಧರ್ಮ ಬೆಳೆಸುವದಕ್ಕೆ ಪ್ರತಿಯೊಬ್ಬರ ಪ್ರಯತ್ನ ಸಹಕಾರ ಅಗತ್ಯ:

ಜಮಖಂಡಿ 04: ಭಾರತದೇಶದ ಜೀವಾಳವೇ ಧರ್ಮವಾಗಿದೆ. ಧರ್ಮ ಎನ್ನುವ ತಾಯಿಬೇರಿಗೆ ಉತ್ತಮ ನೀರು, ಫಲವತ್ತಾದ ಮಣ್ಣು ಲಭಿಸಿದರೆ ಧರ್ಮವೆಂಬ ಮರ ಬೆಳೆದರೇ ಮಾತ್ರ ಭಾರತ ಹೆಚ್ಚು ಬೆಳೆಯುವ ಮೂಲಕ ವಿಶ್ವಗುರು ಆಗಲು ಸಾಧ್ಯ. ದೇಶದಲ್ಲಿ ಧರ್ಮ ಬೆಳೆಸುವದಕ್ಕೆ ಪ್ರತಿಯೊಬ್ಬರ ಪ್ರಯತ್ನ ಸಹಕಾರ ಅಗತ್ಯವಾಗಿದೆ. ಎಂದು ಶ್ರೀಶೈಲಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ನಗರದ ರಾಯಲ್ ಪ್ಯಾಲೇಶ್ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು,  ಶ್ರೀಶೈಲ ಪೀಠದಲ್ಲಿ ನಡೆಯಲಿರುವ ಧಾಮರ್ಿಕ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ನೀಡಲಾಗಿದೆ. ಆಗಮಿಸುವ ನಿರೀಕ್ಷೆಯಿದೆ. ವಿವಿಧ ಜಗದ್ಗುರುಗಳು, ಸಾವಿರಾರು ಮಠಾಧೀಶರು, ಕನರ್ಾಟಕ ರಾಜ್ಯ ಸಹಿತ 5 ರಾಜ್ಯಗಳ ಮುಖ್ಯಮಂತ್ರಿಗಳು ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೇಶದ ನಾನಾ ಮೂಲೆಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ವಸತಿ, ಪ್ರಸಾದ, ಆರೋಗ್ಯ ಸಹಿತ ಅಗತ್ಯ ಸೌಕರ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದಾಜು 560 ಕೀ.ಮೀ. ಪಾದಯಾತ್ರೆ 33 ದಿನಗಳಲ್ಲಿ ಶ್ರೀಶೈಲ ಕ್ಷೇತ್ರ ತಲುಪಲಿದೆ. ಅತೀ ದೊಡ್ಡ ಅಂತರದ ದೀರ್ಘ ಅವಧಿ ಪಾದಯಾತ್ರೆ ಮೊದಲ ಪಾದಯಾತ್ರೆಯಾಗಿದೆ. ಜಗದ್ಗುರುಗಳು ಪಲ್ಲಕ್ಕಿ ಉತ್ಸವ ಆಚರಣೆ ಬದಲಾಗಿ ಪಾದಯಾತ್ರೆ ಕೈಗೊಂಡಿರುವ ನಿಧರ್ಾರದಿಂದ ಸಹಜವಾಗಿ ಭಕ್ತರಲ್ಲಿ ರೋಮಾಂಚನ ತಂದಿದೆ ಎಂದರು.

ಅಕ್ಟೋಬರ್ 29ರಿಂದ ಆರಂಭಗೊಂಡಿರುವ ಶ್ರೀಶೈಲ ಪಾದಯಾತ್ರೆ ಬೆಳಗಾವಿ ಯಡಿಯೂರ ಕ್ಷೇತ್ರದಿಂದ ಆರಂಭ ವಾಗಿದ್ದು, ಹಿಪ್ಪರಗಿ, ಜಮಖಂಡಿ, ವಿಜಯಪುರ, ತಾಳಿಕೋಟಿ, ರಾಯಚೂರ, ಕರ್ನೂಲ್ ಮಾರ್ಗ ಮೂಲಕ ನವೆಂಬರ್ 30ರಂದು ಆಂದ್ರಪ್ರದೇಶದ ಶ್ರೀಶೈಲಂ ಪಾವನ ಕ್ಷೇತ್ರ ತಲುಪಲಿದೆ. ಜನರಲ್ಲಿ ಧರ್ಮ ಜಾಗೃತಿ ಮತ್ತು ವಸನ ಮುಕ್ತ ಸಮಾಜ ಪರಿಕಲ್ಪನೆ ಮೂಡಿಸುವ ನಿಟ್ಟಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಮಧ್ಯೆ ರಸ್ತೆ ಎರಡು ಬದಿಯಲ್ಲಿ ಸಸಿ ನೆಡುವದು, ಪರಿಸರ ಸಂರಕ್ಷಣೆ ಜಾಗೃತಿ, ಗ್ರಾಮೀಣ ಪ್ರದೇಶದ ರೈತರಲ್ಲಿ ಸಾವಯವ ಕೃಷಿ ಆಸಕ್ತಿ ಬೆಳೆಸುವ ಉಪನ್ಯಾಸ ನಡೆಯಲಿದೆ. ಧರ್ಮದಿಂದ ವಿಮುಖರಾಗುತ್ತಿರುವ ಸಮಾಜವನ್ನು ಧರ್ಮ ಕಡೆಗೆ ತರುವ ಕೆಲಸ ಆಗಬೇಕು. ವಿಧಾಯಕ ಉದ್ದೇಶಗಳನ್ನು ಇಟ್ಟುಕೊಂಡು ಪಾದಾಯಾತ್ರೆ ಆಯೋಜಿಸಲಾಗಿದೆ ಎಂದರು.

ವ್ಯಸನ ಮುಕ್ತ ಗ್ರಾಮ ಮೂಲಕ ವ್ಯಸನ ಮುಕ್ತ ಭಾರತ ನಮ್ಮ ಗುರಿಯಾಗಿದೆ. ದೇಶದ ಮುಖಂಡರಿಗೆ, ನೇತಾರರಿಗೆ ಕಾಂಗ್ರೆಸ್ ಮುಕ್ತ ಭಾರತ, ಜೆಡಿಎಸ್ ಮುಕ್ತ ಭಾರತ, ಬಿಜೆಪಿ ಮುಕ್ತ ಭಾರತ ಹೇಳುವ ಬದಲಾಗಿ ವ್ಯಸನ ಮುಕ್ತ ಭಾರತ ಮಾಡಲು ಕೈಜೋಡಿಸಬೇಕು. ಸಸಿಗಳನ್ನು ದತ್ತು ತೆಗೆದುಕೊಂಡು ಬೆಳಸಿದರೇ ಉತ್ತಮ ಪರಿಸರ ನಿಮರ್ಿಸುವ ಹೂ-ಹಣ್ಣು ನೆರಳು ಮುಂದಿನ ಜನಾಂಗಕ್ಕೆ ಲಭ್ಯವಾಗಲಿದೆ ಎಂದರು.

ಡಿಸೆಂಬರ್ 1 ರಿಂದ ಜನೇವರಿ 10 ರವರೆಗೆ 41 ದಿನಗಳ ವರೆಗೆ ಶ್ರೀಶೈಲ ಕ್ಷೇತ್ರದಲ್ಲಿ ಧಾಮರ್ಿಕ ಅನುಷ್ಠಾನ ನಡೆಯಲಿದೆ. ಒಂದೊಂದು ದಿನ ಒಂದು ಭಾಗದ ಭಕ್ತರಿಗೆ ಅನಕೂಲ ಕಲ್ಪಿಸಲಾಗಿದೆ. 41 ದಿನಗಳವರೆಗೆ ಧಾಮರ್ಿಕ ಅನುಷ್ಠಾನ ನಡೆಯಲಿದೆ. ಮೂರನೇಯ ಹಂತದಲ್ಲಿ ಜನೇವರಿ 11 ರಿಂದ 15ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಧರ್ಮ ಜಾಗೃತಿ ಮಹಾಸಮ್ಮೇಳನ ಮೂಲಕ ಪ್ರಮುಖ 5 ವಿಷಯಗಳ ಕುರಿತು ಚಿಂತನಮಂಥನ ನಡೆಯಲಿದೆ. ಅದರಲ್ಲಿ ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ಶಿವಾಗಮನ ಸಮಾವೇಶ, ಅಖಿಲ ಭಾರತ ವೀರಶೈವ ಮಹಾಸಭಾ ಮಹಾಸಮ್ಮೇಳನ, ಕನ್ನಡ ತೆಲಗು ಮರಾಠಾ ಭಾಷಾ ಭಾಂದವ್ಯ ಉಪನ್ಯಾಸ ಸಹಿತ ಧಾಮರ್ಿಕ ಆಚರಣೆ ಸಂಪ್ರದಾಯ ಮಹತ್ವತೆ, ಧರ್ಮ ರಕ್ಷಣೆ ಕುರಿತು ಧರ್ಮ ಸಭೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಂತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಕೊಣ್ಣೂರ ಹೊರಗಿನ ಮಠದ ಡಾ.ವಿಶ್ವಪ್ರಭುದೇವರು ಸಹಿತ ಹಲವರು ಇದ್ದರು.

 

ಸುದ್ದಿ ಓದಿ