ಅಂತರರಾಷ್ಟ್ರೀಯ

ರಷ್ಯಾದಿಂದ ತೈಲ ಖರೀದಿಸುತ್ತಿರುವ ಯುರೋಪ್ ರಾಷ್ಟ್ರಗಳು!

ರಷ್ಯಾದಿಂದ ತೈಲ ಖರೀದಿಸುತ್ತಿರುವ ಯುರೋಪ್ ರಾಷ್ಟ್ರಗಳು!

ಹೊಸದಿಲ್ಲಿ: ಏಪ್ರಿಲ್ 06: ಉಕ್ರೇನ್ ಆಕ್ರಮಣದ ನಂತರ ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ ಮತ್ತು ಅಮೆರಿಕ, ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವುದಕ್ಕೆ ನಿಷೇಧ ಹೇರಿದೆ. ಆದ್ರೂ ಯುರೋಪಿಯನ್ ರಾಷ್ಟ್ರಗಳು ಕೇಳುತ್ತಿಲ್ಲ. 27 ಯುರೋಪಿಯನ್ ರಾಷ್ಟ್ರಗಳ ಪೈಕಿ 12 ದೇಶಗಳು ರಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿವೆ, ಆದರೆ ಬಾಕಿ ಉಳಿದ ಇನ್ನೂ 15 ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿ ಮಾಡುತ್ತಿವೆ. ರಷ್ಯಾದ ವಿರುದ್ಧ ಆತುರದ ಕ್ರಮಗಳನ್ನು ತೆಗೆದುಕೊಳ್ಳದಂತೆ ಜರ್ಮನಿ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾದ ಮೇಲಿನ ಕಠಿಣ ನಿರ್ಬಂಧಗಳಿಂದ ವಿಶ್ವದ ಆರ್ಥಿಕತೆ ಹಿಂಜರಿತಕ್ಕೆ ತಳ್ಳಬಹುದು ಎಂದು ಭಾವಿಸಲಾಗುತ್ತಿದೆ. ಆದಾಗ್ಯೂ ಪೋಲೆಂಡ್‌ನಂತೆ ಜರ್ಮನಿಯು ಈ ವರ್ಷದ ಅಂತ್ಯದ ವೇಳೆಗೆ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಂಗೇರಿ ಕೂಡ ರಷ್ಯಾದ ಮೇಲಿನ ನಿರ್ಬಂಧಗಳನ್ನು ವಿರೋಧ ಮಾಡುತ್ತಿದೆ. ಅನೇಕ ಯುರೋಪಿಯನ್ ರಾಷ್ಟ್ರಗಳು ತಮ್ಮ ಇಮೇಜ್ ಅನ್ನು ರಕ್ಷಿಸಲು ಅಥವಾ ಸಂಭಾವ್ಯ ಕಾನೂನು ತೊಡಕುಗಳನ್ನು ತಪ್ಪಿಸಲು ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವುದನ್ನು ಸ್ವಯಂಪ್ರೇರಣೆಯಿಂದ ನಿರಾಕರಿಸುತ್ತಿವೆ.

ಹೆಲೆನಿಕ್ ಪೆಟ್ರೋಲಿಯಂ: ಗ್ರೀಸ್‌ನ ಅತಿ ದೊಡ್ಡ ತೈಲ ಸಂಸ್ಕರಣಾಗಾರವು ತನ್ನ ತೈಲ ಬಳಕೆಯ ಶೇಕಡಾ 15 ರಷ್ಟನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ.

ಐಎಸ್ಎಬಿ: ಇಟಲಿಯ ಅತಿದೊಡ್ಡ ಸಂಸ್ಕರಣಾಗಾರವು ರಷ್ಯಾ, ಇಲ್ಲವೇ ಇತರೆ ರಾಷ್ಟ್ರಗಳಿಂದ ತೈಲ ಖರೀದಿ ಮಾಡಲು ಚಿಂತಿಸುತ್ತಿದೆ.

ಲೂನಾ: ಪೂರ್ವ ಜರ್ಮನ್ ಕಂಪನಿಯು ಡ್ರುಜ್ಬಾ ಪೈಪ್‌ಲೈನ್‌ನಿಂದ ಕಚ್ಚಾ ತೈಲವನ್ನು ಖರೀದಿಸುತ್ತದೆ.
ಮಿರೊ: ಜರ್ಮನಿಯ ಅತಿದೊಡ್ಡ ಕಂಪನಿ ತನ್ನ ತೈಲ ಬಳಕೆಯಲ್ಲಿ ಶೇಕಡ 14ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ.
ಎಂಒಎಲ್: ಕ್ರೊಯೇಷಿಯಾ, ಹಂಗೇರಿ ಮತ್ತು ಸ್ಲೋವಾಕಿಯಾದಲ್ಲಿ ಮೂರು ಸಂಸ್ಕರಣಾಗಾರಗಳನ್ನು ನಿರ್ವಹಿಸುವ ಕಂಪನಿಯು ಡ್ರುಜ್ಬಾ ಪೈಪ್‌ಲೈನ್‌ನಿಂದ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿದೆ.
ನೈರಾ ಎನರ್ಜಿ: ರಷ್ಯಾದ ರೋಸ್ ನೆಪ್ಟ್ ಒಡೆತನದ ಭಾರತೀಯ ಖಾಸಗಿ ರಿಫೈನರ್ ಒಂದು ವರ್ಷದ ನಂತರ 1.8 ಮಿಲಿಯನ್ ಬ್ಯಾರೆಲ್ ಖರೀದಿಸಿದೆ.
ಪರ್ಟಾಮಿನಾ: ಇಂಡೋನೇಷ್ಯಾದ ಸರ್ಕಾರಿ ಸ್ವಾಮ್ಯದ ಕಂಪನಿಯು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಲು ಚಿಂತಿಸುತ್ತಿದೆ.
ಪಿಕೆಎನ್ ಓರ್ಲೆನ್: ಪೋಲಿಷ್ ಸಂಸ್ಕರಣಾಗಾರವು ಹಳೆಯ ಒಪ್ಪಂದಗಳ ಅಡಿಯಲ್ಲಿ ಖರೀದಿಸುತ್ತಿದೆ.
ಹಂಗೇರಿ: ರಷ್ಯಾದ ತೈಲ ಮತ್ತು ಅನಿಲದ ಮೇಲಿನ ನಿರ್ಬಂಧಗಳನ್ನು ವಿರೋಧಿಸುತ್ತದೆ.
ಈ ಮಧ್ಯೆ ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ಬೆದರಿಕೆಗೆ ಮಣಿಯದೆ ಭಾರತ ಮತ್ತು ಚೀನಾ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿವೆ. ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ರಷ್ಯಾದ ಕಂಪನಿಗಳು ಆಫರ್ ನೀಡಿರುವ ಹಿನ್ನೆಲೆಯಲ್ಲಿ ಭಾರತವು ಫೆಬ್ರವರಿ ಅಂತ್ಯದಲ್ಲಿ ಕನಿಷ್ಠ 13 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ. 2021 ರಲ್ಲಿ 16 ಮಿಲಿಯನ್ ಬ್ಯಾರೆಲ್ ತೈಲವನ್ನು ಭಾರತ ಖರೀದಿ ಮಾಡಿತ್ತು.
ಇಂಡಿಯನ್ ಆಯಿಲ್: ಮಾರ್ಚ್ 23 ರಂದು ಅಗ್ರ ದೇಶೀಯ ಕಂಪನಿಯು ಮೇ ವಿತರಣೆಗಾಗಿ 3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿತು. ಫೆಬ್ರವರಿ 24 ರಂದು ಉಕ್ರೇನ್ ಆಕ್ರಮಣದ ನಂತರ ಇದು ಎರಡನೇ ಖರೀದಿಯಾಗಿದೆ.

ಭಾರತ ಹಾಗೂ ಚೀನಾ ರಷ್ಯಾದಿಂದ ಖರೀದಿ

ಹಿಂದೂಸ್ತಾನ್ ಪೆಟ್ರೋಲಿಯಂ: ಭಾರತೀಯ ರಿಫೈನರಿ ಕಂಪನಿಯು ಮೇ ವಿತರಣೆಗಾಗಿ 2 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಒಪ್ಪಂದ ಮಾಡಿಕೊಂಡಿದೆ.

ಸುದ್ದಿ ಓದಿ