ಖಾನಾಪುರ

ಖಾನಾಪುರ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಉದ್ದಿಮೆಶೀಲತೆ ತರಬೇತಿ

ಖಾನಾಪುರ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಉದ್ದಿಮೆಶೀಲತೆ ತರಬೇತಿ

ಲೋಕದರ್ಶನ ವರದಿ 


ಖಾನಾಪುರ 27: ಮಹಿಳೆಯರು ಸ್ವಾವಲಂಬನೆ ಹೊಂದಬೇಕಾದರೆ ಸ್ವ ಉದ್ಯೋಗ ಮಾಡಿದರೆ ಮಾತ್ರ ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಹೇಳಿದರು. 

ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಖಾನಾಪುರದ ಸ್ವ ಉದ್ಯೋಗ ಮಾಡುವ ಮಹಿಳೆಯರನ್ನು ಗುರುತಿಸಿ ಅವರ ಉದ್ಯೋಗ ಮಾಡಲು ಇರಬೇಕಾದ ಗುಣಲಕ್ಷಣಗಳ ಕುರಿತು ಶಹನಾಯಿ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಉದ್ದಿಮೆಶೀಲತಾ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಒಬ್ಬ ವ್ಯಕ್ತಿ ಸ್ವ ಇಚ್ಚೆಯಿಂದ ಮತ್ತು ಸದೃಢವಾಗಿ ಬೆಳೆಯಲು ಉದ್ಯೋಗ ತುಂಬಾ ಮುಖ್ಯ. ನಿಮ್ಮಲ್ಲಿ ಇರುವ ಉದ್ಯೋಗ ಅಭಿವೃದ್ಧಿ ಹೊಂದಬೇಕಾದರೆ ಜ್ಞಾನ ತಿಳುವಳಿಕೆ ಕೌಶಲ್ಯ ಅನುಭವ ತುಂಬಾ ಮುಖ್ಯ ಆದ ಕಾರಣ ನಮ್ಮೆಲ್ಲರ ಅಭಿವೃದ್ಧಿ ಹೆಚ್ಚಿಸುವ ನಿಟ್ಟಿನಲ್ಲಿ ಮಾತೋಶ್ರೀ ಹೇಮಾವತಿ ಅಮ್ಮನವರು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

ಯೋಜನಾಧಿಕಾರಿ ಸಂದೀಪ. ಡಿ ಸ್ವಾಗತಿಸಿದರು. ಪ್ರಾದೇಶಿಕ ಕಚೇರಿಯ ಆಡಳಿತ ಯೋಜನಾಧಿಕಾರಿ ಪ್ರಾದೇಶಿಕ ಕಚೇರಿಯ ಹಿರಿಯ ಸಮನ್ವಯಾಧಿಕಾರಿ ಗೀತಾ. ಎಸ್ ತಾಲೂಕು ಸಮನ್ವಯಧಿಕಾರಿ ಮಂಜುಳಾ ಮೇಲ್ವಿಚಾರಕಿ ನಿರ್ಮಲ ಹಸನ ಹಾಗೂ ಸೇವಾ ಪ್ರತಿನಿಧಿ ಶೈಲಾ ಪ್ರಿಯ ಹಾಗೂ ಸುಮಾರು ಇಪ್ಪತ್ತೈದು ಜ್ಞಾನ ವಿಕಾಸ ಕೇಂದ್ರದ ಸದಸ್ಯರುಗಳು ಭಾಗವಹಿಸಿದ್ದರು. 


ಸುದ್ದಿ ಓದಿ