ಅಂತರರಾಷ್ಟ್ರೀಯ

ಯುರೋಪ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕದ ಅಂತ್ಯ ಸಾಧ್ಯತೆ : WHO

ಯುರೋಪ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕದ ಅಂತ್ಯ ಸಾಧ್ಯತೆ : WHO

ಕೋಪನ್ ಹ್ಯಾಗನ್: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಗೆ, ಕೋವಿಡ್ -19 ರ ಒಮೈಕ್ರಾನ್ ರೂಪಾಂತರವು ಯುರೋಪಿಯನ್ ರಾಷ್ಟ್ರಗಳಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. “ಈ ಪ್ರದೇಶವು ಒಂದು ರೀತಿಯ ಸಾಂಕ್ರಾಮಿಕ ರೋಗದ ಅಂತ್ಯದತ್ತ ಸಾಗುತ್ತಿರುವುದು ಶ್ಲಾಘನೀಯ” ಎಂದು ಅವರು ತಿಳಇಸಿದ್ದಾರೆ.

ಆದಾಗ್ಯೂ, ಒಮೈಕ್ರಾನ್ ಮಾರ್ಚ್ ವೇಳೆಗೆ ಶೇಕಡಾ 60ರಷ್ಟು ಯುರೋಪಿಯನ್ನರಿಗೆ ಸೋಂಕು ತಗುಲಿಸಬಹುದು ಎಂದು ಹೇಳಿದ ಅವರು, “ಒಮೈಕ್ರಾನ್‌ನ ಹರಡುವಿಕೆ ಪ್ರಮಾಣ ಯುರೋಪಿನಾದ್ಯಂತ ಕಡಿಮೆಯಾದರೆ, ಜಾಗತಿಕ ರೋಗ ನಿರೋಧಕ ಶಕ್ತಿಯು ಕೆಲವು ವಾರಗಳಲ್ಲಿ ಅಭಿವೃದ್ಧಿಗೊಳ್ಳುತ್ತದೆ. ಕೋವಿಡ್ -19 ಕೊನೆಗೊಳ್ಳುವ ಮೊದಲು, ವರ್ಷದ ಅಂತ್ಯದ ವೇಳೆಗೆ ಮತ್ತೊಂದು ಅಲೆಯಾಗಿ ಪರಿವರ್ತಿತವಾಗಬಹುದಾಗಿದೆ. ಆದರೆ ಸಾಂಕ್ರಾಮಿಕವು ಹಿಂತಿರುಗುವ ಸಾಧ್ಯತೆ ಇಲ್ಲ ಎಂಬ ನಂಬಿಕೆ ಇದೆ ಹೇಳಿದರು.

ಅಮೆರಿಕದ ಉನ್ನತ ವಿಜ್ಞಾನಿ ಆಂಥೋನಿ ಫೌಸಿ ಕೂಡ ಇದೇ ರೀತಿಯಾಗಿ ಹೇಳಿದ್ದಾರೆ. “ಈ ವಾರ ಯುನೈಟೆಡ್ ಸ್ಟೇಟ್ಸ್‌ನ ಕೆಲವು ಭಾಗಗಳು ಕೋವಿಡ್-19 ಪ್ರಕರಣಗಳಲ್ಲಿ ಕ್ಷಿಪ್ರ ಇಳಿಕೆಯನ್ನು ಕಂಡಿವೆ, ಇದು ಒಳ್ಳೆಯ ಸಂಕೇತವಾಗಿದೆ” ಎಂದು ಹೇಳಿದ್ದಾರೆ. ಆದಾಗ್ಯೂ, ಅತಿಯಾದ ಆತ್ಮವಿಶ್ವಾಸದ ವಿರುದ್ಧ ಎಚ್ಚರಿಕೆ ನೀಡುತ್ತಾ ಯುಎಸ್ ಈಶಾನ್ಯದಂತಹ ಪ್ರದೇಶಗಳಲ್ಲಿ ಇತ್ತೀಚೆಗೆ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಲಿದೆ. ಇದು ಅಮೆರಿಕದಾದ್ಯಂತ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಸುದ್ದಿ ಓದಿ