ಸೌಂದತ್ತಿ

ಅಂಬೇಡ್ಕರರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಕಾಳಪ್ಪನವರ

ಅಂಬೇಡ್ಕರರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಕಾಳಪ್ಪನವರ

ಉಗರಗೋಳ 14: ಸಂವಿಧಾನ ಶಿಲ್ಪಿ ಡಾ, ಬಾಬಾಸಾಹೇಬ ಅಂಬೇಡ್ಕರ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಾಯ್ ವಾಯ್ ಕಾಳಪ್ಪನವರ ಹೇಳಿದರು. 

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಮಂಡಳ ಸವದತ್ತಿ ವತಿಯಿಂದ  ಡಾ, ಬಿ ಆರ್ ಅಂಬೇಡ್ಕರ್ ಅವರ 131 ನೇ ಜಯಂತಿಯನ್ನು ಡಾ, ಅಂಬೇಡ್ಕರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 

ಪ್ರತಿಯೊಬ್ಬ ವಿದ್ಯಾರ್ಥಿ-ವಿಧ್ಯಾರ್ಥಿನಿಗಳು ಜ್ಞಾನ ಸಂಪಾದನೆಯನ್ನು ಮಾಡಿಕೊಂಡು ಬಲಾಢ್ಯ ಭಾರತವನ್ನಾಗಿಸಬೇಕು ಮತ್ತು ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು, ನೊಂದವರ ಸಂಕಷ್ಟಕ್ಕೆ ಮಿಡಿಯಬೇಕು. ಆಗ ಸ್ವಸ್ಥ ಸುಂದರ ಸಮಾಜ ನಿರ್ಮಿಸಲು ಸಾದ್ಯವೆಂದರು. 

ವಿ ಆರ್ ಬೇವಿನಗಿಡದ, ಪಿ ಆರ್ ಬಸಲಿಂಗನವರ, ರಾಜು ಬಡೆಪ್ಪನವರ, ಆನಂದ ಕಲ್ಲೋಳ್ಳಿ, ರಾಮು ಕಾಳಪ್ಪನವರ, ಮಹೇಶ ಕಾಳಪ್ಪನವರ, ಬಸವರಾಜ ಬಡೆಪ್ಪನವರ, ಪಿ ಎನ್ ಬಸಲಿಂಗನವರ, ಗೋಪಾಲ ಈರಗಾರ, ಪ್ರಕಾಶ ಮ್ಯಾಗೇರಿ, ಕಾಂತು ಮ್ಯಾಗೇರಿ ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ