ಚುನಾವಣೆ ವಿವಾದ; ಭದ್ರತಾ ನಿರ್ದೇಶಕ ಕ್ರೆಬ್ಸ್ ವಜಾ ಮಾಡಿದ ಟ್ರಂಪ್
ವಾಷಿಂಗ್ಟನ್, 18: ಈ ವರ್ಷದ ಅಧ್ಯಕ್ಷೀಯ ಚುನಾವಣೆಯ ಮತಚಲಾವಣೆಯಲ್ಲಿ ವಂಚನೆ- ಆಕ್ರಮ ನಡೆದಿರುವುದಕ್ಕೆ ಯಾವ ಆಧಾರವಿಲ್ಲ ಎಂದು ಹೇಳಿ
ಆಡಳಿತಗಾರರ ಕೆಂಗಣ್ಣಿಗೆ ಗುರಿಯಾಗಿದ್ದ ಅಮೆರಿಕ ಸೈಬರ್ ಸೆಕ್ಯುರಿಟಿ ಮತ್ತು ಇನ್ಫ್ರಾಸ್ಟ್ರಕ್ಚರ್
ಸೆಕ್ಯುರಿಟಿ ಏಜೆನ್ಸಿ (ಸಿಐಎಸ್ಎ) ನಿರ್ದೇಶಕ ಕ್ರಿಸ್ ಕ್ರೆಬ್ಸ್ ಅವರನ್ನು ಹುದ್ದೆಯಿಂದಲೇ ವಜಾ ಮಾಡಲಾಗಿದೆ.
ಈ ವಿಚಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ."2020 ರ ಚುನಾವಣೆಯ ಸುರಕ್ಷತೆಯ ಬಗ್ಗೆ ಕ್ರಿಸ್ ಕ್ರೆಬ್ಸ್ ಅವರು ಇತ್ತೀಚೆಗೆ ನೀಡಿ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಚುನಾವಣೆಯಲ್ಲಿ ಭಾರಿ ಪ್ರಮಾಣದ ಅಕ್ರಮಗಳು ಮತ್ತು ವಂಚನೆಗಳು ನಡೆದಿವೆ ಚುನಾವಣಾ ವೀಕ್ಷಕರಿಗೆ ಮತಕೇಂದ್ರಗಳಿಗೆ ಹೋಗಲು ಅವಕಾಶವಿಲ್ಲ, ಮತ ಯಂತ್ರಗಳಲ್ಲಿ 'ತೊಂದರೆಗಳಿದ್ದವು ಎಂದೂ ಟ್ರಂಪ್ ದೂರಿದ್ದಾರೆ.
ಈ ಹಿನ್ನಲೆಯಲ್ಲಿ ಕ್ರಿಸ್ ಕ್ರೆಬ್ಸ್‌ರನ್ನು ಸೈಬರ್ ಸೆಕ್ಯುರಿಟಿ ಮತ್ತು ಇನ್ಫ್ರಾಸ್ಟ್ರಕ್ಚರ್ ಸೆಕ್ಯುರಿಟಿ ಏಜೆನ್ಸಿಯ ನಿರ್ದೇಶಕ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಟ್ರಂಪ್ ಮಂಗಳವಾರ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಕಳೆದ
ವಾರ, ಕ್ರೆಬ್ಸ್ ಇತರ ರಾಜ್ಯ ಮತ್ತು ಖಾಸಗಿ ಚುನಾವಣಾ ಅಧಿಕಾರಿಗಳೊಂದಿಗೆ, ಮಾತನಾಡುತ್ತಾ ಮತದಾನ ವ್ಯವಸ್ಥೆಯಲ್ಲಿ ಮತಗಳನ್ನು ಅಳಿಸಿಹಾಕಿ, ಮತಗಳನ್ನು ಬದಲಾಯಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ
ಎಂದು ಹೇಳಿದ್ದೇ ಅವರಿಗೆ ಮುಳುವಾಗಿದೆ.