ಅಂತರರಾಷ್ಟ್ರೀಯ

ಬಾಂಗ್ಲಾದೇಶದಲ್ಲಿ ಭೀಕರ ರಸ್ತೆ ಅಪಘಾತ: ಎಂಟು ಮಂದಿ ಸಾವು

ಬಾಂಗ್ಲಾದೇಶದಲ್ಲಿ ಭೀಕರ ರಸ್ತೆ ಅಪಘಾತ: ಎಂಟು ಮಂದಿ ಸಾವು

ಢಾಕಾ, ಆಗಸ್ಟ್ 18: ಬಾಂಗ್ಲಾದೇಶದ ಮೈಮೆನ್ಸಿಂಗ್ನ ಫುಲ್ಪುರ ಬಳಿ ಮಂಗಳವಾರ ಬೆಳಿಗ್ಗೆ ಮಿನಿ ಬಸ್ ವೊಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ. 

ಈ ಘಟನೆ ಮಂಗಳವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ ಸುಮಾರು 7.45ಕ್ಕೆ ನಡೆದಿದೆ. ಮೃತರು ಮತ್ತು ಗಾಯಗೊಂಡವರನ್ನು ಇನ್ನೂ ಗುರುತಿಸಲಾಗಿಲ್ಲ. 

ಮೈಮೆನ್ಸಿಂಗ್ ಅಗ್ನಿಶಾಮಕ ಸೇವೆಯ ಉಪನಿದರ್ೆಶಕ ಪನ್ನತ್ ಈ ಘಟನೆಯನ್ನು ಯುಎನ್ಐಗೆ ದೃಢಪಡಿಸಿದ್ದಾರೆ. 

ಮಿನಿ ಬಸ್ ಮೈಮೆನ್ಸಿಂಗ್ನ ಭಲುಕಾದಿಂದ ಶೆಪುರದ ನಲಿತಾಬರಿ ಕಡೆ ಪ್ರಯಾಣಿಸುತ್ತಿತ್ತು ಎಂದು ಫುಲ್ಪುರ್ ಪೊಲೀಸ್ ಠಾಣೆಯ ಮುಖ್ಯಸ್ಥ ಇಮರತ್ ಹೊಸೈನ್ ಗಾಜಿ ಹೇಳಿದ್ದಾರೆ. 

ಫುಲ್ಪುರ್-ಶೆಪುರ್ ಹೆದ್ದಾರಿಯ ಬಶತಿ ಸಮೀಪ ರಸ್ತೆಯಿಂದ ಜಾರಿ ಹಳ್ಳಕ್ಕೆ ಉರುಳಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ನಜ್ಜುಗಜ್ಜಾಗಿದ್ದ ಬಸ್ನಿಂದ ಹೊರತೆಗೆದಿದ್ದಾರೆ. 

 

ಸುದ್ದಿ ಓದಿ