ಅಂತರರಾಷ್ಟ್ರೀಯ

ಮುಂದಿನ ವರ್ಷ ಹವಾಮಾನ ಶೃಂಗಸಭೆ ಈಜಿಪ್ಟ್ ಆಯೋಜಿಸಲಿದೆ: ಫಿನ್‌ಲ್ಯಾಂಡ್‌

ಮುಂದಿನ  ವರ್ಷ  ಹವಾಮಾನ  ಶೃಂಗಸಭೆ  ಈಜಿಪ್ಟ್ ಆಯೋಜಿಸಲಿದೆ: ಫಿನ್‌ಲ್ಯಾಂಡ್‌

ಹೆಲ್ಸಿಂಕಿ, ನ 14 -  ಮುಂದಿನ  ವಿಶ್ವಸಂಸ್ಥೆಯ  ಹವಾಮಾನ    ಶೃಂಗಸಭೆ,     ಕಾಪ್‌ 27  2022 -  ಸಮ್ಮೇಳನ    ಈಜಿಪ್ಟ್‌ನಲ್ಲಿ   ನಡೆಯಲಿದೆ ಎಂದು  ಫಿನ್‌ಲ್ಯಾಂಡ್‌ನ ಪರಿಸರ ಸಚಿವಾಲಯ ತಿಳಿಸಿದೆ.
"ಮುಂದಿನ  ಹವಾಮಾನ  ಶೃಂಗಸಭೆ   ಈಜಿಪ್ಟ್‌ನಲ್ಲಿ  ಒಂದು  ವರ್ಷದ  ಅವಧಿಯಲ್ಲಿ ನಡೆಯಲಿದೆ" ಎಂದು ಸಚಿವಾಲಯ    ಶನಿವಾರ ಹೇಳಿದೆ,      ಶರ್ಮ್ ಎಲ್-ಶೇಖ್‌ನ    ಕೆಂಪು  ಸಮುದ್ರ   ರೆಸಾರ್ಟ್‌ನಲ್ಲಿ  ಶೃಂಗಸಭೆ  ನಡೆಯಲಿದೆ  ಎಂದು  ಹೇಳಿದೆ.

ಕಾಪ್‌  -   26    ಹವಾಮಾನ ಶೃಂಗಸಭೆ   ಸ್ಕಾಟಿಷ್ ನಗರ     ಗ್ಲಾಸ್ಗೋದಲ್ಲಿ  ಕಳೆದ    ಅಕ್ಟೋಬರ್ 31ರಿಂದ  ನವೆಂಬರ್ 12 ರವರೆಗೆ    ನಡೆಯಿತು.     ಹಸಿರುಮನೆ   ಇಂಗಾಲ  ಹೊರಸೂಸುವಿಕೆ  ಕಡಿತ, ಇಂಗಾಲದ ತಟಸ್ಥತೆ,  ಜಾಗತಿಕ ತಾಪಮಾನ ಹಾಗೂ   ಹವಾಮಾನದ  ಕುರಿತು  2015ರ    ಪ್ಯಾರಿಸ್ ಒಪ್ಪಂದ   ನಿಗದಿಪಡಿಸಿದ   ಗುರಿಗಳನ್ನು ತಲುಪಲು    ದೇಶಗಳ    ಅರ್ಥಪೂರ್ಣ ಬದ್ಧತೆಗೆ   ನೆರವಾಗುವಂತೆ   ಶೃಂಗಸಭೆ  ಆಯೋಜಿಸಲಾಗಿತ್ತು.  ಹಣಕಾಸು.  ಕಲ್ಲಿದ್ದಲು ಬಳಕೆಯನ್ನು    ಹಂತ ಹಂತವಾಗಿ  ಸ್ಥಗಿತಗೊಳಿಸುವುದು, ಪಳೆಯುಳಿಕೆ ಇಂಧನಕ್ಕೆ ಸಬ್ಸಿಡಿ   ಕೊನೆಗೊಳಿಸುವುದು   ಹಾಗೂ   ಹವಾಮಾನ ಹಣಕಾಸು  ಅಂಶಗಳನ್ನು ಸಮ್ಮೇಳನದಲ್ಲಿ ಚರ್ಚಿಸಲಾಯಿತು.
ಅಮೆರಿಕಾ   ಅಧ್ಯಕ್ಷರ   ವಿಶೇಷ   ಪ್ರತಿನಿಧಿ ಜಾನ್ ಕೆರ್ರಿ ಮುಂದಿನ  (COP-  27) ಹವಾಮಾನ  ಶೃಂಗಸಭೆ   ಆಯೋಜಿಸಲು   ಈಜಿಪ್ಟ್   ದೇಶವನ್ನು   ನಾಮಿನಿಯಾಗಿ ಆಯ್ಕೆ  ಮಾಡಲಾಗಿದೆ ಎಂದು ಅಕ್ಟೋಬರ್ ಆರಂಭದಲ್ಲಿಯೇ   ಪ್ರಕಟಿಸಿದ್ದರು.

ಸುದ್ದಿ ಓದಿ