ಅಂತರರಾಷ್ಟ್ರೀಯ

ಈಕ್ವೆಡಾರ್;‌ ಜೈಲಿನಲ್ಲಿ ಘರ್ಷಣೆ.. 68 ಕೈದಿಗಳ ಸಾವು

ಈಕ್ವೆಡಾರ್;‌    ಜೈಲಿನಲ್ಲಿ  ಘರ್ಷಣೆ..  68 ಕೈದಿಗಳ ಸಾವು

ಕ್ವಿಟೊ, ನ 15 - ಈಕ್ವೆಡಾರ್‌  ದೇಶದ    ಜೈಲಿನಲ್ಲಿ   ಎರಡು   ಗ್ಯಾಂಗ್‌ಗಳ  ನಡುವೆ     ನಡೆದ    ಭೀಕರ ಘರ್ಷಣೆಯಲ್ಲಿ     68 ಕೈದಿಗಳು ಸಾವನ್ನಪ್ಪಿದ್ದಾರೆ.   ಇನ್ನೂ 25 ಮಂದಿ  ಗಾಯಗೊಂಡಿದ್ದಾರೆ.  ಕರಾವಳಿ    ನಗರವಾದ  ಗುವಾಕ್ವಿಲ್ ನಲ್ಲಿ  ಈ    ಘಟನೆ   ನಡೆದಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತರಾಷ್ಟ್ರೀಯ  ಡ್ರಗ್ಸ್ ಗ್ಯಾಂಗ್ ಜೊತೆ   ಸಂಬಂಧ   ಹೊಂದಿರುವ  ಎರಡು ತಂಡಗಳ  ನಡುವೆ ಸುಮಾರು 8 ಗಂಟೆಗಳ ಕಾಲ ಘರ್ಷಣೆ ನಡೆದಿದೆ.  ಬಂದೂಕುಗಳಿಂದ ಗುಂಡಿನ ದಾಳಿ  ನಡೆದಿದೆ  ಎಂದು ವರದಿಯಾಗಿದೆ. ಕೊನೆಗೂ  ಮಧ್ಯ ಪ್ರವೇಶಿಸಿದ   ಜೈಲು  ಅಧಿಕಾರಿಗಳು  ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಸುದ್ದಿ ಓದಿ