ಅಂತರರಾಷ್ಟ್ರೀಯ

ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾದಿಂದ ಭಾರತಕ್ಕೆ ಬಂದ ಕುಟುಂಬ

ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾದಿಂದ ಭಾರತಕ್ಕೆ ಬಂದ ಕುಟುಂಬ

ನವದೆಹಲಿ: ಏಪ್ರಿಲ್ ೦೮ : ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ಶ್ರೀಲಂಕಾದಿಂದ ಪಲಾಯನಗೈದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಕುಟುಂಬ ಶುಕ್ರವಾರ ಬೆಳಗ್ಗೆ ರಾಮೇಶ್ವರಂನ ಧನುಷ್ಕೋಡಿಗೆ ಬಂದಿಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಡೀ ಕುಟುಂಬವನ್ನು ಮಂಡಪಂ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ. ರಾಜ್ಯ ಗುಪ್ತಚರ ಮತ್ತು ಕೇಂದ್ರ ಏಜೆನ್ಸಿಗಳು ತಮ್ಮ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಮುಂದಿನ ಕ್ರಮಗಳನ್ನು ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ತಿಂಗಳು ಎರಡು ದೋಣಿಗಳಲ್ಲಿ ಸುಮಾರು 16 ಜನರು ರಾಮೇಶ್ವರಂ ತಲುಪಿದ್ದಾರೆ, ಎಲ್ಲರೂ ಜಾಫ್ನಾ ದಕ್ಷಿಣದ ಮನ್ನಾರ್ ನಿಂದ ಬಂದವರು ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದರು.

ಶುಕ್ರವಾರ ಬೆಳಗ್ಗೆ, ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಕನಿಷ್ಠ 15 ನಿರಾಶ್ರಿತರನ್ನು ಶ್ರೀಲಂಕಾ ನೌಕಾಪಡೆ ಗುರುವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದೆ ಎಂದು ಮನ್ನಾರ್‌ನ ಮೂಲಗಳು ತಿಳಿಸಿವೆ.

ಸುದ್ದಿ ಓದಿ