ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪನ
ಅಂಡಮಾನ್ ಸೆ, 25 ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ರಾತ್ರಿ ಭೂಕಂಪನ ಸಂಭವಿಸಿದೆ. ಸದ್ಯ ಯಾವುದೆ ಹಾನಿಯ ಬಗ್ಗೆ ವರದಿಯಾಗಿಲ್ಲ . ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.2 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ಹೇಳಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಉತ್ತರಕ್ಕೆ 246 ಕಿ.ಮೀ ಕ್ಯಾಂಪ್ ಬೆಲ್ ಕೊಲ್ಲಿಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಎನ್ ಸಿಎಸ್ ಟ್ವೀಟ್ ನಲ್ಲಿ ತಿಳಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪದೆ, ಪದೇ ಭೂಕಂಪನ ಸಂಭವಿಸುತ್ತಿರುತ್ತದೆ. ಈ ಹಿಂದೆ ಇದೇ 22 ರಂದು ಭೂಮಿ ಕಂಪಿಸಿದ ಅನುಭವವಾಗಿತ್ತು.