ಟರ್ಕಿ ಭೂಕಂಪ: ಮೃತರ ಸಂಖ್ಯೆ 102ಕ್ಕೆ ಏರಿಕೆ, ಒಂದು ಸಾವಿರ ಮಂದಿಗೆ ಗಾಯ
ಅಂಕಾರ, ನವೆಂಬರ್ 03: ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ
ಮೃತಪಟ್ಟವರ ಸಂಖ್ಯೆ 102 ಕ್ಕೆ ಏರಿಕೆಯಾಗಿದೆ. ಒಂದು
ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು
ವಿಪತ್ತು ಮತ್ತು ತುರ್ತುಸ್ಥಿತಿ ನಿರ್ವಹಣಾ ಪ್ರಾಧಿಕಾರ (ಎಎಫ್‌ಎಡಿ) ಮಂಗಳವಾರ ತಿಳಿಸಿದೆ.
ಭೂಕಂಪದಿಂದಾಗಿ ಸೋಮವಾರ 100 ಜನರು ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಭೂಕಂಪದಲ್ಲಿ 102 ಜನರು ಸಾವನ್ನಪ್ಪಿದ್ದಾರೆ, 1,026 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇತ್ತೀಚಿನ ಮಾಹಿತಿಯು ಸೂಚಿಸುತ್ತದೆ" ಎಂದು ಪ್ರಾಧಿಕಾರ ತಿಳಿಸಿದೆ.
ಟರ್ಕಿಯ ಪಶ್ಚಿಮ ಭಾಗದಲ್ಲಿ ಶುಕ್ರವಾರ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.