'ಗತವೈಭವ'ದ ಶಿಪ್ ಸಾಂಗ್ ರೀಲೀಸ್ ಮಾಡಿದ ಶಿವಣ್ಣ
Dushyant-Aashika movie to release on November 14th
ನವೆಂಬರ್ 14ಕ್ಕೆ ದುಶ್ಯಂತ್-ಆಶಿಕಾ ಸಿನಿಮಾ ತೆರೆಗೆ
'ಗತವೈಭವ' ಚಿತ್ರದ ಮೂಲಕ ಫ್ಯಾಂಟಸಿ ಮೈಥಾಲಜಿ ರೋಮ್ಯಾಂಟಿಕ್ ಲವ್ ಸ್ಟೋರಿ ಹೇಳೋದಿಕ್ಕೆ ಹೊರಟಿದ್ದಾರೆ ನಿರ್ದೇಶಕ ಸಿಂಪಲ್ ಸುನಿ. ನವ ಪ್ರತಿಭೆ ದುಶ್ಯಂತ್ ನಾಯಕನಾಗಿ ಆಶಿಕಾ ರಂಗನಾಥ್ ನಾಯಕಿ ಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ತನ್ನ ಕಂಟೆಂಟ್ ಮೂಲಕ ನೀರೀಕ್ಷೆ ಹೆಚ್ಚಿಸಿರುವ ಈ ಸಿನಿಮಾ ನವೆಂಬರ್ 14ಕ್ಕೆ ತೆರೆಗೆ ಬರ್ತಿದೆ. ಸದ್ಯ 'ಗತವೈಭವ' ಚಿತ್ರದ ಪ್ರಚಾರ ಕೆಲಸ ಭರದಿಂದ ಸಾಗಿದ್ದು, ಅದರ ಭಾಗವಾಗಿ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶಿಪ್ ಸಾಂಗ್‌ನ್ನು ನಟ ಶಿವರಾಜ್‌ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ, 'ಗತವೈಭವ ಶೂಟಿಂಗ್ ಸೆಟ್‌ಗೆ ಒಮ್ಮೆ ಹೋಗಿದ್ದೆ. ತುಂಬಾ ಇಷ್ಟವಾಗಿತ್ತು. ಸಿಂಪಲ್ ಸುನಿ ಅವರ ಯೋಚನೆ ಚಿಕ್ಕದಿದ್ದರೂ ಸಿನಿಮಾ ನೋಡುವಾಗ ಅದು ದೊಡ್ಡದಾಗಿ ಕಾಣಿಸುತ್ತದೆ. ಅವರ ಚಿತ್ರಗಳಲ್ಲಿ ಕಮರ್ಷಿಯಲ್, ಜೀವನದ ಮೌಲ್ಯ, ಮೇಕಿಂಗ್, ಇಂದಿನ ಟ್ರೆಂಡ್‌ಗೆ ತಕ್ಕಂತೆ ಅಚ್ಚುಕಟ್ಟಾಗಿ ಮಾಡುತ್ತಾರೆ. ಒಬ್ಬ ಅಣ್ಣನಾಗಿ ಅವರ ಸಿನಿಮಾ ಹಿಟ್ ಆಗಲಿ. ಮನೋಹಕ ಸಿನಿಮಾ ಆಗುತ್ತದೆ. ಅದು ಅಮೇಜಿಂಗ್ ಸಿನಿಮಾ ಆಗುತ್ತದೆ. ಗತವೈಭವ ಚಿತ್ರದ ನಿರ್ಮಾಪಕರಿಗೆ ಧನ್ಯವಾದ ಹೇಳಬೇಕು. ನಂಬಿಕೆ ಇಟ್ಕೊಂಡು ಹಣ ಹಾಕಿದ್ದಾರೆ. ದುಶ್ಯಂತ್ ಅವರದ್ದು ಮೊದಲ ಸಿನಿಮಾ ಅನಿಸುವುದಿಲ್ಲ. ಅವರು ಮಾಡಿರುವುದು ಸುಲಭದ ಪಾತ್ರವಲ್ಲ. ಮೊದಲ ಚಿತ್ರದಲ್ಲಿ ಒಳ್ಳೆ ಟ್ಯಾಲೆಂಟ್ ತೋರಿಸಿದ್ದಾರೆ. ಮ್ಯೂಸಿಕ್, ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ. ಆಶಿಕಾ ಮೊದಲು ಹೇಗೆ ಇದ್ದರೂ ಈಗಲೂ ಹಾಗೇ ಇದ್ದಾರೆ. ಕಿಶನ್ ಅದ್ಭುತ ಡ್ಯಾನ್ಸರ್. ಈ ಸಿನಿಮಾ ಚೆನ್ನಾಗಿ ಆಗುತ್ತದೆ. ಚಿತ್ರದಲ್ಲಿ ಪಾಸಿಟಿವ್ ವೈಬ್ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ' ಎಂದರು.
ಸ್ಪೆಷಲ್ ಆಗಿ ಮೂಡಿ ಬಂದಿರುವ ಶಿಪ್ ಸಾಂಗ್ ಒಂದು ಹೊಸ ಪ್ರಯತ್ನ. ಇಡೀ ಹಾಡನ್ನು ಪೋರ್ಚುಗಲ್‌ನಲ್ಲಿ ಶೂಟಿಂಗ್ ನಡೆಸಲಾಗಿದೆ. ನಾಯಕ ದುಶ್ಯಂತ್ ನಾಯಕಿ ಆಶಿಕಾ ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಗೆ ಹೆಜ್ಜೆ ಹಾಕಿದ್ದಾರೆ. ಸಿಂಪಲ್ ಸುನಿ ಕ್ಯಾಚಿ ಮ್ಯಾಚಿ ಪದ ಪೊಣಿಸಿದ್ದು, ಕೈಲಾಸ್ ಖೇರ್, ಚೇತನ್ ನಾಯಕ್ ಹಾಗೂ ಚಿನ್ಮಯಿ ಎಲ್ ಹಾಡಿಗೆ ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಅದ್ಭುತ ಸಂಗೀತ ಒದಗಿಸಿದ್ದಾರೆ. 'ಗತವೈಭವ' ಸಿನಿಮಾಗೆ ಸುನಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡಿಗೆ ಸಾಹಿತ್ಯ ಕೂಡಾ ಬರೆದಿದ್ದಾರೆ. ಸರ್ವ್‌ಗರಾ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ತಿಮ್ಮಯ್ಯ ಹಾಗೂ ಸುನಿ ಇಬ್ಬರೂ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 