ಬಂಗಣೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕಕ್ಕೆ ಚಾಲನೆ
ಲೋಕದರ್ಶನ ವರದಿ
ಕುಮಟಾ : ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಂಗಣೆ ಹಾಗೂ ಕಲವೆ ಗ್ರಾಮದ ಜನರಿಗೆ ಶುಕ್ರವಾರ ಶಾಸಕ ದಿನಕರ ಶೆಟ್ಟಿ ಅವರು ಪಂಡಿತ್ ದೀನ್ ದಯಾಳ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ಅಡಿ ಮನೆಗಳಿಗೆ ವಿದ್ಯುತ್ ಪೂರೈಸಿ ಸುಧೀರ್ಘ ಕಾಲದ ಬೇಡಿಕೆ ಈಡೇರಿಸಿದ್ದಾರೆ.
ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ದೀಪ ಬೆಳಗಿಸಿ ರಾತ್ರಿಯಲ್ಲಿ ಜೀವನ ಕಳೆದ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಂಗಣೆ ಹಾಗೂ ಕಲವೆ ಗ್ರಾಮದ ಜನತೆಗೆ ಶಾಸಕ ದಿನಕರ ಶೆಟ್ಟಿ ಗ್ರಾಮಕ್ಕೆ ಮೊದಲ ಬಾರಿಗೆ ವಿದ್ಯುತ್ಗೆ ಚಾಲನೆ ನೀಡಿ ಬೆಳಕು ಹರಿಸಿರುವುದರಿಂದ ಶುದ್ಧ ಗ್ರಾಮೀಣ ಬದುಕಿನ ಜೊತೆಗೆ ಅನೇಕ ವರ್ಷಗಳಿಂದ ಜೀವನ ಕಳೆದಿರುವ ಜನರಿಗೆ ಪಂಡಿತ್ ದೀನ್ ದಯಾಳ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ಅಡಿ ಮನೆಗಳಿಗೆ ವಿದ್ಯುತ್ ಪೂರೈಸಿ ಸುಧೀರ್ಘ ಕಾಲದ ಬೇಡಿಕೆ ಈಡೇರಿದ್ದು, ಬಂಗಣೆ ಹಾಗೂ ಕಲವೆ ಗ್ರಾಮದ ಜನತೆಗೆ ಶುಕ್ರವಾರ ಹಬ್ಬದ ಸಂಭ್ರಮವಾಗಿದೆ. ಅಲ್ಲದೇ ವಿದ್ಯುತ್ ಹರಿದು ಬಲ್ಬ್ ಉರಿದಾಗ ಇಲ್ಲಿಯ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅವರ ಸಂತಸಕ್ಕೆ ಪಾರೆ ಇರಲಿಲ್ಲ. ಶುದ್ಧ ಗ್ರಾಮೀಣ ಬದುಕಿನ ಜೊತೆಗೆ ಅನೇಕ ವರ್ಷಗಳಿಂದ ಜಿವನ ಕಳೆದಿರುವ ಜನರಿಗೆ ಪಂಡಿತ್ ದೀನ್ ದಯಾಳ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ಅಡಿ ಮನೆಗಳಿಗೆ ವಿದ್ಯುತ್ ಪೂರೈಸಿ ಸುಧೀರ್ಘ ಕಾಲದ ಬೇಡಿಕೆ ಈಡೇರಿದೆ.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, ನಮ್ಮ ಕ್ಷೇತ್ರಕ್ಕೆ ಈ ಯೋಜನೆಗಾಗಿ 4 ಕೋಟಿ ರೂ ಮುಂಜೂರಿಮಾಡಿದ್ದಾರೆ. ಈ ಗ್ರಾಮಕ್ಕೆ ಬಂದು ಹೋಗುವದೇ ಒಂದು ಸಾಹಸ. ಹೀಗಾಗಿ ಇಲ್ಲಿಯ ಜನರಿಗೆ ಮೂಲ ಸೌಕರ್ಯಗಳನ್ನು ದೊರಕಿಸಿಕೊಡುವದು ನಮ್ಮ ಜವಾಬ್ದಾರಿ. ಹೀಗಾಗಿ ಬಂಗಣೆಯಲ್ಲಿ 15 ಮನೆಗಳಿಗೆ ಹಾಗೂ ಕಲವೆಯಲ್ಲಿ 3 ಮನೆಗಳು ಸೇರಿದಂತೆ ಒಟ್ಟೂ 18 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಪ್ರಥಮ ಆದ್ಯತೆಯಲ್ಲಿ ಇಷ್ಟು ಮನೆಗಳಿಗೆ ವಿದ್ಯುತ್ ನೀಡಲಾಗಿದ್ದು, ಇನ್ನುಳಿದವರಿಗೆ ಮುಂದಿನ ದಿನಗಳಲ್ಲಿ ಪೂರೈಸಲಾಗುವದು. ಅಲ್ಲದೇ ಇಲ್ಲಿಯ ಜನರು ಅನೇಕ ಬೇಡಿಕೆಗಳನ್ನಿಟ್ಟಿದ್ದಾರೆ. ಎಲ್ಲವೂ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಹಂತ ಹಂತವಾಗಿ ಎಲ್ಲವನ್ನೂ ಪರಿಹರಿಸಲಾಗುವದು ಎಂದು ಬಂಗಣೆ ಹಾಗೂ ಕಲವೆ ಗ್ರಾಮದ ಜನರಿಗೆ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯ ಗಜಾನನ ಪೈ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ವಿದ್ಯುತ್ ಇಲ್ಲದೆ ಇಲ್ಲಿಯ ಜನ ಕರಾಳ ದಿನಗಳನ್ನು ಕಳೆದಿದ್ದಾರೆ. ವಿದ್ಯುತ್ ಇಲ್ಲದಿರುವದರಿಂದ ಇಲ್ಲಿಯ ಜನರಿಗೆ ಕತ್ತಲಲ್ಲಿ ಕಾಳ ಕಳೆಯುವುದು ಕಷ್ಟವಾಗಿತ್ತು. ಈಗ ಅದು ದೂರವಾಗಿದೆ. ಅಲ್ಲದೇ ಕತ್ತಲೆಯ ಕೂಪ ಮುಂದಿಟ್ಟುಕೊಂಡು ನವಭಾರತದ ನಿರ್ಮಾಣದ ಕನಸು ಕಾಣುವುದರಲ್ಲಿ ಅರ್ಥವಿಲ್ಲ ಎನ್ನುವ ಚಿಂತನೆ ಮೋದಿಯವರದಾಗಿತ್ತು, ಈ ದಿಸೆಯಲ್ಲಿ ಪ್ರತಿ ಹಳ್ಳಿಗೂ ಬೆಳಕಿನ ಭಾಗ್ಯ ಕಲ್ಪಿಸುವುದು ಹಾಗೂ ಯಾವ ಹಳ್ಳಯು ಕೂಡ ವಿದ್ಯುತ್ ಸಂಪರ್ಕದಿಂದ ಹೊರುಳಿಯಬಾರದು ಎನ್ನುವ ಸಂಕಲ್ಪ ಅವರದ್ದಾಗಿತ್ತು. ದೀನ್ ದಯಾಳ ಉಪಾದ್ಯಾಯ ವಿದ್ಯುದ್ದೀಕರಣ ಯೋಜನೆ ಪ್ರಧಾನ ಮಂತ್ರಿ ಮೋದಿಯ ಕನಸಿನ ಕೂಸು. ದೆಹಲಿಯಲ್ಲಿ ಕುಳಿತು ಗ್ರಾಮೀಣ ಭಾಗಗಳ ಜನರ ಕಷ್ಟದ ಬದುಕಿನ ಕಲ್ಪನೆಯನ್ನು ಮಾಡಿ ಯೋಜನೆಗಳನ್ನು ರೂಪಿಸಿ ಜನರಿಗೆ ಅದರ ಉಪಯೋಗ ದೊರಕಿಸಿ ಕೊಡುವದು ಅವರ ಉದ್ದೇಶ ಸಾಕಾರಗೊಳ್ಳುತ್ತಿದೆ. 70 ಕಿ.ಮಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ನಾಲ್ಕು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ದೀನ್ ದಯಾಳ ವಿದ್ಯುದ್ದೀಕರಣ ಯೋಜನೆ ಪ್ರಗತಿ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಸಂತೇಗುಳಿ ಗ್ರಾಪಂ ಸದಸ್ಯ ವಿನಾಯಕ ಭಟ್, ಸೊಪ್ಪಿನಹೊಸಳ್ಳಿ ಗ್ರಾಪಂ ಸದಸ್ಯರಾದ ಯಂಕು ಮರಾಠಿ, ಖಾಧೀರ್, ಹೆಸ್ಕಾಂ ಎಇಇ ಪಠಾಣ, ಬಿಜೆಪಿ ಮುಖಂಡರಾದ ಸುದೀರ ಗೌಡ, ರಾಧಾಕೃಷ್ಣ ಗೌಡ ಹಾಗೂ ಬಂಗಣೆ ಮತ್ತು ಕಲವೆ ಗ್ರಾಮಸ್ಥರು ಉಪಸ್ಥಿತರಿದ್ದರು.