ರಬಾಕಾವಿಬನಹಟ್ಟಿ

ಬಡವರಿಗೆ ನೆರವಾಗುವ ಕಾಂಗ್ರೆಸ್ ಸರಕಾರ ಅವಶ್ಯ : ಡಾ|| ನಾಡಗೌಡಪಾಟೀಲ

ಬಡವರಿಗೆ ನೆರವಾಗುವ ಕಾಂಗ್ರೆಸ್ ಸರಕಾರ ಅವಶ್ಯ : ಡಾ|| ನಾಡಗೌಡಪಾಟೀಲ

ರಬಕವಿ-ಬನಹಟ್ಟಿ 13 : ಕೋರೊನಾ ಮಹಾಮಾರಿಯ ಎರಡನೆಯ ಅಲೆಯು ಜನರನ್ನು ತುಂಬಾ ಸಂಕಷ್ಟಕ್ಕೀಡು ಮಾಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಿತ್ಯ ಉಪಯೋಗಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಪ್ರತಿದಿನ ಹೆಚ್ಚಳ ಮಾಡುತ್ತಾ ಬಡವರಿಗೆ ತೊಂದರೆ ಮಾಡುತ್ತಿದೆ. ಬಡವರಿಗೆ ನೆರವಾಗುವ ಕಾಂಗ್ರೆಸ್ ಸರಕಾರ ಬೇಕೆಂದು ಕೆಪಿಸಿಸಿ ಕಿಸಾನ ಘಟಕದ ರಾಜ್ಯ ಸಂಚಾಲಕ ಹಾಗೂ ನೇತ್ರತಜ್ಞ ಡಾ|| ಪದ್ಮಜೀತ ಅ. ನಾಡಗೌಡಪಾಟೀಲ ಹೇಳಿದರು. ತೇರದಾಳ ವಿಧಾನಸಭಾ ವ್ಯಾಪ್ತಿಯಲ್ಲಿ ಬನಹಟ್ಟಿಯ ಬಾಣಕಾರ ಪೆಟ್ರೋಲ್ ಪಂಪ್ ಬಳಿ ಕೆಪಿಸಿಸಿ ಕಿಸಾನ ಘಟಕದ ವತಿಯಿಂದ ತೈಲ ಬೆಲೆ ಹೆಚ್ಚಳ ವಿರುದ್ದ ಪ್ರತಿಭಟನೆ ನಡೆಸಿ ಮಾತನಾಡಿದ ಡಾ|| ನಾಡಗೌಡಪಾಟೀಲ, ಕಚ್ಚಾ ತೈಲ ಬೆಲೆ ಕಡಿಮೆಯಿದ್ದರೂ ಕೂಡ ಕೇಂದ್ರ ಸರಕಾರ ಅನಗತ್ಯವಾಗಿ ತೈಲ ಬೆಲೆ ಹೆಚ್ಚಳ ಮಾಡಿ, ಸಾಮಾನ್ಯ ಜನತೆಗೆ ಹೊರೆಯುಂಟು ಮಾಡುತ್ತಿದೆ ಅಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿ ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಶೇಖರ ಸೋರಗಾಂವಿ ಮಾತನಾಡಿ ನೇಕಾರಿಕೆಗೆ ಅಗತ್ಯವಾಗಿರುವ ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿ ನೇಕಾರರಿಗೆ ಹೆಚ್ಚಿನ ಹೊರೆಯುಂಟಾಗಿದೆ. ಇದರಿಂದ ನೇಕಾರರು ದುಡಿಮೆ ಇಲ್ಲದೆ ಕಷ್ಟ ಪಡುವಂತಾಗಿದೆ. ರಾಜ್ಯ ಸರಕಾರ ನೇಕಾರ ಸಮ್ಮಾನ ಯೋಜನೆಯ ಧನವನ್ನು ಹತ್ತು ಸಾವಿರಕ್ಕೆ ಹೆಚ್ಚಿಸಬೇಕೆಂದು ಹೇಳಿದರು. ಎತ್ತಿನ ಬಂಡಿಯ ಮೇಲೆ ಬೈಕ್ ಏರಿಸಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರೋಧ ಘೋಷಣೆ ಕೂಗುತ್ತ ವಿನೂತನವಾಗಿ ಪ್ರತಿಭಟನೆ ಮಾಡಿದರು. ದುಂಡಪ್ಪ ಕರಿಗಾರ, ನೀಲೇಶ ದೇಸಾಯಿ, ಸಂಜಯ ಅಮ್ಮಣಗಿಮಠ, ಗಂಗಪ್ಪ ಮಂಟೂರ, ರಾಜು ನದಾಫ, ಮಹಾದೇವ ಭಸ್ಮೆ, ರವೀಂದ ಬಾಡಗಿ, ಮಹಾದೇವ ಕೋಪಡರ್ೆ, ಪ್ರಕಾಶ ಮಂಡಿ, ಕುಮಾರ ಬಿಳ್ಳೂರ, ಗಣೇಶ ಕೋಪಡರ್ೆ, ರಾಜು ಶಾಸ್ತ್ರಿಗೊಲ್ಲರ, ಮಲಕಯ್ಯಾ ಬಂಗಿ, ಸದಾಶಿವ ಭಸ್ಮೆ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. 

 

ಸುದ್ದಿ ಓದಿ