ಡಾ.ಚಂದ್ರು ಲಮಾಣಿ ಅವರು ಸಾಮಾಜಿಕ ಕಾರ್ಯ ಶ್ಲಾಘನೀಯ: ಡಾ.ಅನ್ನದಾನೀಶ್ವರ
ಮುಂಡರಗಿ02: ಡಾ.ಚಂದ್ರು ಲಮಾಣಿ ಅವರು ತಮ್ಮ ವೃತ್ತಿ ಜೀವನದ ಜೊತೆಗೆ ಸಾರ್ವಜನಿಕರ ಹಲವಾರು ಸಾಮಾಜಿಕ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶನಿವಾರ ಸಂಜೆ ಮುಂಡರಗಿಯ ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದ ಸಾಮಾಜಿಕ ಕಾರ್ಯ ಚಟುವಟಿಕೆ ಹಾಗೂ 2023ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಚಂದ್ರು ಲಮಾಣಿಯವರು ನಿರಂತರವಾಗಿ ಹತ್ತು ಹಲವಾರು ಜನಪರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು, ಇಂತಹ ಕೆಲಸ ಮಾಡುತ್ತಿರುವ ಇವರಿಗೆ ಬೆಂಬಲ ಸೂಚಿಸಿಬೇಕು. ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಡಾ.ಚಂದ್ರು ಅವರಿಂದ ಇನ್ನೂ ಹೆಚ್ಚಿನ ಕೆಲಸಗಳು ಈ ಕ್ಷೇತ್ರದಲ್ಲಿ ನಡೆಯಲಿ ಎಂದು ತಿಳಿಸಿದರು. ಡಾ.ಚಂದ್ರು ಲಮಾಣಿ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ನಮ್ಮಿಂದ ರೈತರ, ಬಡವರಿಗೆ, ಜನಪರ ಸಾಮಾಜಿಕ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲರೂ ಸಹಕಾರ ನೀಡಬೇಕು ಎಂದರು.
ಈ ವೇಳೆ ಶ್ರೀ ಚನ್ನಬಸವ ಶಿವಯೋಗಿಗಳು, ಮಲ್ಲನಕೇರಿ ಶ್ರೀಗಳು, ನಿರಂಜನ ದೇವರು, ಶಿವಯೋಗಿಶ್ವರ ಸ್ವಾಮೀಜಿ, ಜಿ.ಪಂ.ಮಾಜಿ ಸದಸ್ಯ ಹೇಮಗೀರೀಶ ಹಾವಿನಾಳ, ಎಂ.ಎಸ್.ಶಿವಶೆಟ್ಟಿ, ಮಾರುತಿ ನಾಗರಹಳ್ಳಿ, ಮಂಜುನಾಥ ಮುಧೋಳ, ಮಹಾಂತೇಶ ಕೊರಡಕೇರಿ, ರವೀಂದ್ರಗೌಡ ಪಾಟೀಲ, ಗೀರೀಶ ಶೀರಿ, ಶಿವು ಕುರಿ, ಪವನ ಲೇಂಡ್ವೆ, ಇತರರು ಇದ್ದರು. ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಕೈಗೊಂಡ ಕಾರ್ಯಕ್ರಮದಲ್ಲಿ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ 2023ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.