ಕೆಪಿಸಿಸಿ ಕೋವಿಡ್ ಪರಿಹಾರ ನಿಧಿಗೆ ಡಾ.ಬೆಳಗಲಿ ಲಕ್ಷ ರೂ. ದೇಣಿಗೆ
ರಬಕವಿ-ಬನಹಟ್ಟಿ11 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿಯ ಕೋವಿಡ್ ಪರಿಹಾರ ನಿಧಿಗೆ ಮಹಾಲಿಂಗಪುರದ ಖ್ಯಾತ ವೈದ್ಯ ಹಾಗೂ ತೇರದಾಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ. ಎ. ಆರ್. ಬೆಳಗಲಿ ಒಂದು ಲಕ್ಷ ರೂ.ಗಳ ಚೆಕ್ನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರಿಗೆ ಗೋಕಾಕದಲ್ಲಿ ನೀಡಿದರು.
ಕೋವಿಡ್ನಿಂದ ಅನೇಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತವರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ನೆರವಾಗುವುದಕ್ಕೆ ಕೆಪಿಸಿಸಿಯು ಕೋವಿಡ್ ಪರಿಹಾರ ನಿಧಿ ಸಂಗ್ರಹಿಸುತ್ತಿದೆ. ತೇರದಾಳ ಕ್ಷೇತ್ರದ ಕಾಂಗ್ರೆಸ್ ಧುರೀಣ ಡಾಽಽ ಎ.ಆರ್.ಬೆಳಗಲಿಯವರು ಕೋವಿಡ್ ಪರಿಹಾರ ನಿಧಿಗೆ ಒಂದು ಲಕ್ಷ ರೂ.ಗಳನ್ನು ನೀಡಿದ್ದು, ಕೋರೊನಾ ಕಾಲದಲ್ಲಿ ನೊಂದವರಿಗೆ ಪಕ್ಷದ ಮೂಲಕ ಪರಿಹಾರ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ನೊಂದವರ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಪ್ರಥಮವಾಗಿ ಕೆಲಸ ಮಾಡುತ್ತದೆ. ಕೋರೊನಾ ಹಾವಳಿಯಿಂದ ಸಂಕಷ್ಟಕ್ಕೀಡಾದವರಿಗೆ ಪಕ್ಷದಿಂದ ಸಾಕಷ್ಟು ಸಹಾಯ ಮಾಡುತ್ತಿದೆ. ಈ ಕಾರ್ಯಕ್ಕೆ ನೆರವಾಗಲು ನಮ್ಮಿಂದ ಆರ್ಥಿಕ ಸಹಾಯ ನೀಡಿದ್ದೇವೆ ಎಂದು ಡಾ. ಎ.ಆರ್. ಬೆಳಗಲಿ ಹೇಳಿದರು.
ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಬಸವರಾಜ ಕೊಕಟನೂರ, ಭರಮು ಉಳ್ಳಾಗಡ್ಡಿ, ಅರುಣಕುಮಾರ ಗಾಣಿಗೇರ, ಯಶವಂತ ಮಂಗರಿ, ಸಂಗಮೇಶ ಮುಧೋಳ, ಶ್ರೀಶೈಲ ಉಳ್ಳಾಗಡ್ಡಿ, ಮಹಾಲಿಂಗ ಅಂಬಿಗೇರ, ಶಂಕರ ಕೆಸರಗೊಪ್ಪ ಸೇರಿದಂತೆ ತೇರದಾಳ ಕ್ಷೇತ್ರದ ಕಾಂಗ್ರೆಸ್ನ ಅನೇಕ ಕಾರ್ಯಕರ್ತರು ಇದ್ದರು.