ಅಂತರರಾಷ್ಟ್ರೀಯ

ಮಾರ್ಕ್ ಜುಕರ್‌ಬರ್ಗ್ ಬಗ್ಗೆ ಡೊನಾಲ್ಡ್ ಟ್ರಂಪ್ ಆಕ್ಷೇಪಾರ್ಹ ಹೇಳಿಕೆ

ಮಾರ್ಕ್ ಜುಕರ್‌ಬರ್ಗ್  ಬಗ್ಗೆ ಡೊನಾಲ್ಡ್  ಟ್ರಂಪ್  ಆಕ್ಷೇಪಾರ್ಹ  ಹೇಳಿಕೆ

ವಾಷಿಂಗ್ಟನ್‌,  ಸೆ  12  ಅಮೆರಿಕಾ  ಅಧ್ಯಕ್ಷ  ಚುವಾವಣೆಯಲ್ಲಿ    ಭಾರಿ  ಪರಾಭವದ    ನಂತರ    ಕ್ಯಾಪಿಟಲ್ ಹಿಲ್  ಹಿಂಸಾಚಾರದ   ಕಾರಣ   ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್   ವಿರುದ್ದ   ಸಾಮಾಜಿಕ ಮಾಧ್ಯಮಗಳು  ವಿಧಿಸಿರುವ     ನಿಷೇಧ   ಜಾರಿಯಲ್ಲಿದೆ.  ಈ  ಹಿನ್ನಲೆಯಲ್ಲಿ   ಅವಕಾಶ  ದೊರೆತಾಗಲೆಲ್ಲಾ     ಸಾಮಾಜಿಕ ಮಾಧ್ಯಮಗಳ   ಪ್ರವೃತ್ತಿಯನ್ನು   ಟ್ರಂಪ್‌    ತೀಕ್ಷ್ಣವಾಗಿ  ಟೀಕಿಸುತ್ತಿರುತ್ತಾರೆ.
 
ಅಮೆರಿಕಾದ  ಪ್ರಮುಖ ಉದ್ಯಮಿಯೂ  ಆಗಿರುವ     ಡೊನಾಲ್ಡ್ ಟ್ರಂಪ್    ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್  ಬಗ್ಗೆ   ಇತ್ತೀಚಿಗೆ  ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.  9/11ರ  ದಾಳಿಗೆ  .. 20 ವರ್ಷಗಳು ಪೂರ್ಣಗೊಂಡ  ಸಂದರ್ಭದಲ್ಲಿ  ಫಾಕ್ಸ್ ನ್ಯೂಸ್‌ಗೆ  ನೀಡಿದ ಸಂದರ್ಶನದಲ್ಲಿ,   ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ದ ಕೆಂಡಕಾರಿದ್ದಾರೆ.   ಆರಂಭದಲ್ಲೆ   ವಿಫಲಗೊಂಡ ಶಸ್ತ್ರಚಿಕಿತ್ಸೆ ಎಂದು ಟ್ವಿಟರ್  ಅನ್ನು ಜರಿದಿದ್ದಾರೆ.    ತಕ್ಷಣವೇ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ವಿರುದ್ದ   ಕಟು  ಟೀಕೆ ಮಾಡಿದ್ದಾರೆ.  "ನಾನು ಅಧ್ಯಕ್ಷನಾಗಿದ್ದಾಗ, ಅತ  (ಮಾರ್ಕ್ ಜುಕರ್‌ಬರ್ಗ್) ಶ್ವೇತಭವನಕ್ಕೆ ********* (ಆಕ್ಷೇಪಾರ್ಹ ಪದ )  ಬರುತ್ತಿದ್ದರು.  ನಾನು ಫೇಸ್ಬುಕ್ ಮುಖ್ಯಸ್ಥ,  ಎಂದು ಪತ್ನಿಯೊಂದಿಗೆ   ಬರುತ್ತಿದ್ದರು.   ಅದಕ್ಕೆ  ನಾನು  ' ಓ--  ಹೌದಾ ಎಂದು   ಪ್ರತಿಕ್ರಿಯಿಸುತ್ತಿದ್ದೆ   ಆತ  ವ್ಯಾಪಾರಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ದೂರ ಹೋಗುತ್ತಾರೆ  ಎಂದು ಟ್ರಂಪ್ ತಮಾಷೆಯಾಗಿ ಹೇಳಿದರು.
 

ತಮ್ಮ ಕೆಲಸಗಳಿಗಾಗಿ    ಶ್ವೇತ ಭವನದ  ಸುತ್ತ  ತಿರುಗುತ್ತಿದ್ದ    ಜೂಕರ್‌  ಬರ್ಗ್ ನಂತಹ  ಟೆಕ್ ದೈತ್ಯರು ಈಗ   ಕೈಲಾಗದ ಮುದುಕಿಯಂತಾಗಿದ್ದಾರೆ  ಎಂದು ಟ್ರಂಪ್ ಲೇವಡಿ ಮಾಡಿದ್ದಾರೆ. ಇಂಟರ್‌ನೆಟ್ ದೈತ್ಯರಾದ ಗೂಗಲ್, ಟ್ವಿಟರ್,  ಫೇಸ್‌ಬುಕ್ ದೇಶಕ್ಕಾಗಿ (ಅಮೆರಿಕಾ) ಮಾಡಿದ್ದು  ಏನೂ ಇಲ್ಲ  ಬದಲಿಗೆ  ದೇಶದ ಜನರ   ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿವೆ ಎಂದು ಟ್ರಂಪ್ ಆರೋಪಿಸಿದ್ದಾರೆ.  ಕ್ಯಾಪಿಟಲ್ ಹಿಲ್ ಹಿಂಸಾಚಾರದ ಸಮಯದಲ್ಲಿ  ತನ್ನ ಬೆಂಬಲಿಗರ ವೀಡಿಯೊ   ಪೋಸ್ಟ್ ಮಾಡುವುದು, ದ್ವೇಷಪೂರಿತ  ಹೇಳಿಕೆ   ನೀಡಿದ್ದರಿಂದ  ಟ್ರಂಪ್   ಅವರ    ಟ್ವೀಟರ್‌    ಖಾತೆಯನ್ನು ಶಾಶ್ವತವಾಗಿ ನಿಷೇಧಿಸಿತ್ತು.   ಆದರೆ ಫೇಸ್ಬುಕ್ 2023 ರವರೆಗೆ ನಿಷೇಧ  ವಿಧಿಸಿದೆ.  ಇನ್ನೂ Instagram ತಾತ್ಕಾಲಿಕ ನಿಷೇಧ  ಜಾರಿಗೊಳಿಸಿದೆ.


ಸುದ್ದಿ ಓದಿ