ಕ್ರೂಸ್ ಹಡಗುಗಳಲ್ಲಿ ಪ್ರಯಾಣ ಬೇಡ …. ಅಮೇರಿಕನ್ನರಿಗೆ ಆರೋಗ್ಯ ಇಲಾಖೆ ಆದೇಶ
ನ್ಯೂಯಾರ್ಕ್, ಡಿ 31: ಒಮಿಕ್ರಾನ್ ರೂಪಾಂತರಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಂಡಿದ್ದರೂ ಕ್ರೂಸ್ ಹಡಗುಗಳ ಪ್ರಯಾಣದಿಂದ ದೂರವಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಮೆರಿಕಾ ಜನರಿಗೆ ಸಲಹೆ ನೀಡಿದೆ. ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡವರೂ ಕೂಡ ಕ್ರೂಸ್ ಟ್ರಿಪ್‌ಗಳಲ್ಲಿ ಪ್ರಯಾಣಿಸದಂತೆ ಅಮೆರಿಕಾದ ಸೆಂಟರ್ಸ್ ಫಾರ್ ಡಿಸಿಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಆದೇಶಿಸಿದೆ.
ಕ್ರೂಸ್ ಹಡಗುಗಳ ಪ್ರಯಾಣದ ವೇಳೆ ಕೋವಿಡ್ ಸೋಂಕಿಗೊಳಗಾಗುವ ಅಪಾಯ ಹೆಚ್ಚಿರುವ ಕಾರಣ ಅಮೆರಿಕಾ ಈ ಆದೇಶ ಹೊರಡಿಸಿದೆ. ಡಿಸೆಂಬರ್ 15 ರಿಂದ 29 ರ ನಡುವೆ, ಕ್ರೂಸ್ ಹಡಗುಗಳಲ್ಲಿ ಪ್ರಯಾಣಿಸಿದ್ದ 5,013 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಪತ್ತೆಯಾಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಜತೆಗೆ, ಮಾಸ್ಕ್ ಧರಿಸುವಂತೆ ಅಮೆರಿಕಾ ವೈದ್ಯಾಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ. ಕ್ರೂಸ್ ಹಡಗುಗಳಲ್ಲಿ ಕೋವಿಡ್ ಸುಲಭವಾಗಿ ಹರಡುತ್ತಿರುವ ಕಾರಣ ಪ್ರಯಾಣ ನಿಲ್ಲಿಸುವಂತೆ ಅಮೆರಿಕಾ ಆರೋಗ್ಯ ಅಧಿಕಾರಿಗಳು ಜನರಿಗೆ ಸಲಹೆ ನೀಡಿದ್ದಾರೆ.