ಅಂತರರಾಷ್ಟ್ರೀಯ

ಗಡಿ ಪ್ರದೇಶಗಳಿಗೆ ಹೋಗಬೇಡಿ! ಭಾರತೀಯ ರಾಯಭಾರಿ ಕಚೇರಿ ಮನವಿ

ಗಡಿ ಪ್ರದೇಶಗಳಿಗೆ ಹೋಗಬೇಡಿ! ಭಾರತೀಯ ರಾಯಭಾರಿ ಕಚೇರಿ ಮನವಿ

ಹೊಸದಿಲ್ಲಿ: ಫೆಬ್ರವರಿ 26: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬಳಿಕ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಮಧ್ಯೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸದೆ ಗಡಿ ಪೋಸ್ಟ್‌ಗಳಿಗೆ ಹೋಗದಂತೆ ನಾಗರಿಕರನ್ನು ಕೇಳಿಕೊಂಡಿದೆ.

‘ಗಡಿ ಚೆಕ್ ಪೋಸ್ಟ್‌ಗಳಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಾವು ನೆರೆಯ ದೇಶಗಳಲ್ಲಿರುವ ನಮ್ಮ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಉಕ್ರೇನ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಗೆ ತಿಳಿಸದೆ ಗಡಿ ಚೆಕ್ ಪೋಸ್ಟ್‌ಗಳತ್ತ ತಲುಪಿರುವ ಭಾರತೀಯರನ್ನು ಸ್ಥಳಾಂತರಿಸುವುದು ಕಷ್ಟವಾಗಲಿದೆ. ಪೂರ್ವ ವಲಯದಲ್ಲಿರುವ ಭಾರತೀಯ ಪ್ರಜೆಗಳು ಮುಂದಿನ ಸೂಚನೆಗಳವರೆಗೆ ತಮ್ಮ ವಾಸಸ್ಥಳದಲ್ಲಿ ಇರಲು ವಿನಂತಿಸಲಾಗಿದೆ.

ಸುದ್ದಿ ಓದಿ