ಆ ಶಕ್ತಿಯನ್ನು ಪ್ರದರ್ಶಸಬೇಡಿ ಆಸಕ್ತಿಯನ್ನು ಪ್ರದರ್ಶಿಸಿ : ಡಾ. ಸಿ ಸೋಮಶೇಖರ ಅಭಿಮತ
ಹುಕ್ಕೇರಿ : ಗಡಿಭಾಗ ಅಭಿವೃದ್ಧಿ ಯಾಗಬೇಕು ಎಂದು ಕುಳಿತರೆ ಸಾಲದು, ಪ್ರತಿಯೊಬ್ಬರು ಗಡಿಯ ಬಗ್ಗೆ ಆ ಶಕ್ತಿಯನ್ನೇ ಪ್ರದರ್ಶಿಸುತ್ತ ಗೊಂದಲದ ಗೂಡನ್ನು ಮಾಡುವುದನ್ನು ನಾವು ನೋಡುತ್ತೇವೆ. ಹಾಗಾಗಬಾರದು ನಾವೆಲ್ಲರೂ ಆಸಕ್ತಿುಂದ ಎಲ್ಲರೂ ಹೊಂದಾನಿಕೆುಂದ ನಡೆದಾಗ ಮಾತ್ರ ಗಡಿಭಾಗ ಅಭಿವೃದ್ಧಿಯಾಗಲು ಸಾಧ್ಯ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ್ ಅವರು ತಾಲೂಕಿನ ಹುಕ್ಕೇರಿ "ರೇಮಠಕ್ಕೆ ಭೇಟಿ ನೀಡಿ ಮಾತನಾಡುತ್ತ ಗಡಿಯ ಗುಡಿಯ ಹುಕ್ಕೇರಿ "ರೇಮಠದ ಕಾರ್ಯ ಶ್ಲಾಘನೀಯ. ಅನ್ನ, ಅರಿವು, ಆಶ್ರಯದ ಮೂಲಕ ಶ್ರೀಮಠ ಗಡಿಯಲ್ಲಿ ಉತ್ತಮಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಠಾಧ್ಯಕ್ಷರಾದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾ"ುಗಳು ಮಾತನಾಡಿ ಗಡಿಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಅವರು ಧರ್ಮ, ದೇವರು, ಆಧ್ಯಾತ್ಮಿಕ ಮತ್ತು ಮಾನ"ಯ ಮೌಲ್ಯಗಳ ಮೂರ್ತರೂಪವಾಗಿದ್ದಾರೆ. ಅವರು ಪ್ರಾಧಿಕಾರದ ಅಧ್ಯಕ್ಷರಾದಾಂದರಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡು ಗಡಿಯುದ್ಧಕ್ಕೂ ಸಂಚರಿಸಿ ಕುಂದು, ಕೊರತೆಗಳನ್ನು ಆಲಿಸುತ್ತಿರುವುದು ಅಭಿನಂದನೀಯ ಎಂದರು.
ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಗಡಿನಾಡಿನ ಕುರಿತು ಮಾತನಾಡಿದರು. ಸಹಾಯಕ ಕಾರ್ಯದರ್ಶಿ ಸೋಮಶೇಖರ ಗಾಂಜಿ ಸೇರಿದಂತೆ ಇತರರು ಇದ್ದರು