ಅಂತರರಾಷ್ಟ್ರೀಯ

ಜಗತ್ತಿನಲ್ಲಿ ಎಷ್ಟು ಮಂದಿ ಫೋನ್ ಬಳಸುತ್ತಿದ್ದಾರೆ ಗೊತ್ತಾ......!

ಜಗತ್ತಿನಲ್ಲಿ  ಎಷ್ಟು  ಮಂದಿ   ಫೋನ್ ಬಳಸುತ್ತಿದ್ದಾರೆ   ಗೊತ್ತಾ......!

ವಾಷಿಂಗ್ಟನ್‌,  ಅ 27: ನಮ್ಮ  ಬದುಕಿನ  ಅತ್ಯವಶ್ಯಕ ವಸ್ತುಗಳ ಪಟ್ಟಿಗೆ   ಸೇರಿಕೊಂಡಿರುವ  ಮೊಬೈಲ್‌ ಫೋನ್‌... ಈಗ  ಕೊರೊನಾ  ಸಾಂಕಾಮಿಕ ದಯೆಯಿಂದಾಗಿ  ನಮಗೆ   ಅನಿವಾರ್ಯವಾಗಿಬಿಟ್ಟಿದೆ.   ಆನ್‌ ಲೈನ್  ಕ್ಲಾಸ್‌ ಗಳು,  ವರ್ಕ್‌ ಫ್ರಮ್‌  ಹೋಂ ನಿಂದಾಗಿ  ಚಿಕ್ಕವರು  ದೊಡ್ಡವರು  ಎಂಬ ಭೇದ ಭಾವ ವಿಲ್ಲದೆ   ಎಲ್ಲರ  ಕೈಗಳಲ್ಲೂ  ಮೊಬೈಲ್‌  ಕಾಣಿಸುತ್ತಿದೆ.    ಸರಿ..    ಪ್ರಪಂಚದಾದ್ಯಂತ ಎಷ್ಟು  ಮಂದಿ    ಮೊಬೈಲ್ ಫೋನ್ ಬಳಸುತ್ತಾರೆ ಗೊತ್ತಾ.. ಅಕ್ಷರಶಃ 529 ಕೋಟಿ ಮಂದಿ.  ವಿಶ್ವದ ಜನಸಂಖ್ಯೆಯ ಶೇ. 65 ರಷ್ಟು  ಮೊಬೈಲ್ ಫೋನ್ ಬಳಕೆದಾರರಿದ್ದಾರೆ  ಎಂದು  ಹೊಸ ಸಮೀಕ್ಷೆಯೊಂದು ತಿಳಿಸಿದೆ.

ಪ್ರಪಂಚದಾದ್ಯಂತ ಮೊಬೈಲ್, ಇಂಟರ್ನೆಟ್,  ಸಾಮಾಜಿಕ ಮಾಧ್ಯಮ ಬಳಕೆಯ ಕುರಿತು    "ವಿ ಆರ್‌  ಸೋಶಿಯಲ್"  ಎಂಬ ಸಂಶೋಧನಾ ಸಂಸ್ಥೆ  ಇತ್ತೀಚೆಗೆ  ಅಧ್ಯಯನ ನಡೆಸಿ  'ಡಿಜಿಟಲ್ 2021: ಅಕ್ಟೋಬರ್ ಗ್ಲೋಬಲ್ ಸ್ನ್ಯಾಪ್‌ಚಾಟ್' ಎಂಬ ಶೀರ್ಷಿಕೆಯ  ವರದಿ  ಸಿದ್ದಪಡಿಸಿದೆ.    ಇದರ ಪ್ರಕಾರ,  ಅಕ್ಟೋಬರ್ ವೇಳೆಗೆ 5.29 ಬಿಲಿಯನ್ ಜನರು ಮೊಬೈಲ್ ಫೋನ್ ಬಳಸುತ್ತಿದ್ದಾರೆ. ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು  ಮಂದಿ  ಫೋನ್ ಬಳಸುತ್ತಾರೆ ಎಂದು ವರದಿ ಹೇಳಿದೆ. ಕಳೆದ ವರ್ಷವೊಂದರಲ್ಲೇ  ಸುಮಾರು 10 ಕೋಟಿ ಹೊಸ ಬಳಕೆದಾರರು ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದೆ.

ವಿಶ್ವಾದ್ಯಂತ   ಸುಮಾರು  455 ಕೋಟಿ  ಮಂದಿ  ಸಾಮಾಜಿಕ ಮಾಧ್ಯಮವನ್ನು  ಬಳಸುತ್ತಿದ್ದಾರೆ ಎಂದು ವರದಿ  ತಿಳಿಸಿದ್ದು.  ಕಳೆದ 12 ತಿಂಗಳಲ್ಲೇ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ 40 ಕೋಟಿ ಹೆಚ್ಚಾಗಿದೆ.  ಪ್ರಪಂಚದಾದ್ಯಂತ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು  ಜನರು ಹೊಸದಾಗಿ  ಸಾಮಾಜಿಕ ಮಾಧ್ಯಮಕ್ಕೆ ಸೇರುತ್ತಿದ್ದಾರೆ.  2022 ರ ಮೊದಲಾರ್ಧದ ವೇಳೆಗೆ, ವಿಶ್ವದ ಜನಸಂಖ್ಯೆಯ ಶೇ.  60 ಕ್ಕಿಂತ ಹೆಚ್ಚು  ಮಂದಿ ಸಾಮಾಜಿಕ ಮಾಧ್ಯಮ   ಬಳಸುವ  ಅವಕಾಶವಿದೆ   ಎಂದು  ಸಂಸ್ಥೆ ಅಂದಾಜಿಸಿದೆ. 

ಸುದ್ದಿ ಓದಿ