ಮುಧೋಳ

ಬೀಳಗಿಯಲ್ಲಿ ಜಿಲ್ಲಾ ದಶಮಾನೋತ್ಸವ ಸಾಹಿತ್ಯ ಸಮ್ಮೇಳನ

ಬೀಳಗಿಯಲ್ಲಿ ಜಿಲ್ಲಾ ದಶಮಾನೋತ್ಸವ ಸಾಹಿತ್ಯ ಸಮ್ಮೇಳನ

ಮುಧೋಳ :ಅಖಂಡ ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ನೂತನ ಜಿಲ್ಲೆಯಾಗಿ 25 ವರ್ಷದ ಸಂಭ್ರಮದ ಜೊತೆಗೆ ಹತ್ತನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ದಶಮಾನೋತ್ಸವ ನಿಮಿತ್ಯ 36 ಪುಸ್ತಕಗಳ ಲೋಕಾರೆ​‍್ಣ ಕಾರ್ಯಕ್ರಮ ಹಾಗೂ ಹತ್ತನೆಯ ಜಿಲ್ಲಾ ಸಮ್ಮೇಳನ ಡಿಸಂಬರ್ ಕೊನೆಯ ವಾರದಲ್ಲಿ ಬೀಳಗಿಯಲ್ಲಿ ಜರುಗಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.  

ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಮುಧೋಳ, ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ  ತಿಂಗಳ ಅತಿಥಿ ವಿಶೇಷ ಕಾರ್ಯಕ್ರಮ-4ದಲ್ಲಿ ಡಾ . ಬಾಳಾಸಾಹೇಬ ಲೋಕಾಪುರ ಅವರ ಸಾಹಿತ್ಯಾವ ಲೋಕನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಪ್ರತಿ ತಿಂಗಳೂ ನಮ್ಮ ಜಿಲ್ಲೆಯ ಸಾಹಿತ್ಯ ಆಸಕ್ತರಿಗೆ ಹೊರ ಜಿಲ್ಲೆಯ ಸಾಹಿತಿಗಳ ಕೃತಿ ಪರಿಚಯದ ಸಾಹಿತ್ಯಾವಲೋಕನ ಕಾರ್ಯಕ್ರಮದ ಮೂಲಕ ಯುವ ಸಾಹಿತಿಗಳಿಗೆ ಹಿರಿಯ ಸಾಹಿತಿಗಳ ಪರಿಚಯಾತ್ಮಕ ಕಾರ್ಯಕ್ರಮ ನಡೆದು ಬರುತ್ತಿದ್ದು ನಾಲ್ಕನೆಯ ಕಾರ್ಯಕ್ರಮದಲ್ಲಿ ಕಾದಂಬರಿ ಲೋಕಕ್ಕೆ ಹೊಸ ಭಾಷ್ಯ ಬರೆದ  ಸಾಹಿತಿ,  ವಿಶೇಷ ಅತಿಥಿಯಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ ,ಭಾಗವಹಿಸಿದ್ದೂ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.  

ಸಾಹಿತ್ಯಾವಲೋಕನದಲ್ಲಿ ಅತಿಥಿಯಾಗಿ ಭಾಗಿಯಾದ ಡಾ. ಬಾಳಾಸಾಹೇಬ ಲೋಕಾಪುರ ಮಾತನಾಡಿ ಪುಸ್ತಕ ಬರೆಯುವವವರಿಗೆ ಹೆಚ್ಚು ಖುಷಿಯಾಗುವುದೇ ಅವರ ಕೃತಿ ಓದಿದಾಗ ಅಂತಹ ಓದುಗರನ್ನು ಹೆಚ್ಚಿಸಿ ನನ್ನ ಕೃತಿಗಳ ಅವಲೋಕನ ಮಾಡಿದ್ದು ನಿಜಕ್ಕೂ ಸ್ಮರಣೀಯವಾದುದು ಎಂದು ಹೇಳಿದರು.  

ಕಾದಂಬರಿ ಕುರಿತು ಮಾತನಾಡಿದ ಸಂಕೇಶ್ವರದ ಡಾ.ಗುರುಪಾದ ಮರೆಗುದ್ದಿ, ಊರಕಥೆಯ ಜೊತೆ ಬದುಕಿನ ತಾತ್ವಿಕತೆ ಬಾಳಾಸಾಹೇಬ ಲೋಕಾಪುರ ಅವರ ‘ಕೃಷ್ಣೆ ಹರಿದಳು’ ಅವರ ‘ಬಿಸಿಲುಪುರ’, ‘ಉಧೋಉಧೋ’, ‘ಹುತ್ತ’ ಕಾದಂಬರಿಗಳ ನಂತರ ರಚಿತವಾಗಿರುವ ಕೃತಿ. ಸಣ್ಣ ಕಥೆಗಳನ್ನೂ ತಮ್ಮ ಸೃಜನಶೀಲತೆಯ ಮುಖ್ಯ ವಾಹಕವಾಗಿ ಬಳಸಿಕೊಂಡಿರುವ ಲೋಕಾಪುರರ ಕಥನವು ಊರಕಥೆ, ಜೀವಕಥೆಗಳನ್ನು ಬದುಕಿನ ತಾತ್ವಿಕತೆಯಾಗಿ ಕಂಡುಕೊಳ್ಳುವುದು ಹೇಗೆಂಬ ಪ್ರಶ್ನೆಯ ಮುಂದೆ ಸದಾ ನಿಂತಿದೆ. ಈ ಕಾದಂಬರಿಯ ಆರಂಭದಲ್ಲಿ ಅವರು ಹೇಳುವ, ‘ಇಲ್ಲಿ ಕತೆಯೊಂದೇ ಮುಖ್ಯ. ಕತೆ ಅಲ್ಲದೆ ಮತ್ತೇನಿಲ್ಲ, ಬದುಕೆಂದರೆ ಕತೆ. ಎಂಬುದು ಅದನ್ನು ಧ್ವನಿಸುತ್ತದೆ ,ಶಿರಹಟ್ಟಿ ಅವರ ಕಥಾನಕದ ಕೇಂದ್ರ. ಅದು ಇಲ್ಲಿ ಶಿರಿಹಾಡಿಯಾಗಿದೆ. ಅದನ್ನು ಹಾಯುವ ಕೃಷ್ಣೆ ಇಲ್ಲಿ ಹಿರಿಹೊಳೆಯಾಗಿದ್ದು, ಅದರಲ್ಲಿ ಊರವರು ತಮ್ಮ ಜೀವ ದಾಹ ಕಂಡುಕೊಂಡರೆ ಕಾದಂಬರಿಕಾರರು ಹಿರಿಹೊಳೆಯ ಮೌನವು ಕಟ್ಟಿಕೊಡುವ ನಿರ್ಲಿಪ್ತ ಧೈರ್ಯದಲ್ಲಿ ದಾಹದ ಎಳೆಗಳಸಿಕ್ಕನ್ನು ಬಿಡಿಸಲು ನೋಡಿದ್ದಾರೆ. ಇದು ತಂತ್ರವೂ ಹೌದು. ಜಗತ್ತಿಗೆ ನಾಗರಿಕತೆಗಳನ್ನು ಕಟ್ಟಿಕೊಟ್ಟನದಿಗಳದ್ದು ಅಂದಿನ ಇತಿಹಾಸವಾದರೆ, ನಾಗರಿಕತೆಯ ಕ್ರೌರ್ಯ, ತಲ್ಲಣ, ಮೋಹಗಳು ಹೊಸಕಾಲದ ನದಿಗಳ ಬಾಗಿನವಾಗಿರುವುದು ಇಂದಿನ ಚರಿತ್ರೆ. ಕಟ್ಟಿಕೊಂಡ ಮಾನವೀಯತೆಯು ಕಳಚುವ ಸಂಕಟದಲ್ಲಿ ‘ಕೃಷ್ಣೆ ಹರಿದಳು’ ತಾಳಿದೆ. ಇದಕ್ಕಾಗಿ ಲೋಕಾಪುರರು ದೊಡ್ಡ ಹರಹೊಂದನ್ನು ನಿರ್ಮಿಸಿಕೊಂಡಿದ್ದಾರೆ. ವ್ಯಾಪ್ತಿ ಹರಹುಗಳ ಜೊತೆಗೆ ಹೊಗುವ ಕನ್ನಡ ಕಾದಂಬರಿಯ ಇತ್ತೀಚಿನ ಉತ್ಸಾಹ ಹಾಗೂ ಮಹತ್ವಾಕಾಂಕ್ಷೆಗೆ ಇದೂ ಸೇರ್ಪಡೆಯಾದಂತಾಗಿದೆ. ಎಂದು ಹೇಳಿದರು.  

ಕಥೆ ಕುರಿತು ಸಿಂದಗಿಯ ಡಾ.ಚನ್ನಪ್ಪ ಕಟ್ಟಿ ಮಾತನಾಡಿ ಡಾ.ಬಾಳಾಸಾಹೇಬ ಲೋಕಾಪೂರಕತೆಗಳಲ್ಲಿ ನೈಜ ಬದುಕಿನ ಚಿತ್ರಣ ಇದ್ದು ಅಳಿಸಿ ಹೋಗುವ ಸಂಸ್ಕ್ರತಿ ಪರಂಪರೆಯ ಜೊತೆಗೆ ಸಮಾಜದ ಓರೆ ಕೋರೆಗಳ ಬಗೆಗಿನ ಆಳವಾದ ಬದುಕು ಕಾಣಸಿತ್ತದೆ ಎಂದು ಹೇಳಿದರು.  

ಮುಖ್ಯ ಅತಿಥಿಯಾಗಿ ಮಧೋಳದ ಸಾಹಿತಿ ಸಿದ್ದಲಿಂಗಪ್ಪ ಇಟ್ಟಣ್ಣವರ ಮಾತನಾಡಿದರು.  

ಸಂವಾದದಲ್ಲಿ ಡಾ . ಉಮೇಶ ತಿಮ್ಮಾಪುರ, ಅಶೋಕ ಕಂದಗಲ್ಲ ಹಿ ವೆಂಕಟೇಶ ಗುಡೆಪ್ಪನವರ ವಿಜಯಲಕ್ಷ್ಮೀ ಎಸ್ .  ಭಾಗವಹಿಸಿದ್ದರು.ಕಸಾಪ ತಾಲ್ಲೂಕು ಅಧ್ಯಕ್ಷ  ಆನಂದ  ಪೂಜಾರ, ಸಿದ್ದರಾಮಶಿರೋಳ ಡಾ . ಚಂದ್ರಶೇಖರ ಕಾಳನ್ನವರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ,ದ್ರಾಕ್ಷಾಯಣಿ ಮಂಡಿ, ಮಾಜಿ ಕಸಾಪ ಜಿಲ್ಲಾ ಅಧ್ಯಕ್ಷ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಪತ್ರಕರ್ತ ಸಕಿರಣ ಬಾಳಾಗೋಳ, ಮಲ್ಲಿಕಾರ್ಜುನ ಹೆಗ್ಗಳಗಿ,ಅಶೋಕ ಕುಲಕರ್ಣಿ,ಡಾ.ಸಿದ್ದಣ್ಣ ಬಾಡಗಿ ಐ.ಎಮ್ . ಧಾರವಾಡಮಠ, ಗುರುನಾಥ ಸುತಾರ, ಸುಪ್ರಿಯಾ ನಿಪ್ಪಾಣಿ ,ಬಸವರಾಜ ಬಳ್ಳಾರಿ ಉಪಸ್ಥಿತರಿದ್ದರು.  


ಸುದ್ದಿ ಓದಿ