ವಿದ್ಯಾರ್ಥಿಗಳಿಗೆ ನಿತ್ಯ ಬಳಕೆಯ ಕಿಟ್ ವಿತರಣೆ
ಲೋಕದರ್ಶನವರದಿ
ಶಿಗ್ಗಾವಿ ೨೪: ಪಟ್ಟಣದ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ 76 ವಿದ್ಯಾಥರ್ಿಗಳಿಗೆ ನಿತ್ಯ ಬಳಕೆಯ ಕಿಟ್ಗಳನ್ನು ಸೇಂಟ್ ಮಿಲಾಗ್ರಿಸ್ ಬ್ಯಾಂಕ್ ಶಿಗ್ಗಾವಿ ಶಾಖೆಯ ವತಿಯಿಂದ ವಿತರಿಸಲಾಯಿತು.
ಕಿಟ್ ವಿತರಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಎಫ್ ಎಸ್ ಕೋಣವರ, ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ತನ್ನ ಶಾಖೆಯನ್ನು ತೆರೆದಿರುವ ಸೇಂಟ್ ಮಿಲಾಗ್ರಿಸ್ ಬ್ಯಾಂಕ್ ತನ್ನದೇ ಆದ ಸಮಾಜ ಸೇವೆ, ಆರೋಗ್ಯ ಸೇವೆ ಜೊತೆಗೆ ವಿಕಲಚೇತನ ಮಕ್ಕಳ ನೆರವಿಗಾಗಿ ತೊಡಗಿಕೊಂಡಿರುವ ಸಮಾಜದ ಬಗ್ಗೆ ಇರುವ ಇವರ ಖಾಳಜಿಯನ್ನು ತೋರಿಸುತ್ತದೆ ಇದು ಮಾದರಿ ಕಾರ್ಯವಾಗಿದೆ ಇದನ್ನು ಇನ್ನೊಂದು ಸಂಸ್ಥೆ ಅಳವಡಿಕೊಳ್ಳುವ ಮೂಲಕ ನೆರವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸೇಂಟ್ ಮಿಲಾಗ್ರಿಸ್ ಬ್ಯಾಂಕ್ನ ಹಾವೇರಿ ವಿಭಾಗದ ಅಭಿವೃದ್ಧಿ ಅಧಿಕಾರಿ, ರೋಹನ್ ನಾಯ್ಕ್, ಶಿಗ್ಗಾವಿ ಶಾಖೆಯ ವ್ಯವಸ್ಥಾಪಕ ಅಭಿಷೇಕ್ ತಡಸ, ಬಂಕಾಪೂರ ಶಾಖೆಯ ವ್ಯವಸ್ಥಾಪಕ ರಿಯಾಜ್ ಅಹ್ಮದ್ ಹರವಿ ಮತ್ತು ವಿವಿಧ ವ್ಯವಸ್ಥಾಪಕರಾದ ಶಿದ್ದನಗೌಡ ಪಾಟೀಲ, ಮಂಜುನಾಥ ಬೋಯಿತೆ, ಪಟ್ಟಣದ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮುಖ್ಯಸ್ಥ ನಾಗರಾಜ ದ್ಯಾಮನಕೊಪ್ಪ, ಶಾಲೆಯ ಶಿಕ್ಷಕರು, ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 