ಮಡಿವಾಳಪ್ಪ ಬೀದರಗಡ್ಡಿ ಅವರ ಹುಟ್ಟುಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಯರಗಟ್ಟಿ 30 : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸವದತ್ತಿ ಎಲ್ಲಮ್ಮ ಮತಕ್ಷೇತ್ರದ ಭಾಜಪಾ ಮುಖಂಡರಾದ ಮಡಿವಾಳಪ್ಪ ಬೀದರಗಡ್ಡಿ ಅವರ 46ನೇ ಹುಟ್ಟುಹಬ್ಬದ ನಿಮಿತ್ಯ ಅವರ ಅಭಿಮಾನಿ ಬಳಗದ ವತಿಯಿಂದ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಅವರ ಅಭಿಮಾನಿಗಳು ಹಾಗೂ ಬಾರತೀಯ ಜನತಾ ಪಾರ್ಟಿ ಮುಖಂಡರು ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂಧರ್ಭದಲ್ಲಿ ಮುಖಂಡರಾದ ಸದಾನಂದ ಹಣಬರ ಮಾತನಾಡಿದ ಅವರ ಸಾಮಾಜಿಕ ಸೇವೆ ಪರಗಣಿಸಿ ಮುಂದಿನ ದಿನಮಾನಗಳಲ್ಲಿ ಇವರಿಗೆ ಎಲ್ಲರೂ ಆಶೀರ್ವಾದ ಮಾಡಬೇಕು ಮತ್ತು ಸವದತ್ತಿ ಎಲ್ಲಮ್ಮ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ತೆರಳಿ ಶುಭ ಹಾರೈಸೋಣ ಎಂದು ಹೇಳಿದರು.
ಮಾಜಿ ಕುಮಾರ ಹಿರೇಮಠ ಮಾತನಾಡಿ ಸಾಮಾಜಿಕ ಸೇವೆ ಮಾಡುತ್ತಾ ನೂರಾರು ಕಾಲ ಸುಖವಾಗಿ ಬಾಳಿರಿ ಹೀಗೆ ಜನಸೇವೆ ನಿರಂತರವಾಗಿ ಇರಲಿ ಎಂದು ಹೇಳಿದರು.ಈ ಸಂಧರ್ಭದಲ್ಲಿ ಮುಖಂಡರುಗಾಳದ ಇಮಾಮಸಾಬ ಹುಸೇನನೈಕರ, ಡಾ, ವಿಶ್ವನಾಥ ತಾಂವಶಿ, ಶಂಕರ ಮುಗಳಿ, ಅಣ್ಣಾಸಾಹೇಬ ಸುಭೇದಾರ, ಇಮ್ತಿಯಾಜ್ ಖಾದ್ರಿ, ಮುದಕಪ್ಪ ತಡಸಲೂರ, ಈರಣ್ಣ ಮಠಪತಿ, ದುಂಡಯ್ಯ ಹಿರೇಮಠ, ಬಾಪುಗೌಡ ಪಾಟೀಲ್, ಶಿವಾನಂದ್ ಪಟ್ಟಣಶೆಟ್ಟಿ, ವಾಸಿಂ ರಾಜೇಖಾನ, ಉದ್ದಪ್ಪ ಹಾರುಗೋಪ್ಪ, ಬಾಬು ಚನ್ನಮೇತ್ರಿ, ಶಂಕರ ದಠೇನ್ನವರ ಹಾಗೂ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು.