ಮುಂಡರಗಿ

ಮಹಿಳೆಯರಿಗೆ ಗ್ಯಾರಂಟಿ ಕಾರ್ಡ ವಿತರಿಸಿದ ಮಾಜಿ ಶಾಸಕ ಪಾಟೀಲ

ಮಹಿಳೆಯರಿಗೆ ಗ್ಯಾರಂಟಿ ಕಾರ್ಡ ವಿತರಿಸಿದ ಮಾಜಿ ಶಾಸಕ ಪಾಟೀಲ

ಮುಂಡರಗಿ :ದೇಶದಲ್ಲಾಗಲಿ ರಾಜ್ಯದಲ್ಲಾಗಲಿ ಸಾರ್ವಜನಿಕ ವಲಯದಲ್ಲಿ ಜನತೆಗೆ ಕೊಟ್ಟ ಆಶ್ವಾಸನೆಗಳನ್ನು ಅನುಷ್ಠಾನಗೊಳಿಸುವಂತಹ ಏಕಕೈ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರೋಣ ವಿಧಾನ ಸಭಾ ಮತಕ್ಷೇತ್ರದ ಮಾಜಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಮುಂಡರಗಿಯ ತಾಲೂಕ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾಯರ್ಾಲಯದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಶಿರಹಟ್ಟಿ ಮತಕ್ಷೇತ್ರ ವ್ಯಾಪ್ತಿಯ ಮುಂಡರಗಿ ಮಂಡಳದ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷವು ಮುಂಬರುವಂತಹ 2023ನೇ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ. ರಾಜ್ಯದ ಜನತೆಗೆ ಅನುಕೂಲವಾಗುವಂತಹ "ರಾಜ್ಯದ ಪ್ರತಿ ತಿಂಗಳೂ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಹಾಗೂ ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು 10ಕೆಜಿ ಅಕ್ಕಿ ಉಚಿತ ಹಾಗೂ ರಾಜ್ಯದ ಪ್ರತಿ ಕುಟುಂಬದ ಮುಖ್ಯಸ್ಥೆ ಮಹಿಳೆಗೆ ಪ್ರತಿ ತಿಂಗಳು 2000/- ರೂ ಪರಿಹಾರ ನೀಡುವದಾಗಿ ಘೋಷಣೆ ಮಾಡಿದ ಯೋಜನೆಯ ಗ್ಯಾರಂಟಿ ಕಾರ್ಡನ್ನು ಮಹಿಳೆಯರಿಗೆ ವಿತರಿಸಿ ಮಾತನಾಡಿದರು.

ಕಾಂಗ್ರೇಸ್ ಪಕ್ಷವು ಭಾರತ ದೇಶದ ಸ್ವಾತಂತ್ರ್ಯ ಹೋರಾಟದಿಂದಲು ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವದ ಚುನಾವಣೆಯ ವ್ಯವಸ್ಥೆ ಬಂದಾಗಿನಿಂದಲು ಜನತೆಗೆ ಕೊಟ್ಟ ಮಾತಿನಿಂತೆ ನಡೆದುಕೊಂಡು ಬಂದಿರುವಂತಹ ಜನಪರವಾದ ಪಕ್ಷವಾಗಿದೆ. ಹಾಗೇ ಕಳೆದ 2013 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು 165 ಬರವಶಗಳನ್ನು ಪ್ರನಾಳಿಕೆಯ ಮೂಲಕ ಕೊಟ್ಟಿತ್ತು ಅವುಗಳಲ್ಲಿ ಅಂದಿನ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು 156 ಆಶ್ವಾಸನೆಗಳನ್ನು ಜಾರಿಗೆ ತರುವದರ ಮೂಲಕ ಕರ್ನಾಟಕ ರಾಜ್ಯ ಪ್ರತಿ ಊರಿನ ಪ್ರತಿಯೊಂದು ಕುಟುಂಬಕ್ಕೂ ಯೋಜನೆಗಳನ್ನು ತಲುಪಿಸಿದ್ದಾರೆ. ಆದರೆ ಬಿ.ಜೆ.ಪಿ ಸರಕಾರವು ಚುನಾವಣೆಯ ಸಂಧರ್ಭದಲ್ಲಿ ಜನತೆಗೆ 650 ಆಶ್ವಾಸನೆಗಳನ್ನು ಕೊಟ್ಟು ಜನತೆಗೆ ಸುಳ್ಳು ಹೇಳಿ ಮತ ಪಡೆದು ಅಧಿಕಾರಕ್ಕೆ ಬಂದು ಇದುವರಿಗೂ ಕೇವಲ 56 ಆಶ್ವಾಸನೆಗಳನ್ನು ಮಾತ್ರ ಅನುಷ್ಠಾನ ಮಾಡುವದರೊಂದಿಗೆ ದೇಶದ ಹಾಗೂ ರಾಜ್ಯದ ಜನತೆಗೆ ಸುಳ್ಳು ಹೇಳುವದರೊಂದಿಗೆ ಮೋಸ, ವಂಚನೆ ಮಾಡಿದ್ದಾರೆ.

ಆದರೆ ಬಿ.ಜೆ.ಪಿ ಪಕ್ಷದ ಜನವಿರೋಧಿ ದುರಾಢಳಿತದಿಂದ ರಾಜ್ಯದ ಜನತೆಯು ರೋಷಿಹೊಗಿದ್ದಾರೆ, ಆದ್ದರಿಂದ ಇನ್ನೇನು ಎಪ್ರೇಲ್ ಅಥವಾ ಮೇ ದಲ್ಲಿ ಬರುವಂತಹ 2023 ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಯು ಮತ್ತೆ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರುವದಕ್ಕೆ ಮುಂದಾಗಿದ್ದು, ಆದ್ದರಿಂದ  ಜನತೆಯ ಆರ್ಶಿವಾದದಿಂದ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣ ಕಾಂಗ್ರೆಸ್ ಪಕ್ಷವು ಈಗಾಗಲೇ ಘೋಷಣೆ ಮಾಡಿದಂತಹ ರಾಜ್ಯದ ಪ್ರತಿ ತಿಂಗಳೂ ಪ್ರತಿ ಮನೆಗೂ 200 ವಿನಿಟ್ ವಿದ್ಯುತ್ ಹಾಗೂ ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು 10 ಕೆಜಿ ಅಕ್ಕಿ ಉಚಿತ ಹಾಗೂ ರಾಜ್ಯದ ಪ್ರತಿ ಕುಟುಂಬದ ಮುಖ್ಯಸ್ಥೆ ಮಹಿಳೆಗೆ ಪ್ರತಿ ತಿಂಗಳು 2000/- ರೂ ಪರಹಾರ ನೀಡುವದಕ್ಕಾಗಿಯೇ ಚುನಾವಣೆಯ ಪೂರ್ವದಲ್ಲಿ ಆಶ್ವಾಸನೆಗಳನ್ನು ಜಾರಿಗೆ ತರುವಂತಹ ಗ್ಯಾರಂಟಿ ಕಾರ್ಡನ್ನು ಮಹಿಳೆಯರಿಗೆ ವಿತರಣೆ ಮಾಡಲಾಗುತ್ತದೆ, ಆದ್ದರಿಂದ ರಾಜ್ಯದ ಮತದಾರರು ಜನತೆಗೆ ಕೊಟ್ಟ ಮಾತಿನಂತೆ ನಡೆದುಕೋಳುವಂತಹ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವದಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.

ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವಂತಹ ಭಾರತೀಯ ಜನತಾ ಪಾಟರ್ಿಯು ಭಾರತ ದೇಶದ ಮೂಲ ನಿವಾಸಿಗಳಾದ ರೈತರ, ಕೃಷಿ ಕಾರ್ಮಿಕರ, ಶೋಷಿತರ, ದಿನ ದಲಿತ, ಬಡವರ, ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವದರ ಮೂಲಕ ಜನವಿರೋಧಿ ಆಡಳಿತ ನಡೆಸುವದರೊಂದಿಗೆ, ಸಾರ್ವಜನಿಕರಿಗೆ ಬೇಕಾಗಿರುವಂತಹ ಅಗತ್ಯ ವಸ್ತುಗಳಾದ ಇಂಧನ, ಅನಿಲ ಗ್ಯಾಸ್, ಹಾಗೂ ಪ್ರತಿದಿನದ ಜೀವನೋಪಯೋಗಿ ದಿನಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಾಡುವದರ ಮೂಲಕ ಶೋಷಿತ ವರ್ಗದ ಜನರನ್ನು ಸಂಕಷ್ಟಕ್ಕೆ ತೊಂದರೆ ಮಾಡಿದ್ಧಾರೆ.

  ಹಾಗೇ ಬಿ.ಜೆ.ಪಿ ಸರಕಾರದ ಬೆಲೆ ಏರಿಕೆಯಿಂದ ಹಾಗೂ ಪ್ರತಿ ವಸ್ತುಗಳಿಗೂ ಅಧಿಕ ತೆರಿಗೆ ಕಟ್ಟುವದರ ಮೂಲಕ ಜನಸಾಮಾನ್ಯರಿಗೆ ಆಗುತ್ತಿರುವಂತಹ ತೊಂದರೆಗಳನ್ನು ಸರಿಪಡಿಸುವದಕ್ಕಾಗಿ ಕಾಂಗ್ರೇಸ್ ಪಕ್ಷವು ಮುಂದಿನ ಎಫ್ರೇಲ್ ಅಥವಾ ಮೇ ದಲ್ಲಿ ನಡೆಯುವಂತಹ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ನಾಡಿನ ಮತದಾನ ಪ್ರಭುಗಳು ಮತ್ತೆ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕಾಂಗ್ರೇಸ್ ಪಕ್ಷವು ಪ್ರತಿ ಮನೆಗೂ 200 ವಿನಿಟ್ ವಿದ್ಯುತ್, ಪ್ರತಿ ಕುಟುಂಬಕ್ಕೂ 10 ಕೆಜಿ ಅಕ್ಕಿ ಉಚಿತವಾಗಿ ನೀಡುವದರೊಂದಿಗೆ ರಾಜ್ಯದ ಪ್ರತಿ ಕುಟುಂಬದ ಮುಖ್ಯಸ್ಥೆ ಮಹಿಳೆಗೆ ಪ್ರತಿ ತಿಂಗಳು 2000/- ವರ್ಷಕ್ಕೆ 24000/- ರೂ ಅವರ ಖಾತೆಗೆ ನೇರವಾಗಿ ಪ್ರತಿ ತಿಂಗಳು 2000/- ರೂಪಾಯಿ ಜಮಾ ಮಾಡುತ್ತೆಂಬ ಗ್ಯಾರಂಟಿ ಕಾರ್ಡ ನೀಡುತ್ತಿದ್ದು, ನುಡಿದಂತೆ ನಡೆದ ಸರಕಾರವೆಂದರೆ ಅದು ಕಾಂಗ್ರೇಸ್ ಸರಕಾರ ಆದ್ದರಿಂದ ಮುಂಬರುವಂತಹ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರುವದರ ಮೂಲಕ ರಾಜ್ಯದ ಹಾಗೂ ಶಿರಹಟ್ಟಿ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ಸಹಾಯ, ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಸರ್ವರನ್ನು ಶರಣಪ್ಪ ಕುಬಸದ ಸ್ವಾಗತಿಸಿದರೆ, ಕೊಟ್ರೇಶ ಅಂಗಡಿ, ನಿರೂಪಿಸಿ ಕೊನೆಗೆ ವಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡರಗಿ ತಾಲೂಕ ಬ್ಲಾಕ್ ಕಾಂಗ್ರೇಸ್ ಕಮೀಟಿ ಅಧ್ಯಕ್ಷರಾದ ಡಿ.ಡಿ.ಮೋರನಾಳ, ಕೆ.ಪಿ.ಸಿ.ಸಿಯ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮುಂಡವಾಡ, ತಾಲೂಕ ಬ್ಲಾಕ್ ಕಾಂಗ್ರೇಸ್ ಕಮೀಟಿ ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಕುರಿಯವರ, ಯಲ್ಲಪ್ಪ ಹೊಂಬಳಗಟ್ಟಿ, ರಾಜಾಭಕ್ಷಿ ಬೇಟಗೇರಿ, ಎಚ್. ವಿರೂಪಾಕ್ಷಗೌಡ ಹರಗಿನಡೋಣಿ, ಲಕ್ಷ್ಮೀ ದೇವಿ ಮಾಗಡಿ, ಪ್ರತಿಭಾ ಹೊಸಮನಿ, ಮೇಘಾ ಪಾಟೀಲ, ದೇವಕ್ಕ ದಂಡಿನ, ಪಾರ್ವತಿ ಕುಬಸದ, ದುದ್ದುಪೀರ ಹಣಗಿ, ಸುರೇಶ ಮಾಗಡಿ, ರಾಘವೇಂದ್ರ ಕುರಿಯವರ, ಮೌಲಾಸಾಬ ಬಾಗವಾನ ಮುಂತ್ತಾದವರು ಪಾಲ್ಗೊಂಡಿದ್ದರು 

ಸುದ್ದಿ ಓದಿ