ಮಕ್ಕಳಲ್ಲಿ ಶಿಸ್ತು, ಪ್ರಾಮಾಣಿಕತೆ ಅವಶ್ಯಕ : ರಮೇಶ ಗಂಗನಳ್ಳಿ

ಮಕ್ಕಳಲ್ಲಿ ಶಿಸ್ತು, ಪ್ರಾಮಾಣಿಕತೆ ಅವಶ್ಯಕ : ರಮೇಶ ಗಂಗನಳ್ಳಿ Discipline and honesty are essential in children: Ramesh Ganganalli

ಆಲಮೇಲ 04 :  ಶಾಲಾ ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯರಿ ಎಂದು ಕಡಣಿ ಪರಮಾನಂದ ಭೋಗಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ ಗಂಗನಳ್ಳಿ ಹೇಳಿದರು.     ಅವರು ತಾಲೂಕಿನ ದೇವರ ನಾವದಗಿ ಗ್ರಾಮದ ಭಾಗ್ಯವಂತಿ ದೇವಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಸ್ತು ಎಂದರೆ ಶಿಕ್ಷೆಯಲ್ಲ ಬದಲಿಗೆ ಮಕ್ಕಳಲ್ಲಿ ಸ್ವಯಂ ನಿಯಂತ್ರಣ ಮತ್ತು ಜವಾಬ್ದಾರಿಯನ್ನು ಬೆಳೆಸುವ ಪ್ರಕ್ರಿಯೆಯಾಗಿದೆ ಆದುದರಿಂದ ಜೀವನದಲ್ಲಿ ಶಿಸ್ತು ಸಂಸ್ಕಾರ ಮತ್ತು ಪ್ರಾಮಾಣಿಕತೆಯನ್ನು ಬೆಳೆಸುವಲ್ಲಿ ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿ ಬಹಳಷ್ಟಿದೆ ಎಂದರು.     

ದಿವ್ಯ ಸಾನಿಧ್ಯ ವಹಿಸಿದ್ದ ಕುಮಸಿ ದತ್ತ ಪಾದುಕಾಪೀಠದ ಧರ್ಮದರ್ಶಿ ರಘುನಾಥ್ ಭಟ್ ಜೋಶಿ ಅವರು ಮಾತನಾಡಿ  ಹೊಸ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಮಕ್ಕಳು ಬೆಳೆಯುವಂತಾಗಲಿ, ದೇಶದ ಅಭಿವೃದ್ಧಿಗೆ ಗ್ರಾಮೀಣ ಭಾಗದ ರೈತರ ಮಕ್ಕಳ ಕೊಡುಗೆ ನಿರಂತರವಾಗಿ ಸಿಗುವಂತಾಗಲಿ ಎಂದು ಹಾರೈಸಿದರು.   

ಸಾನಿಧ್ಯವನ್ನು ವೇ. ಬಸಲಿಂಗಯ್ಯ ಹಿರೇಮಠ,  ಸಂಸ್ಥೆಯ ಅಧ್ಯಕ್ಷ ಅಶೋಕ್ ಯರಗಲ್, ಕೆ.ಜಿ.ಗುಗ್ಗರಿ ಕಾಲೇಜು ಪ್ರಾಚಾರ್ಯ ಎಂ.ಜಿ. ಉಪ್ಪಾರ, ಪತ್ರಕರ್ತ ಗುರು ಆರ್ ಹಿರೇಮಠ ಮಾತನಾಡಿದರು. ಶಿಕ್ಷಕ ಎಸ್‌. ಜಿ .ಖೈನೂರ, ಶಿವಕುಮಾರ ಬೊಮ್ಮನಜೋಗಿ, ಆಲಮೇಲ ಎಪಿಎಂಸಿ ಉಪಾಧ್ಯಕ್ಷ ಶಿವಶರಣ ಗುಂದಗಿ, ಮಡಿವಾಳ ಕುಮಶಿ, ಸತೀಶ ಗುಗ್ಗರಿ, ಶರಣು ಧರ್ಮಗೊಂಡ, ರಾಜೆಸಾಬ ಗಣಿ ಹಾರ, ಸಿದ್ದಲಿಂಗ ಸುಂಬಡ, ರಮೇಶ ಬಮ್ಮನಜೋಗಿ , ಹನುಮಂತರಾಯ ಬಿರಾದಾರ, ಸಿದ್ದನಗೌಡ ಪೂಜಾರಿ, ಭತ್ತ ಗೌಡ, ಗುರುಪಾದಗೌಡ ಬಿರಾದಾರ, ಶಿವಾನಂದ ವಾಲಿಕಾರ್, ಲಕ್ಷ್ಮಣ ಮರಾಠೆ, ಸುಭಾಷ ಉಪ್ಪಿನ ವೇದಿಕೆಯಲ್ಲಿದ್ದರು.    

 ಶಾಲೆಯ ಮುಖ್ಯ ಗುರು ಮಹಾಂತೇಶ ಮೋಸಲಗಿ ಸರ್ವರನ್ನು ಸ್ವಾಗತಿಸಿದರು, ಶಿಕ್ಷಕಿ ಶಾಂತಾ ಮೋಸಲಗಿ ನಿರೂಪಿಸಿದರು, ಶಿಕ್ಷಕಿ ಶಾರದಾ ವಂದಿಸಿದರು.   ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ವಿವಿಧ ಶಾಲೆಗಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.