ಅಂತರರಾಷ್ಟ್ರೀಯ

2 ವರ್ಷಗಳಲ್ಲಿ ಮೊದಲ ಬಾರಿಗೆ ‘ಬಾಲಿ’ಗೆ ನೇರ ಅಂತರಾಷ್ಟ್ರೀಯ ವಿಮಾನಗಳು ಪುನರಾರಂಭ

2 ವರ್ಷಗಳಲ್ಲಿ ಮೊದಲ ಬಾರಿಗೆ ‘ಬಾಲಿ’ಗೆ ನೇರ ಅಂತರಾಷ್ಟ್ರೀಯ ವಿಮಾನಗಳು ಪುನರಾರಂಭ

ಡೆನ್ಪಾಸರ್: ಫೆಬ್ರವರಿ 05 : ಸುಮಾರು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಬಾಲಿಗೆ ಅಂತಾರಾಷ್ಟ್ರೀಯ ವಿಮಾನಗಳು ಪುನಾರರಂಭಗೊಂಡಿದೆ. ಸಂಪೂರ್ಣವಾಗಿ ಲಸಿಕೆ ಹಾಕಿದ ಪ್ರಯಾಣಿಕರು ಆರ್ಥಿಕ ಸಚಿವಾಲಯದಿಂದ ಪ್ರಮಾಣೀಕರಿಸಿದ ಹೋಟೆಲ್‌ನಲ್ಲಿ ಇಲ್ಲವೇ ಲೈವ್‌ಬೋರ್ಡ್ ಬೋಟ್‌ನಲ್ಲಿ ಐದು ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗುತ್ತದೆ. ಇನ್ನೊಂದೆಡೆ ಒಂದು ಡೋಸ್ COVID-19 ಲಸಿಕೆಯನ್ನು ಪಡೆದ ಪ್ರಯಾಣಿಕರು ಏಳು ದಿನಗಳವರೆಗೆ ಕ್ವಾರಂಟೈನ್ ಆಗಬೇಕು ಎಂದು ಇಂಡೋನೇಷಿಯಾ ಸರ್ಕಾರ ಷರತ್ತು ವಿಧಿಸಿದೆ.

ತಮ್ಮ COVID-19 ಪ್ರಕರಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತಹ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಪೂರೈಸುವ 19 ದೇಶಗಳಿಂದ ವಿದೇಶಿ ಆಗಮನವನ್ನು ಬಾಲಿ ಸ್ವಾಗತಿಸುತ್ತದೆ ಎಂದು ಅಧಿಕಾರಿಗಳು ಅಕ್ಟೋಬರ್‌ನಲ್ಲಿ ಹೇಳಿದ್ದರು. ಆದರೆ ಗರುಡ ಇಂಡೋನೇಷ್ಯಾವು ಟೋಕಿಯೊದಿಂದ ಎರಡು ವರ್ಷಗಳಲ್ಲಿ ತನ್ನ ಮೊದಲ ಹಾರಾಟವನ್ನು ನಡೆಸುವವರೆಗೆ ಬಾಲಿಗೆ ಯಾವುದೇ ನೇರ ಅಂತರರಾಷ್ಟ್ರೀಯ ವಿಮಾನಗಳು ಗುರುವಾರದವರೆಗೆ ಇರಲಿಲ್ಲ. ಸಿಂಗಾಪುರ್ ಏರ್‌ಲೈನ್ಸ್ ಫೆ.16 ರಿಂದ ಬಾಲಿಯ ಡೆನ್‌ಪಾಸರ್‌ಗೆ ನೇರ ಮಾರ್ಗವನ್ನು ಪರಿಚಯಿಸಲಿದೆ ಎಂದು ಬಾಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕ ತೌಫಾನ್ ಯುಧಿಸ್ತಿರಾ ಹೇಳಿದ್ದಾರೆ.

ಇಂಡೋನೇಷ್ಯಾ ಇತ್ತೀಚಿನ 24 ಗಂಟೆಗಳ ಅವಧಿಯಲ್ಲಿ ಗುರುವಾರ 27,197 ಹೊಸ ಕೊರೊನಾ ವೈರಸ್ ಸೋಂಕುಗಳು ಮತ್ತು 38 ಸಾವುಗಳನ್ನು ವರದಿ ಮಾಡಿದೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ದೇಶವು ಒಟ್ಟು 4.4 ಮಿಲಿಯನ್‌ಗಿಂತಲೂ ಹೆಚ್ಚು ಪ್ರಕರಣಗಳನ್ನು ಕಂಡಿದೆ.

ಬಾಲಿಯಲ್ಲಿ ಪ್ರವಾಸೋದ್ಯಮವು ಆದಾಯದ ಮುಖ್ಯ ಮೂಲವಾಗಿದೆ, ಮುಸ್ಲಿಂ ದ್ವೀಪಸಮೂಹ ರಾಷ್ಟ್ರದಲ್ಲಿ ಮುಖ್ಯವಾಗಿ 4 ಮಿಲಿಯನ್‌ಗಿಂತಲೂ ಹೆಚ್ಚು ಹಿಂದೂ ಧರ್ಮಿಯರಿಗೆನೆಲೆಯಾಗಿದೆ. ಎರಡು ದಶಕಗಳ ಹಿಂದೆ ವಿದೇಶಿಯರನ್ನು ಗುರಿಯಾಗಿಸಿಕೊಂಡು ಮಾರಣಾಂತಿಕ ಭಯೋತ್ಪಾದಕ ದಾಳಿಯಿಂದ ಪ್ರವಾಸಿಗರು ಭಯಭೀತರಾದ ನಂತರ ಬಾಲಿಯ ಪ್ರವಾಸಿ ಕ್ಷೇತ್ರಗಳು ನಿರ್ಜನವಾಗಿದ್ದವು, ಎಲ್ಲಾ ದೇಶಗಳ ಪ್ರಯಾಣಿಕರಿಗೆ ಬಾಲಿ ಪುನಃ ತೆರೆದುಕೊಳ್ಳುವುದರಿಂದ ದ್ವೀಪದ ಆರ್ಥಿಕತೆ ಹೆಚ್ಚಾಗಲಿದೆ.

ಸುದ್ದಿ ಓದಿ