ಅಮೆರಿಕಾ- ರಷ್ಯಾ ನಡುವೆ ರಾಜತಾಂತ್ರಿಕ ಜಟಾಪಟಿ
ವಾಷಿಂಗ್ಟನ್, ಜ ೧೩ ಉಕ್ರೇನ್ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಹಾಗೂ ರಷ್ಯಾ ನಡುವಣ ರಾಜತಾಂತ್ರಿಕ ಜಟಾಪಟಿ ಮುಂದುವರೆದಿದೆ.
ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ವೆಂಡಿ ಶೇರ್‌ಮನ್, ರಾಜತಾಂತ್ರಿಕ ಅಥವಾ
ಸಂಘರ್ಷ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವಂತೆ ರಷ್ಯಾಗೆ ಎಚ್ಚರಿಕೆ
ನೀಡಿದ್ದಾರೆ.
ಉಕ್ರೇನ್ ಸಂಬಂಧ ಅಮೆರಿಕಾ ಹಾಗೂ ರಷ್ಯಾ ಉಂಟಾಗಿರುವ ಉದ್ವಿಗ್ನತೆ ಶಮನಗೊಳಿಸುವ
ಭಾಗವಾಗಿ ಈ ವಾರ ನಡೆಸಲಾದ ೩ ರಾಜತಾಂತ್ರಿಕ ಸಭೆಗಳ ಪೈ ಕಿ ಒಂದಾದ ನ್ಯಾಟೊ ಹಾಗೂ
ರಷ್ಯಾದೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ ರಷ್ಯಾದ ಉಪ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಗ್ರುಶ್ಕೋ, ರಷ್ಯಾದ
ಬೇಡಿಕೆಗಳನ್ನು ನ್ಯಾಟೊ ಆಯ್ಕೆ ಮಾಡಲು ಸಾಧ್ಯವಿಲ್ಲ. ಉಕ್ರೇನ್, ನ್ಯಾಟೊ ಒಕ್ಕೂಟ
ಎಂದಿಗೂ ಸೇರಬಾರದು ಎಂಬುದು ನಮ್ಮ ಬೇಡಿಕೆಯ ಪಟ್ಟಿಯಲ್ಲಿದೆ ಎಂದು ಹೇಳಿದ್ದಾರೆ.
ಉಕ್ರೇನ್, ನ್ಯಾಟೊ ಸೇರ್ಪಡೆಗೆ ಅಮೆರಿಕ ಹಾಗೂ ಇತರ ನ್ಯಾಟೊ ಸದಸ್ಯ ರಾಷ್ಟ್ರಗಳು ಸಮ್ಮತಿಸಿಲ್ಲ ಎಂದು ವೆಂಡಿ ಶೇರ್‌ಮನ್ ಸ್ಪಷ್ಟಪಡಿಸಿದ್ದಾರೆ.
ಸೇನಾ ಮೈತ್ರಿಕೂಟ ತೆರೆದ ನೀತಿಯಾಗಿದ್ದು, ಉಕ್ರೇನ್ ಸಂವಿಧಾನದ ಭಾಗವಾಗಿ ನ್ಯಾಟೊ
ಸೇರುವ ಗುರಿ ಹೊಂದಲಾಗಿದೆ. ಸುಮಾರು ೧ ಲಕ್ಷ ರಷ್ಯಾ ಸೈನಿಕರು ಉಕ್ರೇನ್ ಗಡಿ ಬಳಿ
ಜಮಾಯಿಸಿದ್ದು ಯಾವುದೇ ಸಂದರ್ಭದಲ್ಲಿ ದಾಳಿ ನಡೆಸುವ ಭೀತಿ ಉಂಟುಮಾಡಿದೆ.