ಯುಎಇ ಪ್ರಧಾನಿಯಿಂದ ಭಾರತೀಯರಿಗೆ ದೀಪಾವಳಿ ಶುಭಾಷಯ
ದುಬೈ, 14: ಯು ಎ ಇ ಪ್ರಧಾನಿ ಹಾಗೂ ದೇಶದ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್.... ದೀಪಾವಳಿ ಸಂದರ್ಭದಲ್ಲಿ ವಿಶ್ವದಾದ್ಯಂತ ನೆಲೆಸಿರುವ ಎಲ್ಲ ಭಾರತೀಯರಿಗೆ ಟ್ವೀಟರ್ ಮೂಲಕ ದೀಪಾವಳಿ ಹಬ್ಬದ ಶುಭಾಶಯ ಹೇಳಿದ್ದಾರೆ. ಯುಎಇ ಜನರ ಪರವಾಗಿ ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
‘ವಿಶ್ವದಾದ್ಯಂತ ದೀಪಾವಳಿ ಆಚರಿಸುವವರಿಗೆ ಯುಎಇ ಜನರ ಪರವಾಗಿ ನನ್ನ ಶುಭಾಶಯ ತಿಳಿಸುತ್ತೇನೆ. ನಂಬಿಕೆ ಎಂಬ ಬೆಳಕು ಯಾವಾಗಲೂ ನಮ್ಮನ್ನು ಒಗ್ಗೂಡಿಸಿ, ಮುನ್ನಡೆಸಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಏತನ್ಮಧ್ಯೆ, ಅಬುಧಾಬಿ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸಹ ಭಾರತೀಯರಿಗೆ ದೀಪಾವಳಿ ಶುಭ ಹಾರೈಸಿದ್ದಾರೆ.