ಢವಳನಾಥ ಶಾಲೆಯು ಖೋ ಖೋ ದಲ್ಲಿ ಪ್ರಥಮ
ಮುಧೋಳ 01:ಮಹಾಲಿಂಗಪುರ ಸಮೀಪದ ಢವಳೇಶ್ವರದ ಶ್ರೀ ಢವಳನಾಥ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಕ್ಕಿಮರಡಿಯಲ್ಲಿ ನಡೆದ ಪ್ರಾಥಮಿಕ ಶಾಲಾ ಮಹಾಲಿಂಗಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಸಾಧನೆ ಮಾಡಿದ್ದಾರೆ ಬಾಲಕಿ ಮತ್ತು ಬಾಲಕರ ಖೋಖೋ ಪ್ರಥಮ ಸ್ಥಾನ ಪಡೆದಿದ್ದಾರೆ ಬಾಲಕರು ಮಹಾಲಿಂಗಪುರ ವಲಯದಲ್ಲಿ ಸತತ 15 ವರ್ಷ ಗೆಲುವು ಪಡೆದು ದಾಖಲೆ ನಿರ್ಮಿಸಿದ್ದಾರೆ ಅಲ್ಲದೆ ವೈಯಕ್ತಿಕ ವಿಭಾಗದ 80 ಮೀ ಹರ್ಡಲ್ಸ ಸೌಮ್ಯಾ ಶಿವಾನಂದ ಪಟ್ಟೇದ, ಪ್ರಥಮ ಮನೋಜ ಉಳ್ಳಾಗಡ್ಡಿ ತೃತೀಯ, ಎತ್ತರ ಜಿಗಿತದಲ್ಲಿ ಸೀಮಾ ಕೌಜಲಗಿ ದ್ವಿತೀಯ, ಸಚಿನ ಕಿಲಾರಿ ತೃತೀಯ. ಸವಿತಾ ಪ್ರಕಾಶ ಪಾಶ್ಚಾಪೂರ 600 ಮೀ ಓಟ ತೃತೀಯ ಹಾಗೂ ಬಾಲಕಿಯರ ರಿಲೆ ದ್ವಿತೀಯ ಸ್ಥಾನ ಪಡೆದು ಒಟ್ಟು 37 ಅಂಕದೊಂದಿಗೆ ಶಾಲೆಗೆ ಸಮಗ್ರ ವೀರಾಗೃಣಿ ಪ್ರಶಸ್ತಿಯನ್ನು ತಂದಿದ್ದಾರೆ ವಿಜೇತರಾದ ಎಲ್ಲ ಕ್ರೀಡಾಪಟು ಗಳನ್ನು ,ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಸಿ.ವಿ.ದಾದನಟ್ಟಿ ಅವರನ್ನು ಸಂಸ್ಥೆಯ ಅಧ್ಯಕ್ಷ ಪಿ.ಜಿ.ಬಂಗಿ ಹಾಗೂ ಸದಸ್ಯರು, ಮುಖ್ಯೋಪಾಧ್ಯಾಯ ಕೆ.ಜಿ.ನೇಗಿನಹಾಳ , ಶಿಕ್ಷಕ ಅನೀಲ ಚೌರಡ್ಡಿ, ದಾನೇಶ ಹುಚನಟ್ಟಿ, ಭಾಗ್ಯಶ್ರೀ ಕಲ್ಲಪ್ಪಗೌಡ್ರ, ಎಲ್ ಎಸ್ ಅರಕೇರಿ ಅಭಿನಂದಿಸಿದ್ದಾರೆ ಅಲ್ಲದೆ ಇದೆಶಾಲೆಯಲ್ಲಿ ಕಲಿತು ಮಾಜಿ ಖೋಖೋ ಆಟಗಾರರಾದ ಹೆಸ್ಕಾಂ,ಮೆಸ್ಕಾಂ, ಕೆಪಿಟಿಸಿಎಲ್ ದಲ್ಲಿ ನೌಕರರಾಗಿರುವ ಹೊಳೆಬಸು ತಲ್ಲೂರ,ಮಹೇಶ ಪಟ್ಟಣಶೆಟ್ಟಿ,ಮಹಾಂತೇಶ ಯರಗಟ್ಟಿ, ನಾಗೇಶ ಕಮತ, ಇವರು ಆಟದ ಮಕ್ಕಳಿಗೆ ಹೊಸ ಸಮವಸ್ತ್ರ ಕೊಡುಗೆಯನ್ನು ಮಾಡಿದ್ದಾರೆ ಅವರಿಗೂ ಸಹ ಅಭಿನಂದನೆ ಸಲ್ಲಿಸಿದ್ದಾರೆ. ಬಾಕ್ಸ್
ಅಭಿನಂದನೆ: ತಾಲ್ಲೂಕಿನ ದೈಹಿಕಶಿಕ್ಷಣ ಪರೀವೀಕ್ಷಕರಾದ ಶ್ರೀಶೈಲ ಕುರಣಿ ಯವರು ಸತತ ಖೋಖೋ 15 ವರ್ಷದ ಗೆಲುವಿನ ದಾಖಲೆಗೆ ಕಾರಣರಾದ ಎಲ್ಲ ಕ್ರೀಡಾಮಕ್ಕಳನ್ನು ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರು ಸಹಕಾರ ನೀಡಿದ ಆಡಳಿತ ಮಂಡಳಿಗೆ, ಮುಖ್ಯಗುರುಗಳಿಗೂ ಶಿಕ್ಷಣ ಇಲಾಖೆಯಿಂದ ಶುಭ ಹಾರೈಸಿ ಸಂತಸ ವ್ಯಕ್ತಪಡಿಸಿದ್ದಾರೆ.