ಧಾರಕಾರ ಮಳೆ : ಸಿಡಿಲು ಬಡಿದು ಎರಡು ಎಮ್ಮೆಗಳ ಸಾವು : ಕಂಗಾಲಾದ ರೈತ ಕುಟುಂಬದಿಂದ ಕಣ್ಣಿರು, ಹುಕ್ಕೇರಿ ತಾಲೂಕಿನಲ್ಲಿ ಘಟನೆ
ಬೆಳಗಾವಿ : ಧಾರಾಕಾರವಾಗಿ ಸುರಿದ ಭಾರಿ ಮಳೆಯಿಂದ ಸಿಡಿಲು ಬಡಿದು ಬಡರೈತನೋರ್ವನ ತೋಟದ ಮನೆಯಲ್ಲಿ ಕಟ್ಟಲಾಗಿದ್ದ ಎರಡು ಎಮ್ಮೆಗಳು ಸ್ಥಳದಲ್ಲಿಯೇ ಮೃಪಟ್ಟಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಾದಬಾನಟ್ಟಿ (ಯಮಕನಮರಡಿ)ಯಲ್ಲಿ ಇಂದು ಬುಧವಾರ ರಾತ್ರಿ ನಡೆದಿದೆ.
ಬುಧವಾರ ರಾತ್ರಿ 8.30ರ ಸುಮಾರಿಗೆ ಸುರಿದ ಭಾರಿ ಪ್ರಮಾಣದ ಮಳೆಯ ಹಿನ್ನೆಲೆಯಲ್ಲಿ ದಾದಬಾನಹಟ್ಟಿ ಗ್ರಾಮದ ಶೆಟ್ಟೆಪ್ಪಾ ಯಲ್ಲಪ್ಪಾ ಜಮಕೊಳಿ ಎಂಬುವರ ಹೊಲದಲ್ಲಿರುವ ಮನೆಯ ಮೇಲೆ ಸಿಡಿಲು ಅಪ್ಪಳಿಸಿದೆ.
ಈ ವೇಳೆ ರೈತ ಶೆಟ್ಟೆಪ್ಪ ಅವರ ಮನೆಯಲ್ಲಿದ್ದ ಕಟ್ಟಲಾಗಿದ್ದ ಎರಡು ಎಮ್ಮೆಗಳು ಸ್ಥಳದಲ್ಲಿ ಮೃತಪಟ್ಟಿವೆ.