ಶಿರಹಟ್ಟಿ

ವರವಿ ಗ್ರಾಮದ ಶ್ರೀ ಮೌನೇಶ್ವರ ರಥೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಬಂದ ಭಕ್ತರು

ವರವಿ ಗ್ರಾಮದ ಶ್ರೀ ಮೌನೇಶ್ವರ ರಥೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಬಂದ ಭಕ್ತರು

ಶಿರಹಟ್ಟಿ 18: ವರವ ಬೇಡಿ ಬರುವ ಭಕ್ತರಿಗೆ ಬೇಡಿದ ವರವ ನೀಡುವ ಶ್ರೀಕ್ಷೇತ್ರ ವರವಿ ಮೌನೇಶ್ವರರು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ಕೂಡಾ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದು, ಶ್ರಾವಣ ಮಾಸದ ಕೊನೆ ಸೋಮವಾರ ಜರುಗುವ ವರವಿಯ ಮೌನೇಶ್ವರರ ಮಹಾ ರಥೋತ್ಸವಕ್ಕೆ ರಾಜ್ಯ ಸೇರಿದಂತೆ ಹೊರರಾಜ್ಯದ ಭಕ್ತರು ಆಗಮಿಸಿ ರಥೋತ್ಸವ ಹಾಗೂ ಮಹಾ ಪ್ರಸಾದದಲ್ಲಿ ಪಾಲ್ಗೊಂಡು ಪುನೀತರಾಗುತ್ತರೆ ಎಂದು ಲೇಬಗೇರಿ ಶ್ರೀ ಲಕ್ಷ್ಮೇಂದ್ರ ಸ್ವಾಮಿಗಳ ಮಠದ ಶ್ರೀ ನಾಗಮೂರ್ತೇಂದ್ರ ಮಹಾಸ್ವಾಮಿಗಳು ಹೇಳಿದರು. 

ಅವರು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ಶ್ರೀ ಮೌನೇಶ್ವರರ ಜಾತ್ರಾ ಮಹೋತ್ಸವದ ಸಾನಿಧ್ಯವಹಿಸಿ ಜಾತ್ರಾಮಹೋತ್ಸವ ಉದ್ಘಾಟನೆ ಆಶೀರ್ವಚನ ನೀಡಿದರು. 

ವರವಿ ಕ್ಷೇತ್ರದ ಶ್ರೀ ಮೌನೇಶ್ವರ ಮಹಾಸ್ವಾಮಿಗಳು,   ವೀರಾಂದ್ರ ಮಹಾಸ್ವಮಿಗಳು, ನವಲಗುಂದ   ನಾಗಲಿಂಗಪ್ಪಜ್ಜನ ಮಠ, ಸವದತ್ತಿ ದಾನಲಿಂಗೇಶ್ವರ ಮಠದ   ಸೋಮಲಿಂಗೇಶ್ವರ ಮಹಾಸ್ವಾಮಿಗಳು, ವಿಜಯಪುರ   ಮೂರುಜಾವಾದೀಶ್ವರ ಮಠದ   ಮಹೇಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ   ಜಗದ್ಗುರು ಮೌನೇಶ್ವರರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್‌ ಕಮೀಟಿ ಅಧ್ಯಕ್ಷರಾದ ಮೋಹನ್ ಸಿ.ನರಗುಂದ ಅವರು ಪ್ರಸ್ತಾವಿಕವಿಕವಾಗಿ ಮಾತನಾಡಿದರು. 

ಡಾ. ಅಶೋಕ ಜತ್ತಿ, ಪೊಲೀಸ್‌ಅಧಿಕಾರಿ ಚನ್ನಯ್ಯ ದೇವೂರ, ಶಂಕ್ರಾಚಾರ್ಯ ಕಡ್ಲಾಸ್ಕರ, ಕಾರ್ಯದರ್ಶಿ ಮಹೇಶ ಹುಲಬಜಾರ, ಟ್ರಸ್ಟಿಗಳಾದ ವ್ಹಿ. ಎಮ್‌.ಕೊಟ್ರೇಶ್‌ಆಚಾರ್ಯ, ನಿರಂಜನ ನಿಂಗಪ್ಪ ಬಡಿಗೇರ, ಚಂದ್ರಕಾಂತ ಸದಾಶಿವ ಸೋನಾರ, ಮೌನೇಶ ಜಿ. ಬಡಿಗೇರ (ನರೇಗಲ್ಲ), ಶ್ರೀಧರ ಕೊಣ್ಣೂರ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ