ಸೌಂದತ್ತಿ

ವಾಹನ ಕಳ್ಳರ ಬಂಧನ

ವಾಹನ ಕಳ್ಳರ ಬಂಧನ

ಸವದತ್ತಿ 23: ಪಟ್ಟಣ ಸೇರಿ ವಿವಿಧೆಡೆ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಸವದತ್ತಿ ಪೋಲಿಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಶಿಂಧೋಗಿ ಗ್ರಾಮದ ಶಂಕರ ಮಹಾದೇವಪ್ಪ ಅಬ್ಬಾರ, ಮಾಂತೇಶ ಯಲ್ಲಪ್ಪ ತೋರಗಲ್ಲ ಬಂಧಿತ ಆರೋಪಿಗಳು. ಇವರಿಂದ 1 ಜಾನ್‌ಡೀರ್ ಟ್ರ್ಯಾಕ್ಟರ್, ಬೂದು ಬಣ್ಣದ ಟೇಲರ್ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ.   

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ಶಿವಾನಂದ ಗುಡಗನಟ್ಟಿ ನೇತೃತ್ವದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಬಿ. ಆರ್‌. ಸಣ್ಣಮಾಳಗಿ, ಬಿ.ವಿ. ಹೀರೆಮಠ, ಎಂ. ಪಿ. ತೆರದಾಳ, ಎ. ಎಸ್‌. ಕಪ್ಪತ್ತಿ, ಎಚ್‌.ಬಿ. ವಾಸನ್ ಹಾಗೂ ಎಸ್‌.ಆರ್‌. ಭಜಂತ್ರಿ ಭಾಗಿಯಾಗಿದ್ದರು. 


ಸುದ್ದಿ ಓದಿ