ಅಂತರರಾಷ್ಟ್ರೀಯ

ಜಪಾನಿನಲ್ಲೂ ಹೊಸ ಸ್ವರೂಪದ ಕೊರೋನ ಸೋಂಕು ಪ್ರಕರಣ ಪತ್ತೆ

ಜಪಾನಿನಲ್ಲೂ ಹೊಸ ಸ್ವರೂಪದ ಕೊರೋನ ಸೋಂಕು ಪ್ರಕರಣ ಪತ್ತೆ

ಟೋಕಿಯೊ, ಡಿಸೆಂಬರ್ 29: ಜಗತ್ತಿನ ಬೇರೆ ದೇಶಗಳಲ್ಲಿ ಈಗ ಹೊಸ ಸ್ವರೂಪದ , ರೂಪಾಂತರಗೊಂಡ  ಹೊಸ ಕೊರೋನ ಸೋಂಕು  ಕಾಣಿಸಿಕೊಂಡಿದೆ.   ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ  ಹೊಸ ರೂಪಾಂತರ  ಮಾದರಿ ಹೊಸ ಕೊರೋನ ಸೋಂಕಿನ  ಮೊದಲ ಪ್ರಕರಣವು ಈಗ ಜಪಾನ್‌ನಲ್ಲಿ ದೃಡಪಟ್ಟಿದೆ .

ಜಪಾನ್ ಟೈಮ್ಸ್ ಪತ್ರಿಕೆ  ಇದನ್ನು ವರದಿ ಮಾಡಿದೆ. ಇದೇ   19 ರಂದು ಜಪಾನ್‌ನ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದ ನಂತರ  ಹೊಸ ಸೋಂಕಿನಿಂದ ಬಳಲುತ್ತಿರುವ ಖಚಿತವಾಗಿದೆ ಎಂದೂ  ಪತ್ರಿಕೆ ಮಂಗಳವಾರ ತಿಳಿಸಿದೆ. ಜಪಾನ್  ಮಾಧ್ಯಮ ವರದಿಗಳ ಪ್ರಕಾರ, ಈ ತಿಂಗಳ ಆರಂಭದಲ್ಲಿ ಯುಕೆಯಲ್ಲಿ ಹೊರಹೊಮ್ಮಿದ ಹೊಸ ಕೊರೊನಾವೈರಸ್ ತಳಿಗಳ ಮತ್ತೊಂದು ಆರು ಪ್ರಕರಣಗಳು ಜಪಾನ್‌ನಲ್ಲಿ ದೃಡಪಟ್ಟಿದೆ. 

ಹೀಗಾಗಿ ಜಪಾನ್ ಈಗ ಒಟ್ಟು 15 ಕರೋನವೈರಸ್ ರೂಪಾಂತರಗಳನ್ನು ಹೊಂದಿದೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಹೊಸ ಕರೋನವೈರಸ್ ನಿರ್ಬಂಧಗಳನ್ನು ಘೋಷಿಸಿದ್ದು, ಕಟ್ಟುನಿಟ್ಟಾದ ಮುಖಗವಸು  ಧರಿಸುವ ನಿಯಮ ಜಾರಿ, ಮತ್ತು ಕರ್ಫ್ಯೂ ವಿಸ್ತರಣೆ ಸೇರಿದಂತೆ ಹೊಸ ನಿಯಮ ಜಾರಿ ಮಾಡಿದ್ದಾರೆ.

ಹೊಸ ಸೋಂಕಿನ ಆಮದನ್ನು ತಡೆಗಟ್ಟುವ ಉದ್ದೇಶದಿಂದ ಅನೇಕ ದೇಶಗಳು ಯುನೈಟೆಡ್ ಕಿಂಗ್‌ಡಂಗೆ ಮತ್ತು ಹೊರಗಿನ ಪ್ರಯಾಣಿಕರ ಪ್ರಯಾಣವನ್ನು ಸ್ಥಗಿತಗೊಳಿಸಿವೆ.

 

ಸುದ್ದಿ ಓದಿ