ಶಿವಾಜಿ ಜಯಂತಿ ಪ್ರಕರಣದ ಆರೋಪಿಗಳನ್ನು ಗಡಿಪಾರು ಮಾಡಿ - ಗುಂಜಿಗಾಂವಿ
ಮಹಾಲಿಂಗಪೂರ 21 : ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ವೇಳೆ ಮತಾಂಧ ಮುಸ್ಲಿಂ ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದರೊಂದಿಗೆ ಅಪರಾಧಿಗಳನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕೆಂದು ಶಿವಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಮುಸ್ಲಿಂ ಕೆಲವು ಮತಾಂಧರಿಂದ ಕಲ್ಲು ತೂರಾಟ ನಡೆದು ಶಿವಾಜಿಯವರಿಗೆ ಮತ್ತು ಹಿಂದೂ ಧರ್ಮಕ್ಕೆ ಆದ ಅವಮಾನ ಇದೊಂದು ಪೂರ್ವ ನಿಯೋಜಿತ ಕೆಲಸವೆಂದು ಉಗ್ರವಾಗಿ ಖಂಡಿಸಿ ಸ್ಥಳೀಯ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಆಗಲಿ ಮುಸ್ಲಿಂ ಆಗಲಿ ಆಯಾ ಸಮುದಾಯಗಳಲ್ಲಿಯ ನಾಲ್ಕಾರು ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ ಸಾಮಾಜಿಕ ಶಾಂತಿಯನ್ನು ಕದಡುತ್ತಾರೆ.ಇಂತಹ ವ್ಯಕ್ತಿಗಳನ್ನು ಸಮಾಜ ಮುಖಂಡರು ಗುರುತಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗುವಂತೆ ಮಾಡಬೇಕು ಇದು ಸಮುದಾಯಗಳ ಮುಖಂಡರ ಆಧ್ಯ ಕರ್ತವ್ಯವಾಗಿದೆ.
ಉದಾಹರಣೆಗೆ ಟಿಪ್ಪು ಸುಲ್ತಾನ್ ಜಯಂತಿಯ ಮೆರವಣಿಗೆಯಲ್ಲಿ ಇನ್ನೊಂದು ಕೋಮಿನಿಂದ, ಮತ್ತೊಂದು ಕೋಮಿನಿಂದ ನಡೆಯುವ ಮಹಾತ್ಮರ ಜಯಂತಿಗಳಂದು ಮುಸ್ಲಿಂ ಮತಾಂಧರು ಸಾಮಾಜಿಕ ಶಾಂತಿ ಕದಡುವ ಉದ್ದೇಶದಿಂದಲೇ ಕಲ್ಲು ತೂರಾಟ ಅಥವಾ ಇನ್ನಿತರ ದುಷ್ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಂಥವರನ್ನು ಪೋಲಿಸ ಇಲಾಖೆ ಗುರುತಿಸಿ ಗಡಿಪಾರಿನಂತಹ ಶಿಕ್ಷೆಯನ್ನು ವಿಧಿಸಿ ಶಿಕ್ಷಿಸಬೇಕೆಂದು ಖಾರವಾಗಿ ಪ್ರತಿಕ್ರಿಯಿಸಿದರು.
ಕರ್ನಾಟಕ ಶಿವಸೇನಾ ಪಕ್ಷದ ಜಿಲ್ಲಾಧ್ಯಕ್ಷ ನಾಗರಾಜ ಭಜಂತ್ರಿ ಮಾತನಾಡಿ, ಯಾವುದೇ ಸಮುದಾಯವಿರಲಿ ಆ ಸಮುದಾಯಗಳ ಮುಖಂಡರಿಗೆ ವಿನಂತಿ ಏನೆಂದರೆ, ಸಾಮಾಜಿಕ ಶಾಂತಿ ಕದಡುವ ವ್ಯಕ್ತಿಗಳನ್ನು ಅವರೇ ಮಟ್ಟ ಹಾಕಿ ಸಾರ್ವಜನಿಕ ವಲಯದಲ್ಲಿ ನಿರಂತರ ಶಾಂತಿ ನೆಲೆಸುವಂತೆ ಮಾಡಬೇಕು. ಫೆಬ್ರವರಿ 28 ರಂದು ಜಿಲ್ಲಾ ಸ್ಥಳದಲ್ಲಿ ಲಕ್ಷಾಂತರ ಹಿಂದುಗಳು ಬಾಗಲಕೋಟೆಯಲ್ಲಿ ನಡೆದ ಕೃತ್ಯ ಖಂಡಿಸಿ ಮತ್ತು ನಾಚಿಕೆಗೆಟ್ಟ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದು, ಈ ಸಂದರ್ಭದಲ್ಲಿ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಪಾಲ್ಗೊಳ್ಳುವರು ಎಂದರು.
ಈ ಸಂದರ್ಭದಲ್ಲಿ ಶಿವಸೇನಾ ಸಂಘಟನಾ ಸದಸ್ಯರಾದ ಆನಂದ ನೂಲಿ, ಸಿದ್ದು ಬೆಳವಂಕಿ, ಮಾರುತಿ ಚನ್ನದಾಸರ, ತಿಮ್ಮಣಗೌಡ ಪಾಟೀಲ, ಗಣೇಶ ಪೂಜೇರಿ, ಅರ್ಜುನ ನಾಗರಾಳ, ವಿನೋದ ಶಿಂದೆ, ಮಹಾಂತೇಶ ಜೀರಗಾಳ, ಕುಮಾರ ಚನ್ನದಾಸರ, ಸಂದೀಪ ಶಿಕ್ಕಲಗಾರ, ವಿನೋದ ಗಾಡಿವಡ್ಡರ, ಗಂಗಾಧರ ಗುರವ, ಮಹಾಲಿಂಗ ತಾಲೂರ, ಮಹಾಲಿಂಗಪ್ಪ ಹೊಸಪೇಟಿ ಸೇರಿದಂತೆ ಹಲವರು ಇದ್ದರು.