ಜಮಖಂಡಿ

ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಜಮಖಂಡಿ 04: ಕಲಬುಗರ್ಿ ಜಿಲ್ಲೆಯ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಅಪ್ರಾಪ್ತ 14 ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಘಟನೆಯನ್ನು ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಮುತ್ತಣ್ಣ ಮೇತ್ರಿ ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿದ ಅವರು, ಕನ್ನಡ ರಾಜ್ಯೋತ್ಸವದ ದಿನದಂದು ಬಾಲಕಿ ಹೊರಗಡೆ ಹೋದಾಗ ಪಾಪಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿ ಯಾಗಿದ್ದಾರೆ. ಅವರು ಯಾರೇ ಆಗಿದ್ದರೂ ಕೂಡಲೇ ಬಂಧಿಸಿ ಅವರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದರು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಡಾ.ಅಂಬೇಡ್ಕರ್ ರವರು ರಚಿಸಿದ ಶ್ರೇಷ್ಠ ಸಂವಿಧಾನ ಬಂದು 72 ವರ್ಷಗಳು ಕಳೆದರೂ ಇಂತಹ ಸಾಮಾಜಿಕ ಅಸಮಾನತೆಯ ಘಟನೆಗಳು ನಡೆಯುತ್ತಿವೆ ಎಂದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅತ್ಯಾಚಾರವಾಗಿ ಕೊಲೆಯಾದ ದಲಿತ ಬಾಲಕಿಯ ಕುಟುಂಬಕ್ಕೆ ಸಕರ್ಾರ 25 ಲಕ್ಷ ರು, ಪರಿಹಾರ ನೀಡಬೇಕು. ಸಂತ್ರಸ್ತ ಕುಟುಂಬದಲೋಬ್ಬರಿಗೆ ಸಕರ್ಾರಿ ನೌಕರಿ ನೀಡಬೇಕು.

ಇಂದಿನ ವರ್ತಮಾನದಲ್ಲಿ ದಲಿತರ ಸಮಸ್ಯೆಗಳನ್ನು ಆಳುವ ಸಕರ್ಾರಗಳು ಸೂಕ್ತ ರೀತಿಯಲ್ಲಿ ಬಗೆಹರಿಸುವ ಹಾಗೂ ಮತ್ತೆ ಭವಿಷ್ಯದಲ್ಲಿ ಇಂತಹ ಅಹಿತಕರ ಘಟನೆಗಳು ಪುನರಾವರ್ತನೆಯಾಗದಂತೆ ರಾಜ್ಯದ ಗೃಹ ಸಚಿವರು ಮುತುವಜರ್ಿ ವಹಿಸಬೇಕು. ರಾಜ್ಯದಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸಿದರೆ ಸಕರ್ಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆಂದು ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಮುತ್ತಣ್ಣ ಮೇತ್ರಿ,ಚಂದ್ರು ಹರಿ ಜನ,ಲಕ್ಷ್ಮಣ ಹರಿಜನ,ತಾಲೂಕ ಸಂಚಾಲಕ ಮಾರುತಿ ಮಾದರ, ಸಂಜು ಪೂಜಾರಿ, ಬಸವರಾಜ ಜಮಖಂಡಿ, ನವೀನ್ ಕಡಕೋಳ ಸಕರ್ಾರವನ್ನು ಎಚ್ಚರಿಸಿದ್ದಾರೆ. 

ಸುದ್ದಿ ಓದಿ