ಜಮಖಂಡಿ

NPS ರದ್ಧತಿಗೊಳಿಸಿ, OPS ಮರು ಜಾರಿಗೊಳಿಸಲು ಆಗ್ರಹ

NPS ರದ್ಧತಿಗೊಳಿಸಿ, OPS ಮರು ಜಾರಿಗೊಳಿಸಲು ಆಗ್ರಹ

ಜಮಖಂಡಿ 05: ಸಕರ್ಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ಜಾರಿಯಲ್ಲಿದೆ. ನೌಕರನ ನಿವೃತ್ತಿ ನಂತರದ ಸಂಧ್ಯಾ ಜೀವನದ ಭದ್ರತೆಗಾಗಿ ಓಕಖ ರದ್ದತಿ ಮಾಡಿ, ಔಕಖ ಮರು ಜಾರಿ ಹೋರಾಟಕ್ಕೆ ಜಿಲ್ಲೆಯಿಂದ ನ, 5 ರಂದು ಸಂಕಲ್ಪಯಾತ್ರೆ ನಗರಕ್ಕೆ ಅಗಮಿಸುತ್ತಿದೆ ಎಂದು ರಾಜ್ಯ ಸರಕಾರಿ ಓಕಖ ನೌಕರರ ಸಂಘದ ತಾಲೂಕ ಘಟದ ಅಧ್ಯಕ್ಷ ಸಂತೋಷ ತಳಕೇರಿ ಹೇಳಿದರು.

ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಕಲ್ಪಯಾತ್ರೆಯು ಜಿಲ್ಲೆಯಿಂದ ಆಗಮಿಸುತ್ತಿದ್ದಂತೆ ಮುಧೋಳ ರಸ್ತೆಯ ಕಟ್ಟೆ ಕೆರೆಯಿಂದ 2 ನೂರಕ್ಕೂ ಅಧಿಕ ಬೈಕ್ಗಳ ರ್ಯಾಲಿ ಮೂಲಕ ಹಳೆ ತಹಶೀಲ್ದಾರ ಕಚೇರಿಗೆ ತಲುಪುವದು. ಅಲ್ಲಿಂದ ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸುವ ಸಂಕಲ್ಪಯಾತ್ರೆಯ ರ್ಯಾಲಿಯಲ್ಲಿ 2 ಸಾವಿರಕ್ಕೂ ಅಧಿಕ ನೌಕರರು ಭಾಗಿಯಾಗಲಿದ್ದಾರೆ. ರಾಜ್ಯಾಧ್ಯಕ್ಷ ಮಂಜುನಾಥ ಕನ್ನಬೂರ ಸೇರಿದಂತೆ ವಿವಿಧ ಇಲಾಖೆಯ ನೌಕರರು ಹಾಗೂ ನಿವೃತ್ತ ನೌಕರರು. ಸಂಘ ಸಂಸ್ಥೆಯವರು ಭಾಗಿಯಾಗಿ. ಎ.ಜಿ. ದೇಸಾಯಿ ವೃತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ನಂತರ ಎಸ್.ಆರ್.ಎ. ಕ್ಲಬ್ ಎದ್ದುರಿಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. 

ಓಕಖ ರದ್ದತಿ ಮಾಡಿ, ಔಕಖ ಮರು ಜಾರಿಗೊಳಿಸಬೇಕೆಂದು ಮಾಜಿ ಸಿಎಂ, ಯಡಿಯೂರಪ್ಪನವರ ಸರಕಾರದಲ್ಲಿ ಹೋರಾಟವನ್ನು ಮಾಡಿದ್ದಾಗಿದೆ. ಅದಕ್ಕೆ ಮಾಜಿ ಸಿಎಂ ಅವರು ಭರವಸೆಯನ್ನು ನೀಡಿದ್ದರು. ಇದುವರೆಗೆ ನಮ್ಮ ಬೇಡಿಕೆ ಇಡೇರಿಲ್ಲ. ಇವಾಗ ಮತ್ತೇ ನೌಕರರು ಹೋರಾಟಕ್ಕೆ ಇಳಿಯಬೇಕಾಗಿದೆ. ನಿವೃತ ನೌಕರರಿಗೆ ಕೇವಲ 2178 ರೂ, ಪಿಂಚಣಿಯನ್ನು ನೀಡುತ್ತಿದೆ. ಸರಕಾರಿ ಸೇವೆಯಲ್ಲಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಸೇವೆಯನ್ನು ಸಲಿಸಿ, ನಂತರ ಅವರಿಗೆ ಸಕ್ಕರೆ ಖಾಯಿಲೆ. ರಕ್ತದೊತ್ತಡ ಹೀಗೆ ಹಲವಾರು ಖಾಯಿಲೆಗಳು ಬರುತ್ತವೆ. ಇವರು ಕೊಡುವ ಪಿಂಚಣಿ ಮಾತ್ರೆಗೆ ಸಾಲುತ್ತಿಲ್ಲ ಎಂದು ಆರೋಪಿಸಿದರು. 

ತಿಂಗಳಿಗೆ ಕನಿಷ್ಟ 10 ಸಾವಿರ ಪಿಂಚಣಿಯನ್ನು ಸರಕಾರ ನೀಡಬೇಕು. ಓಕಖ ರದ್ದತಿ ಮಾಡಿ, ಔಕಖ ಮರು ಜಾರಿಗೊಳ್ಳಿಸಬೇಕೆಂದು ಡಿ,10 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಆ ಪ್ರತಿಭಟನೆಯಲ್ಲಿ ಸುಮಾರು ಜಿಲ್ಲೆಯಿಂದ 10 ಲಕ್ಷಕ್ಕೂ ಅಧಿಕ ನೌಕರರು ಭಾಗಿಯಾಗಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ ತಿಮ್ಮಾಪೂರ, ಮಾದೇವ ಕುಂಚನೂರ, ಹನಮಂತ ಅರಕೇರಿ, ಸಂಗಮೇಶ ಉಟ್ಟಗಿ ಇದ್ದರು.

ಪೋಟೋ : ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರಕಾರಿ ಓಕಖ ನೌಕರರ ಸಂಘದ ತಾಲೂಕ ಘಟದ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡುತ್ತಿರುವುದು, 



 

ಸುದ್ದಿ ಓದಿ