ಅಂತರರಾಷ್ಟ್ರೀಯ

ಚೀನಾದಲ್ಲಿ ಡೆಲ್ಟಾ ರೂಪಾಂತರಿ ಭೀತಿ.. ಮತ್ತೆ ಲಾಕ್‌ ಡೌನ್‌ ಜಾರಿ

ಚೀನಾದಲ್ಲಿ  ಡೆಲ್ಟಾ ರೂಪಾಂತರಿ  ಭೀತಿ..  ಮತ್ತೆ   ಲಾಕ್‌ ಡೌನ್‌  ಜಾರಿ

ಬೀಜಿಂಗ್, ಅ 27: ಚೀನಾದಲ್ಲಿ  ಮತ್ತೆ  ಕೊರೊನಾ   ಸಾಂಕ್ರಾಮಿಕ ಪ್ರಕರಣಗಳು ಹೆಚ್ಚುತ್ತಿವೆ. ಡೆಲ್ಟಾ ರೂಪಾಂತರಿಯೊಂದಿಗೆ    ಪ್ರಕರಣಗಳು      ಹೆಚ್ಚುತ್ತಿವೆ.   ಕಳೆದ  ವಾರ   11 ಪ್ರಾಂತ್ಯಗಳಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.   40 ಮಿಲಿಯನ್ ಜನಸಂಖ್ಯೆ ಹೊಂದಿರುವ ಲಾನ್ಜುವೋ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಜನರು ಮನೆಯಿಂದ ಹೊರಬರಬಾರದು ಎಂದು  ಚೀನಾ ಸ್ಪಷ್ಟಪಡಿಸಿದೆ. ಚೀನಾದಲ್ಲಿ   ಶೇ 75 ಕ್ಕಿಂತಲೂ  ಹೆಚ್ಚು  ಮಂದಿಗೆ   ಎರಡು ಡೋಸ್  ಲಸಿಕೆ ನೀಡಿಕೆಯನ್ನು  ಪೂರ್ಣಗೊಳಿಸಿದೆ.

ಆದರೂ,    ಹೊಸ   ಕೊರೊನಾ  ಪ್ರಕರಣಗಳು   ಭಯ ಭೀತಿ  ಸೃಷ್ಟಿಸುತ್ತಿವೆ.  ಶೂನ್ಯ  ಕೋವಿಡ್ ಗುರಿಯೊಂದಿಗೆ ಮುನ್ನಡೆಯುತ್ತಿರುವ ಚೀನಾ,  ಹೀಗೆ   ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ    ಕಳವಳಗೊಂಡಿದ್ದು,   ಒಂದೆರೆಡು  ಪ್ರಕರಣ ಕಂಡು ಬಂದರೂ   ಕಠಿಣ   ನಿರ್ಬಂಧಗಳನ್ನು  ವಿಧಿಸುತ್ತಿದೆ.     ಲಾನ್ಜುವೋದಲ್ಲಿ    6 ಪ್ರಕರಣಗಳು   ಪತ್ತೆಯಾದ  ಕೂಡಲೇ  ಎಚ್ಚೆತ್ತುಕೊಂಡು    ಲಾಕ್ ಡೌನ್  ಜಾರಿಮಾಡಿದೆ.  24 ಗಂಟೆಗಳಲ್ಲಿ  29  ಪ್ರಕರಣಗಳು  ವರದಿಯಾಗಿವೆ. ಈ  ಪೈಕಿ  6 ಪ್ರಕರಣಗಳು ಲಾನ್ಜುವೋ ದಲ್ಲಿ ವರದಿಯಾಗಿವೆ.

ಕಟ್ಟು ನಿಟ್ಟಿನ   ಕೊರೊನಾ  ಪರೀಕ್ಷೆ..

ಜಗತ್ತಿನ  ಉಳಿದ ಭಾಗಗಳಿಗೆ ಹೋಲಿಸಿದರೆ ಚೀನಾದಲ್ಲಿ ಕೊರೊನಾ  ಪ್ರಕರಣಗಳ  ಕಡಿಮೆ  ಇದ್ದರೂ,  ಶೂನ್ಯ ಕೋವಿಡ್  ಗುರಿ ಇರಿಸಿಕೊಂಡು   ಮುಂದೆ ಸಾಗುತ್ತಿರುವ  ಚೀನಾ    ಈ  ವಿಷಯದಲ್ಲಿ  ಯಾವುದೇ  ರಾಜಿ ಮಾಡಿಕೊಳ್ಳುತ್ತಿಲ್ಲ..  ಶಾಂಘೈನ   ದಂಪತಿಯೊಂದು  ಇತ್ತೀಚೆಗೆ ಹಲವಾರು ಪ್ರಾಂತ್ಯಗಳಿಗೆ ಪ್ರವಾಸ ಮಾಡಿತ್ತು.  ಅವರ ಸಂಪರ್ಕಕ್ಕೆ  ಬಂದ  ಎಲ್ಲರನ್ನೂ   ಕೊರೊನಾ ಪರೀಕ್ಷೆಗೆ    ಸರ್ಕಾರ  ಒಳಪಡಿಸುತ್ತಿದೆ.


ಸುದ್ದಿ ಓದಿ