ಶಿಶುವನ್ನು ಆಸ್ಪತ್ರೆಗೆ ಕರೆದೊಯ್ಯಲು ಪೆಟ್ರೋಲ್ ಗಾಗಿ ತಡಕಾಡಿದ ಪೋಷಕರು; ಹಸುಗೂಸು ಸಾವು
ಕೊಲಂಬೊ: ಮೇ 23 :ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ದಿನೇ ದಿನೇ ಜನರ ಬದುಕನ್ನು ಹೈರಾಣವಾಗಿಸುತ್ತಿದೆ. ತುತ್ತು ಅನ್ನ, ನೀರಿಗಾಗಿ ಪರದಾಡುವಮತಹ ಪರಿಸ್ಥತಿತಿ ಬಂದೊದಗಿದೆ. ಇನ್ನು ಕೆಲವರು ಹಸಿವು ತಾಳಲಾರದೆ ತುತ್ತು ಅನ್ನಕ್ಕಾಗಿ ದೇಶ ತೊರೆಯುತ್ತಿದ್ದಾರೆ.
ಇಂತಹ ಹೀನಾ ಪರಿಸ್ಥಿತಿ ಶಿಶುವನ್ನು ಸಹ ಬಿಡದಿರುವುದು ಎಲ್ಲರ ಮನಕಲುಕಿದೆ. ಎರಡು ದಿನದ ಶಿಶುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಒಂದು ಹನಿ ಪೆಟ್ರೋಲ್ ಸಿಗದೆ ಸಾವನ್ನಪ್ಪಿರುವ ಘಟನೆ ದಾರುಣ ಘಟನೆ ಕೊಲಂಬೊದಿಂದ ಸುಮಾರು 190 ಕಿಲೋಮೀಟರ್ ದೂರದಲ್ಲಿರುವ ಹಲ್ದಮುಲ್ಲಾದಲ್ಲಿ ನಡೆದಿದೆ.ಶಿಶುವಿಗೆ ಕಾಮಾಲೆ ರೋಗ ಕಾಣಿಸಿಕೊಂಡ ಹಿನ್ನೆಲೆ ಸೆಂಟ್ರಲ್ ಹೈಲ್ಯಾಂಡ್ಸ್ ಪ್ರದೇಶದ ಆಸ್ಪತ್ರೆಗೆ ಪೆಟ್ರೋಲ್ ದೊರೆಯದ ಕಾರಣ ಶಿಶುವನ್ನು ಕರೆದೊಯ್ಯಲು ಸಾಧ್ಯವಾಗಲಿಲ್ಲ. ಪೆಟ್ರೋಲ್ ಗಾಗಿ ಗಂಟೆಗಟ್ಟಲೇ ನಿಂತರೂ ಸಿಗಲಿಲ್ಲ. ತದನಂತರ ಹರಸಾಹಸದ ನಡುವೆ ಶಿಶುವನ್ನು ಆಸ್ಪತ್ರೆಗೆ ಸೇರಿಸಿದರೂ ತಡವಾದ ಪರಿಣಾಮ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ದೀಯತಲಾವ ಆಸ್ಪತ್ರೆಯ ನ್ಯಾಯಾಂಗ ವೈದ್ಯಾಧಿಕಾರಿ (ಜೆಎಂಒ) ಶನಕ ರೋಷನ್ ಪತಿರಾನ ಅವರು ಶಿಶುವಿನ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಸಾಮಾಜಿಕ ಮಾಧ್ಯಮದಲ್ಲಿ ಹೃದಯವಿದ್ರಾವಕ ಘಟನೆಯನ್ನು ಹಂಚಿಕೊಂಡಿದ್ದಾರೆ. ಒಂದು ಲೀಟರ್ ಗ್ಯಾಸ್ ಸಿಗದ ಕಾರಣ ತಮ್ಮ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬ ನೋವು ಪೋಷಕರ ಜೀವನದುದ್ದಕ್ಕೂ ಕಾಡುತ್ತವೆ ಎಂದು ಬರೆದುಕೊಂಡಿದ್ದಾರೆ.