ರಕ್ಷಣಾ ವೇದಿಕೆ ಬೆಳ್ಳಿ ಹಬ್ಬದ ಮುಖ್ಯ ಕಾರ್ಯಕ್ರಮ ಬೆಳಗಾವಿಯಿಂದ ಬೆಂಗಳೂರಿಗೆ ಸ್ಥಳಾಂತರ

ರಕ್ಷಣಾ ವೇದಿಕೆ ಬೆಳ್ಳಿ ಹಬ್ಬದ ಮುಖ್ಯ ಕಾರ್ಯಕ್ರಮ ಬೆಳಗಾವಿಯಿಂದ ಬೆಂಗಳೂರಿಗೆ ಸ್ಥಳಾಂತರ

ಬೆಳಗಾವಿ : ಬೆಳಗಾವಿಯಲ್ಲಿ ನಡೆಯಬೇಕಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಬೆಳ್ಳಿ ಹಬ್ಬದ ಮುಖ್ಯ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದ್ದಾರೆ.

   ಈ ಬಗ್ಗೆ ಮಾಹಿತಿ ನೀಡಿರುವ ಗುಡಗನಟ್ಟಿ ಅವರು, ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡ್ರು ಬೆಳಗಾವಿಯಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯ ಬೆಳ್ಳಿ ಹಬ್ಬದ ಮುಖ್ಯ ಕಾರ್ಯಕ್ರಮವನ್ನು ನಡೆಸುವ ನಿರ್ಧಾರ ಕೈಗೊಂಡಿದ್ದರು. ಚುನಾವಣೆಯ ಸಮಯ, ಮುಖ್ಯಮಂತ್ರಿಗಳಿಗೆ ಸಮಯದ ಅಭಾವ, ಗಣ್ಯರ ಪಾಲ್ಗೊಳ್ಳುವಿಕೆಗೆ ಅನೇಕ ಅನಾನಕೂಲತೆಗಳು ಎದುರಾದ ಪರಿಣಾಮ ಬೆಳ್ಳಿ ಹಬ್ಬದ ಕಾರ್ಯಕ್ರಮ ಬೆಳಗಾವಿಯ ಬದಲಾಗಿ ಇದೆ ಮಾರ್ಚ 24ರಂದು ಬೆಂಗಳೂರಿನ ಅರಮನೆ ಮೈದಾನದಲ್ಲೇ ನಡೆಸಲು ನಿರ್ಧರಿಸಲಾಗಿದೆ.

  ಸಮಸ್ತ ಕನ್ನಡದ ಅಭಿಮಾನಿಗಳು ಸಹಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನಿಗದಿಪಡಿಸಿ ಬೆಳಗಾವಿ ಮಹಾನಗರದಲ್ಲಿ "ಬೆಳಗಾವಿ ಉತ್ಸವ" ಕಾರ್ಯಕ್ರಮ ನಡೆಸುವ ಸಂಕಲ್ಪ ಮಾಡಿದ್ದೇವೆ. ದಯವಿಟ್ಟು ಸಹಕರಿಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿ, ಎಂದು ಕರವೇ ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಮನವಿ ಮಾಡಿಕೊಂಡಿದ್ದಾರೆ.

ಸುದ್ದಿ ಓದಿ