ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷರ ಭದ್ರತೆಯಲ್ಲಿ ಲೋಪ: ಅಧಿಕಾರಿಗಳಿಗೆ ತಳಮಳ!

ಅಮೆರಿಕ ಅಧ್ಯಕ್ಷರ ಭದ್ರತೆಯಲ್ಲಿ ಲೋಪ: ಅಧಿಕಾರಿಗಳಿಗೆ ತಳಮಳ!

ವಾಷಿಂಗ್ಟನ್: ಜೂನ್ 05: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಭದ್ರತೆಯಲ್ಲಿ ಲೋಪ ಉಂಟಾಗಿರುವ ವಿಚಾರ ಬೆಳಕಿಗೆ ಬಂದಿದೆ. ಖಾಸಗಿ ವಿಮಾನವೊಂದು ಹಾರಾಟ ನಿಷೇಧ ವಲಯವಾದ ಡೆಲವೇರ್‌ನ ರೆಹೋಬೋತ್ ಬೀಚ್ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ನುಗ್ಗಿತು. ಪತ್ನಿ ಜಿಲ್ ಅವರೊಂದಿಗೆ ಬಿಡೆನ್ ರಜೆಗಾಗಿ ಇಲ್ಲಿ ಉಳಿದುಕೊಂಡಿದ್ದರು. ಈ ಘಟನೆಯ ನಂತರ ಭದ್ರತಾ ಏಜೆನ್ಸಿಗಳು ತಕ್ಷಣ ಎಚ್ಚೆತ್ತು, ಜೋ ಬಿಡೆನ್ ಅವರನ್ನು ತಕ್ಷಣವೇ ಅವರ ಪತ್ನಿಯೊಂದಿಗೆ ಸುರಕ್ಷಿತ ಮನೆಗೆ ಕಳುಹಿಸಲಾಯಿತು.

ಈ ಪ್ರಕರಣ ಬೆಳಕಿಗೆ ಬಂದ ಬಳಿಕ, ಜೋ ಬಿಡೆನ್ ತನ್ನ ಪತ್ನಿಯೊಂದಿಗೆ ಡೆಲವೇರ್ ರಜೆಯ ಮನೆಯಲ್ಲಿದ್ದರು ಎಂದು ಶ್ವೇತಭವನದಿಂದ ಬಿಡುಗಡೆಯಾದ ಹೇಳಿಕೆಯಲ್ಲಿ ತಿಳಿಸಿದೆ. ಖಾಸಗಿ ವಿಮಾನವು ನಿಷೇಧಿತ ವಾಯುಪ್ರದೇಶವನ್ನು ಉಲ್ಲಂಘಿಸಿದ್ದು, ವಿಮಾನದಿಂದಾಗಿ ಅವರ ಕುಟುಂಬಕ್ಕೆ ಯಾವುದೇ ಹಾನಿಯಾಗಿಲ್ಲ. ವಿಮಾನವನ್ನು ತಕ್ಷಣವೇ ಹೊರಹಾಕಲಾಯಿತು ಎಂದು ಹೇಳಿರುವ ಅಧಿಕಾರಿಗಳು, ಘಟನೆಯ ಕುರಿತು ಪೈಲಟ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ಸಿಬಿಎಸ್ ನ್ಯೂಸ್ ಪ್ರಕಾರ, ಜೋ ಬಿಡೆನ್ ಮತ್ತು ಪತ್ನಿ ಘಟನೆಯ ಸ್ವಲ್ಪ ಸಮಯದ ನಂತರ ಹತ್ತಿರದ ಅಗ್ನಿಶಾಮಕ ಠಾಣೆಗೆ ಹೋಗುತ್ತಿರುವುದು ಕಂಡುಬಂದಿದೆ. ಫೆಡರಲ್ ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್, ಈ ವಾರದ ಆರಂಭದಲ್ಲಿ ರೆಹೋಬೋತ್ ಬೀಚ್‌ಗೆ ಬಿಡೆನ್ ಭೇಟಿ ನೀಡುವ ಮೊದಲು ಈ ಪ್ರದೇಶವನ್ನು ಹಾರಾಟ ನಿಷೇಧ ವಲಯ ಎಂದು ಘೋಷಿಸಿತ್ತು. ಇದು 30 ಮೈಲುಗಳಷ್ಟು ಪ್ರದೇಶವನ್ನು ಒಳಗೊಂಡಿದೆ. ಫೆಡರಲ್ ನಿಯಮಗಳ ಪ್ರಕಾರ, ಯಾವುದೇ ಪೈಲಟ್ ಟೇಕಾಫ್ ಮಾಡುವ ಮೊದಲು ತನ್ನ ಮಾರ್ಗದಲ್ಲಿ ನೋ-ಫ್ಲೈ ವಲಯವನ್ನು ಪರಿಶೀಲಿಸುವ ಅಗತ್ಯವಿದೆ.

ಸುದ್ದಿ ಓದಿ