ಅಂತರರಾಷ್ಟ್ರೀಯ

ವಿಯೆನ್ನಾ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆ

ವಿಯೆನ್ನಾ ಗುಂಡಿನ  ದಾಳಿಯಲ್ಲಿ ಮೃತಪಟ್ಟವರ  ಸಂಖ್ಯೆ ಎರಡಕ್ಕೆ ಏರಿಕೆ

ವಿಯೆನ್ನಾ, ನವೆಂಬರ್ 3: ಆಸ್ಟ್ರಿಯಾದ ರಾಜಧಾನಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಪರಿಣಾಮ  ಸಾವನ್ನಪ್ಪಿದವರ ಸಂಖ್ಯೆ ಅಂತಿಮವಾಗಿ ಎರಡಕ್ಕೆ ಏರಿಕೆಯಾಗಿದೆ  ಎಂದು  ನಗರ ಮೇಯರ್ ಮೈಕೆಲ್ ಲುಡ್ವಿಗ್ ಹೇಳಿದ್ದಾರೆ.

ಇದಕ್ಕೂ  ಮೊದಲಿನ ವರದಿಗಳು  ಓರ್ವ ದಾರಿಹೋಕನನ್ನು ಹತ್ಯೆ ಮಾಡಲಾಗಿದೆ ಎಮದು ಹೇಳಲಾಗಿತ್ತು .  ಆಂತರಿಕ ಸಚಿವಾಲಯವು ಹಲವು ಜನರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರೂ ಯಾವುದೇ ನಿಖರ ಅಂಕಿಅಂಶಗಳನ್ನು ನೀಡಿಲ್ಲ.15  ಜನರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು,  ಗಂಬೀರ  ಗಾಯಗೊಂಡ ಏಳು ಮಂದಿಗೆ ಚಿಕಿತ್ಸೆ  ನೀಡಲಾಗಿದೆ ಎಂದು  ಲುಡ್ವಿಗ್  ತಿಳಿಸಿದರು .

ವಿಯೆನ್ನಾ ಡೌನ್ಟೌನ್‌ನಲ್ಲಿ ಸೋಮವಾರ ಅಪರಿಚಿತ ವ್ಯಕ್ತಿಗಳ ಗುಂಪು ಗುಂಡಿನ ದಾಳಿ ನಡೆಸಿದೆ.  ಈ ಘಟನೆ ಭಯೋತ್ಪಾದಕ ಕೃತ್ಯ ಎಂದು ಆಸ್ಟ್ರಿಯಾದ ಚಾನ್ಸೆಲರ್ ಸೆಬಾಸ್ಟಿಯನ್ ಕುರ್ಜ್ ಹೇಳಿದ್ದಾರೆ. ದಾಳಿಯಲ್ಲಿ  ಪೊಲೀಸ್ ಸೇರಿದಂತೆ ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಸುದ್ದಿ ಓದಿ