ಮುಂದಗೋಡ

ಮುಂಡಗೋಡದಲ್ಲಿ “ಮಾನಸಂದ್ರ ಮುನಿಯಪ್ಪ ಹಾಗೂ ಬಸವಮೂರ್ತಿ ಸ್ವಾಮೀಜಿಗೆ” ದಲಿತ ಸಂಘರ್ಷ ಸಮಿತಿಯಿಂದ ಸನ್ಮಾನ

ಮುಂಡಗೋಡದಲ್ಲಿ “ಮಾನಸಂದ್ರ ಮುನಿಯಪ್ಪ ಹಾಗೂ ಬಸವಮೂರ್ತಿ ಸ್ವಾಮೀಜಿಗೆ” ದಲಿತ ಸಂಘರ್ಷ ಸಮಿತಿಯಿಂದ ಸನ್ಮಾನ

            ಮುಂಡಗೋಡ 13 : ಪರಮಪೂಜ್ಯ 14ನೇ ದಲಾಯಿ ಲಾಮಾರವರ ದರ್ಶನಕ್ಕಾಗಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷರಾದ ಮಾನಸಂದ್ರ ಮುನಿಯಪ್ಪ ಅವರು ಸೋಮವಾರ ಮುಂಡಗೋಡಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಎಸ್‌. ಪಕ್ಕೀರ​‍್ಪ ಹಾಗೂ ಅವರ ತಂಡವು ಅವರಿಗೆ ಆತ್ಮೀಯ ಸ್ವಾಗತ ಕೋರಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮಾನಸಂದ್ರ ಮುನಿಯಪ್ಪ ಅವರು, ಅವರ ಸಂಗಡಿಗರು ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಅಂಬೇಡ್ಕರ್ ಓಣಿಯಲ್ಲಿ ಇರುವ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರೆ​‍್ಣ ಮಾಡಿ ಗೌರವ ಸಲ್ಲಿಸಿದರು.

            ನಂತರ ಟಿಬೇಟಿಯನ್ ಕ್ಯಾಂಪಿಗೆ ತೆರಳಿದ ಮಾನಸಂದ್ರ ಮುನಿಯಪ್ಪ ಅವರು, ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಪರಮಪೂಜ್ಯ ಬಸವಮೂರ್ತಿ ಸ್ವಾಮೀಜಿ ಅವರೊಂದಿಗೆ ಪರಮಪೂಜ್ಯ 14ನೇ ದಲಾಯಿ ಲಾಮಾರವರಿಗೆ ಸನ್ಮಾನ ಸಲ್ಲಿಸಿ ಆಶೀರ್ವಾದ ಪಡೆದರು. ಅನಂತರ ಮುಂಡಗೋಡ ದಲಿತ ಸಂಘರ್ಷ ಸಮಿತಿ (ಡಿ.ಎಸ್‌.ಎಸ್‌.) ವತಿಯಿಂದ ರಾಜ್ಯ ಸಂಘಟನಾ ಸಂಚಾಲಕರಾದ ಎಸ್‌. ಪಕ್ಕೀರ​‍್ಪ ಅವರ ನೇತೃತ್ವದಲ್ಲಿ ಗೋಮಾಂಗ ಬೌದ್ಧ ಮಂದಿರದಲ್ಲಿ ಮಾನಸಂದ್ರ ಮುನಿಯಪ್ಪ ಅವರಿಗೆ ಹಾಗೂ ಮಾದರ ಚನ್ನಯ್ಯ ಗುರುಪೀಠದ ಪರಮಪೂಜ್ಯ ಬಸವಮೂರ್ತಿ ಸ್ವಾಮೀಜಿಯವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್‌. ಡಿ. ಮುಡೆಣ್ಣವರ, ಎಚ್‌. ವೈ. ಕಟ್ಟಿಮನಿ, ಗೋಪಾಲ್ ನಡಕಿನಮನಿ, ಸಂತೋಷ್ ಕಟ್ಟಿಮನಿ, ಲಕ್ಷ್ಮಣ ಭೋವಿವಡ್ಡರ, ಜೂಜೆ ಸಿದ್ದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ