ರಬಾಕಾವಿಬನಹಟ್ಟಿ

ಜಿಲ್ಲಾ ಮಟ್ಟದ ಯೋಗ, ಪುನಶ್ಚೇತನ ಶಿಬಿರ

ಜಿಲ್ಲಾ ಮಟ್ಟದ ಯೋಗ, ಪುನಶ್ಚೇತನ ಶಿಬಿರ

ರಬಕವಿ-ಬನಹಟ್ಟಿ 07: ಭಾರತ ಸೇವಾದಳ ಸಂಸ್ಥೆಯು ಮಕ್ಕಳಿಗೆ, ಮಹಿಳೆಯರಿಗೆ, ಯುವಕರಿಗೆ, ಶಿಕ್ಷಕರಿಗೆ ರಾಷ್ಟ್ರೀಯ ಭಾವೈಕ್ಯತೆ, ಸೇವಾ ಮನೋಭಾವ, ಸಮಯಪ್ರಜ್ಞೆ, ಶಿಸ್ತು, ಆರೋಗ್ಯಪೂರ್ಣ ಜೀವನ, ನೈತಿಕ ಶಿಕ್ಷಣ ನೀಡುತ್ತಿದೆ ಎಂದು ಭಾರತ ಸೇವಾದಳ ಜಿಲ್ಲಾ ಸಂಘಟಕ ಮಹೇಶ ಎನ್. ಪತ್ತಾರ ಹೇಳಿದರು.ಗ್ರಾಮದ ಸದ್ಗುರು ಸಿದ್ಧಲಿಂಗೇಶ್ವರ ಕಮರಿಮಠದಲ್ಲಿ ಭಾನುವಾರ ಬೆಳಿಗ್ಗೆ ಜಿಲ್ಲಾ ಮಟ್ಟದ ಯೋಗ ಹಾಗೂ ಪುನಶ್ಚೇತನ ಶಿಬಿರದ  ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಯೋಗ, ಧ್ಯಾನ, ಪ್ರಾಣಾಯಾಮ, ಮೌಲ್ಯ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮೂರು ದಿನಗಳ ಕಾಲ ಶಿಬಿರದಲ್ಲಿ ನಡೆಸಲಾಗುತ್ತಿದ್ದು, ಎಲ್ಲರೂ ಸಹಕರಿಸಲು ಕೋರಿದರು.ನ್ಯಾಯವಾದಿ ಉದಯಕುಮಾರ ದೇವಲ ದೇಸಾಯಿ ಮಾತನಾಡಿ, ಶಿಬಿರದ ಯಶಸ್ವಿಗೆ ಹಳಿಂಗಳಿ ಗ್ರಾಮದ ಸಹಕಾರ ಸದಾಕಾಲವಿದೆ ಎಂದರು.

ಯುವ ಮುಖಂಡ ಕಲ್ಯಾಣಕುಮಾರ ಯಲ್ಲಟ್ಟಿ ಮಾತನಾಡಿದರು.ಹಳಿಂಗಳಿ ಕಮರಿಮಠದ ಶ್ರೀ ಸದ್ಗುರು ಶಿವಾನಂದ ಸ್ವಾಮಿಜಿ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿದ್ದರು. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಜಿನ್ನಪ್ಪ ಡಿ.ಚೌಗಲಾ ಅಧ್ಯಕ್ಷತೆ ವಹಿಸಿದ್ದರು.ಜಿಪಂ ಸದಸ್ಯೆ  ಲಲಿತಾ ರಾಜು ನಂದೆಪ್ಪನವರ, ತಾಪಂ ಸದಸ್ಯೆ ನೀಲವ್ವ ತೆಳಗಡೆ, ತಾಪಂ ಮಾಜಿ ಸದಸ್ಯ ಬಿ.ಬಿ.ವೆಂಕಟಾಪೂರ, ಜಿ.ಬಿ ಘನವಾಡಿ, ಗ್ರಾ.ಪಂ ಮಾಜಿ ಅಧ್ಯಕ್ಷ ಪರಪ್ಪ ಹಿಪ್ಪರಗಿ, ರಾಯಪ್ಪ ತಿಮ್ಮಣ್ಣವರ, ಪಿಕೆಪಿಎಸ್ ಅಧ್ಯಕ್ಷ ಮಗೆಪ್ಪ ದೇಸಾಯಿ, ಮಾತೃಭೂಮಿ ಸೇವಾ ಸಂಘದ ಅಧ್ಯಕ್ಷ ರಾಜು ನಂದೆಪ್ಪನವರ, ಗ್ರಾಮ ಪಂಚಾಯತ ಸರ್ವಸದಸ್ಯರು ಹಾಗೂ ಜಮಖಂಡಿ ತಾಲೂಕಾ ಭಾರತ ಸೇವಾದಳದ ಸಮಿತಿ ಕಾರ್ಯದರ್ಶಿ ಮಹಾಂತೇಶ ವಾಲಿ, ತಾಲೂಕಾ ಸಮಿತಿ ಸದಸ್ಯ ಮ.ಕೃ.ಮೇಗಾಡಿ, ಅಹಿಂಸಾ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಆರ್.ಬಿ ಬಾಬಣ್ಣವರ, ಸರಕಾರಿ ಹಿಪ್ರಾಶಾ ಮುಖ್ಯಗುರು ಪಿ.ಎಮ್.ಪತ್ತಾರ, ದೈಹಿಕ ಶಿಕ್ಷಕ ಹೆಚ್.ಬಿ ಕಾಂಬಳೆ,  ವ್ಹಿ.ಎಸ್.ಉಪ್ಪಿನ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಗುರು ಸೋಮಶೇಖರ ಜಿ.ಎಸ್. ಸ್ವಾಗತಿಸಿದರು. ಸೇವಾದಳದ ಶಾಖಾ ನಾಯಕ ಹೆಚ್.ಜಿ ಕುರಿ ಕಾರ್ಯಕ್ರಮ ನಿರೂಪಿಸಿದರು. ವಿ.ವಿ. ಸಿದ್ದಾಪೂರ ವಂದಿಸಿದರು.  ನಂತರ ಪೂರ್ವಭಾವಿ ಸಭೆಯಲ್ಲಿ ಸೇರಿದ ಎಲ್ಲ ಸಲಹೆ ಸೂಚನೆಗಳನ್ನು ಪಡೆದು, ಸಹಕಾರದೊಂದಿಗೆ ಫೆ.18ರಿಂದ 20ರವರೆಗೆ ಮೂರು ದಿನಗಳ ಯೋಗ ಹಾಗೂ ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡ ಗ್ರಾಮದ ಹಿರಿಯರು, ಮುಖಂಡರು, ಯುವಸಂಘಟಕರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಒಪ್ಪಿಗೆ ಸೂಚಿಸಿದರು.

ಸುದ್ದಿ ಓದಿ