ಚಂಡಮಾರುತ: ಪೋರ್ಚುಗಲ್, ಸ್ಪೇನ್ ಫ್ರಾನ್ಸ್ ನಲ್ಲಿ ಭಾರಿ ಅನಾಹುತ
ಮ್ಯಾಡ್ರಿಡ್ ಡಿ, 23 ಭೀಕರ ಎಲ್ಸಾ ಮತ್ತು ಫ್ಯಾಬಿಯೆನ್ ಚಂಡಮಾರುತ, ಅಕ್ಷರಶಃ ಪೋರ್ಚುಗಲ್, ಸ್ಪೇನ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಭಾರಿ ಅನಾಹುತ ಉಂಟು ಮಾಡಿದೆ. ಬಿರುಮಳೆ, ಬಿರುಗಾಳಿಗೆ ಸಿಲುಕಿದ ಈ ಮೂರು ದೇಶಗಳಲ್ಲಿ 9 ಮಂದಿ ಮೃತಪಟ್ಟಿದ್ದಾರೆ .1.18 ಲಕ್ಷ ಮನೆಗಳು ವಿದ್ಯುತ್ ರಹಿತವಾಗಿವೆ. ಹಲವು ಕಡೆ ಕಡೆ ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿಬಿದ್ದಿವೆ. ಅನೇಕ ಮರಗಳು ಬುಡಮೇಲಾಗಿವೆ . ರೈಲು ಮತ್ತು ವಿಮಾನ ಸಂಚಾರ ರದ್ದಾಗಿದೆ . ಪೋರ್ಚುಗಲ್ ನಲ್ಲಿ 2, ಸ್ಪೇನ್ನಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಎಲ್ಸಾ ಚಂಡಮಾರುತ ಬೀಸಿತ್ತು. ಅದು ದುರ್ಬಲವಾಯಿತು ಎಂದುಕೊಳ್ಳು ವಾಗಲೇ ಫ್ಯಾಬಿಯೆನ್ ಎಂಬ ಮತ್ತೊಂದು ಚಂಡಮಾರುತ ಅಪ್ಪಳಿಸಿ ,ಭಾರೀ ಸಂಕಷ್ಟ ನಷ್ಟ ಜೊತೆಗೆ ಭಾರಿ ಹಾನಿಯಾಗಿದೆ, ಹಲವು ಮೀನುಗಾರರೂ ಕೊಚ್ಚಿಹೋಗಿದ್ದಾರೆ. ಬದುಕು ಮೂರಾಬಟ್ಟೆಯಾಗಿದೆ.