ಅಂತರರಾಷ್ಟ್ರೀಯ

"ನೋ ಟೈಮ್‌ ಟು ಡೈ" ನೊಂದಿಗೆ ಕ್ರೇಗ್ ಗುಡ್‌ ಬೈ

"ನೋ  ಟೈಮ್‌   ಟು ಡೈ" ನೊಂದಿಗೆ ಕ್ರೇಗ್     ಗುಡ್‌ ಬೈ

ಲಂಡನ್‌ , ಸೆ  29: ಬ್ರಿಟಿಷ್  ನಟ    ಜೇಮ್ಸ್‌   ಬಾಂಡ್‌   ಪಾತ್ರದಾರಿ    ಡೇನಿಯಲ್ ಕ್ರೇಗ್       ಕೊನೆಯ  ಬಾರಿಗೆ     ಕೆಂಪು ಹಾಸಿನ    ಮೇಲೆ  ಸಂಭ್ರಮಿಸಿದರು.  ಜೇಮ್ಸ್ ಬಾಂಡ್ ಸರಣಿಯಲ್ಲಿ  ಮುಂಬರುವ  25 ನೇ   ಚಿತ್ರ     'ನೋ ಟೈಮ್ ಟು ಡೈ'    ಭಾರತ  ಸೇರಿದಂತೆ   ಜಗತ್ತಿನೆಲ್ಲೆಡೆ      ಈ ತಿಂಗಳ 30 ರಂದು ಬಿಡುಗಡೆಯಾಗಲಿದೆ.

ಈ   ಹಿನ್ನಲೆಯಲ್ಲಿ   ಮಂಗಳವಾರ    ಲಂಡನ್ ನಲ್ಲಿ   ವಿಶೇಷ   ಪ್ರೀಮಿಯರ್ ಶೋ  ಆಯೋಜಿಸಲಾಗಿತ್ತು.    ಈ  ಪ್ರದರ್ಶನಕ್ಕೆ     "ನೋ ಟೈಮ್ ಟು ಡೈ"  ನಟ ನಟಿಯರೊಂದಿಗೆ ಪ್ರಮುಖ ಬ್ರಿಟಿಷ್  ಕಲಾವಿದರು   ಸಹ ಪಾಲ್ಗೊಂಡಿದ್ದರು.   ಇನ್ನೂ   ಕೊನೆಯ ಬಾರಿ     ಜೇಮ್ಸ್‌ ಬಾಂಡ್‌  ಪಾತ್ರದಾರಿಯಾಗಿ  ಕಾಣಿಸಿಕೊಂಡಿರುವ    ಐವತ್ತಮೂರು ವರ್ಷದ   ಡೇನಿಯಲ್ ಕ್ರೇಗ್    ಕಾರ್ಯಕ್ರಮದಲ್ಲಿ  ಪಾಲ್ಗೊಂಡು    ವಿಶೇಷವಾಗಿ   ಸಂಭ್ರಮಿಸಿದರು.  ಕ್ರೇಗ್ ಜೊತೆಗೆ,   ಸಿನಿಮಾದಲ್ಲಿ   ಬಾಂಡ್‌  ಗರ್ಲ್‌ ಆಗಿ  ಕಾಣಿಸಿಕೊಂಡಿರುವ   ಅನಾ ಡಿ ಆರ್ಮಸ್ ,   ಖಳನಾಯಕ ರಾಮಿ ಮಾಲೆಕ್  ಸಹ  ಸಮಾರಂಭದಲ್ಲಿ  ಮಿಂಚಿದರು.

ಜೇಮ್ಸ್‌   ಬಾಂಡ್     ಸರಣಿಯಲ್ಲಿ   ಏಳನೆಯ  ಜೇಮ್ಸ್ ಬಾಂಡ್  ಡೇನಿಯಲ್ ಕ್ರೇಗ್.       2006ರಲ್ಲಿ     ಮೊದಲು  "ಕ್ಯಾಸಿನೊ ರಾಯಲ್‌"  ನಲ್ಲಿ  ಬಾಂಡ್‌   ಆಗಿ ಕಾಣಿಸಿಕೊಂಡಿದ್ದರು.   ಅವರ  ಅಭಿನಯ   ಮೊದಲು  ಚಿತ್ರ  ವಿರ್ಮಶಕರ  ಟೀಕೆಗೆ ಗುರಿಯಾಯಿತಾದರೂ,   ನಂತರ  ತಮ್ಮ ಅಭಿನಯದ  ಮೂಲಕ    ಜನರನ್ನು  ಸೂರೆಗೊಂಡು    ಬಾಂಡ್‌  ಪಾತ್ರಗಳನ್ನು  ಮುಂದುವರಿಸಿದ್ದರು.   ಕ್ವಾಂಟಮ್ ಆಫ್ ಸೊಲೇಸ್ (2008), ಸ್ಕೈಫಾಲ್ (2012), ಸ್ಪೆಕ್ಟರ್ (2015) ನಲ್ಲಿ   ಡೇನಿಯಲ್  ಕ್ರೇಗ್  ಬಾಂಡ್‌   ಆಗಿ  ಕಾಣಿಸಿಕೊಂಡಿದ್ದರು.    "ನೋ ಟೈಮ್ ಟು ಡೈ"    ಸಿನಿಮಾಗೆ ಮೊದಲೇ    ನಟನೆಗೆ  ನಿವೃತ್ತಿ  ಹೇಳಲು   ಕ್ರೇಗ್‌  ಬಯಸಿದ್ದರೂ .. ಆದರೆ,  ಭಾರೀ ಸಂಭಾವನೆಯ  ಬದ್ಧತೆಯಿಂದಾಗಿ   ಚಿತ್ರದಲ್ಲಿ  ಅಭಿನಯಿಸಬೇಕಾಯಿತು   ಎಂದು ಕ್ರೇಗ್ ಸ್ಪಷ್ಟಪಡಿಸಿದ್ದಾರೆ. 


ಸುದ್ದಿ ಓದಿ