ಆರೋಗ್ಯ ಕೇಂದ್ರ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ವಿತರಣೆ
ಮೂಡಲಗಿ 19: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ವಿತರಣೆಯ ಕಾರ್ಯಕ್ರಮಕ್ಕೆ ಚಾಲಣೆ ನೀಡಲು ಆಗಮಿಸಿದ ಅರಭಾಂವಿ ಶಾಸಕ ಹಾಗೂ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಪುರಸಭೆ ಆವರಣದಲ್ಲಿ ಮೂಡಲಗಿ ತಾಲೂಕಾ ಪತ್ರಿಕಾ ಬಳಗದ ವತಿಯಿಂದ ಪತ್ರಕರ್ತರು ಗೌರವಪೂರ್ವಕವಾಗಿ ಸತ್ಕರಿಸಿ ಗೌರವಿಸಿದರು. ಪ್ರೆಸ್ಕ್ಲಬ್ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ, ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಬಾಲಶೇಖರ ಬಂದಿ, ಮಹಾದೇವ ನಡುವಿನಕೇರಿ, ಲಿಂಗಪ್ಪ ಗಾಡವಿ, ಭೀಮಶಿ ತಳವಾರ, ಶಿವಾನಂದ ಹಿರೇಮಠ, ಎಸ್ ಎಮ್ ಚಂದ್ರಶೇಖರ,ಮಲ್ಲು ಬೋಳನ್ನವರ ಇದ್ದರು.