ಕೊರೋನ ಸೋಂಕು ತಿಳಿಯಲು ಬಂದಿದೆ ಸ್ವಯಂ ಪರೀಕ್ಷಾ ಕಿಟ್ ...!!
ವಾಷಿಂಗ್ಟನ್
, 18: ಕರೋನ ಸೋಂಕು ಇದೆಯೇ - ಇಲ್ಲವೆ
ಎಂಬುದನ್ನು ಯಾರ ಸಹಾಯವಿಲ್ಲದೆ ನೀವೆ ಅದೂ ಕೇವಲ
30 ನಿಮಿಷದಲ್ಲಿ ತಿಳಿಯಬಹುದು..! ಹೌದು. 30 ನಿಮಿಷಗಳಲ್ಲಿ
ನಿಖರ ಫಲಿತಾಂಶ ತಿಳಿಯ ಬಹುದಾದ ಮೊದಲ ಕೊರೋನ ಸ್ವಯಂ ಪರೀಕ್ಷಾ
ಕಿಟ್ ಅನ್ನು ಅಮೆರಿಕಾ ಇದೇ ಮೊದಲ ಭಾರಿ ಬಳಕೆಸಲು
ಅನುಮತಿ ನೀಡಿದೆ.
ಲುಸಿರಾ ಹೆಲ್ತ್ ಅಭಿವೃದ್ಧಿ ಪಡಿಸಿರುವ ಈ ಏಕ ಬಳಕೆ ಟೆಸ್ಟ್ ಕಿಟ್ ಅನ್ನು ಗೃಹ ಬಳಕೆಗೆ ಅನುಮತಿ ನೀಡಲಾಗಿದೆ. 14 ವರ್ಷ ಮತ್ತು ಮೇಲ್ಪಟ್ಟ ಕೋವಿಡ್ ಶಂಕಿತರು ತಾವೇ ಸಂಗ್ರಹಿಸಿದ ತಮ್ಮ ಮೂಗಿನ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬಹುದಾಗಿದೆ.
ಈ ಕಿಟ್ ಅನ್ನು ಆಸ್ಪತ್ರೆಗಳಲ್ಲೂ ಬಳಸಬಹುದಾಗಿದ್ದು ಪರೀಕ್ಷೆಗೆ ಒಳಗಾಗುವವರು 14 ವರ್ಷಗಳಿಗಿಂತ ಕಡಿಮೆ ವಯಸ್ಸಿನವರ ಮೂಗಿನ ದ್ರವ ಮಾದರಿಯನ್ನು ಆರೋಗ್ಯ ಕಾರ್ಯಕರ್ತರೇ ಸಂಗ್ರಹಿಸಬೇಕಾಗುತ್ತದೆ.
ವಿಶ್ವದಾದ್ಯಂತ ಈವರೆಗೆ 5.59 ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 13 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 3.89 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕದಲ್ಲಿ ಈವರೆಗೆ 1.1 ಕೋಟಿಗೂ ಹೆಚ್ಚು ಜನ ಸೋಂಕಿಗೀಡಾಗಿದ್ದಾರೆ. 2.54 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 70.87 ಲಕ್ಷಕ್ಕೂ ಹೆಚ್ಚು ಸೋಂಕಿತರು ಈವರೆಗೆ ಚೇತರಿಸಿಕೊಂಡಿದ್ದಾರೆ.