ಅಂತರರಾಷ್ಟ್ರೀಯ

ಮಲೇಷ್ಯಾದಲ್ಲಿ ಕೋವಿಡ್ ಹೆಚ್ಚಳ; 17,828 ಹೊಸ ಕೊರೊನಾ ಪ್ರಕರಣಗಳು ದಾಖಲು

ಮಲೇಷ್ಯಾದಲ್ಲಿ ಕೋವಿಡ್ ಹೆಚ್ಚಳ; 17,828 ಹೊಸ ಕೊರೊನಾ ಪ್ರಕರಣಗಳು ದಾಖಲು

ಕೌಲಾಲಂಪುರ್: ಮಾರ್ಚ್ 22 : ಮಲೇಷ್ಯಾದಲ್ಲಿ 17,828 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,010,952 ಕ್ಕೆ ತಲುಪಿದೆ. ದೇಶದ ಆರೋಗ್ಯ ಸಚಿವಾಲಯ ಇಂದು ಈ ಮಾಹಿತಿಯನ್ನು ನೀಡಿದೆ.

ಸಚಿವಾಲಯದ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಮಾಹಿತಿಯ ಪ್ರಕಾರ 407 ಹೊಸ ಪ್ರಕರಣ ವಿದೇಶಗಳಿಂದ ಆಗಮಿಸಿದವರಲ್ಲಿ ಪತ್ತೆಯಾಗಿದ್ದರೆ, 17,421 ಸ್ಥಳೀಯ ಪ್ರಕರಣಗಳಾಗಿವೆ. ಸಾಂಕ್ರಾಮಿಕ ರೋಗದಿಂದ 63 ಮಂದಿ ಮೃತಪಟ್ಟರೆ ಒಟ್ಟು ಸಾವಿನ ಸಂಖ್ಯೆ 34,463 ಕ್ಕೆ ತಲುಪಿದೆ.

ಆಗ್ನೇಯ ಏಷ್ಯಾದ ದೇಶವಾಗಿರುವ ಮಲೇಷ್ಯಾದಲ್ಲಿ 28,003 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ವರದಿ ಮಾಡಿದೆ. ಒಟ್ಟು ಗುಣಮುಖರಾದ ರೋಗಿಗಳ ಸಂಖ್ಯೆ 3,712,668 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಪ್ರಸ್ತುತ 2,63,821 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 358 ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ಮಲೇಷ್ಯಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಸುದ್ದಿ ಓದಿ